ಹಾರ್ದಿಕ್ -ನತಾಶಾ ಡಿವೋರ್ಸ್ ವದಂತಿ! ವಿಚ್ಛೇದನವಾದ್ರೆ ನತಾಶಾಗೆ ಶೇ.70ರಷ್ಟು ಆಸ್ತಿ ಪಾಲು ನೀಡಬೇಕೇ ಪಾಂಡ್ಯ?

Hardik-Natasa News: ನತಾಶಾ ಸ್ಟಾಂಕೋವಿಕ್ ತನ್ನ ಇನ್‌’ಸ್ಟಾಗ್ರಾಂನಿಂದ 'ಪಾಂಡ್ಯ' ಎಂಬ ಉಪನಾಮವನ್ನು ತೆಗೆದುಹಾಕಿದ್ದಾರೆ. ಈ ಬಳಿಕ ವಿಚ್ಛೇದನ ವದಂತಿ ಹರಿದಾಡುತ್ತಿದೆ. ಅಲ್ಲದೆ, ಒಂದು ವೇಳೆ ಡಿವೋರ್ಸ್ ಆದಲ್ಲಿ ಹಾರ್ದಿಕ್ ಶೇ.70ರಷ್ಟು ಆಸ್ತಿ ಪಾಲನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದೂ ಹೇಳಲಾಗುತ್ತಿದೆ.

Written by - Bhavishya Shetty | Last Updated : May 25, 2024, 08:30 PM IST
    • ಐಪಿಎಲ್ 2024ರ ಸೀಸನ್’ನಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ತೋರಿದ್ದರು
    • ಇದಲ್ಲದೇ ಟೂರ್ನಿಯುದ್ದಕ್ಕೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು
    • ಇನ್‌’ಸ್ಟಾಗ್ರಾಂನಿಂದ 'ಪಾಂಡ್ಯ' ಎಂಬ ಉಪನಾಮವನ್ನು ತೆಗೆದುಹಾಕಿದ್ದಾರೆ
ಹಾರ್ದಿಕ್ -ನತಾಶಾ ಡಿವೋರ್ಸ್ ವದಂತಿ! ವಿಚ್ಛೇದನವಾದ್ರೆ ನತಾಶಾಗೆ ಶೇ.70ರಷ್ಟು ಆಸ್ತಿ ಪಾಲು ನೀಡಬೇಕೇ ಪಾಂಡ್ಯ?  title=
Hardik Pandya

Hardik-Natasa News: ಐಪಿಎಲ್ 2024ರ ಸೀಸನ್’ನಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ತೋರಿದ್ದರು. ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿದ್ದ ಪಾಂಡ್ಯ, 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರು.

ಇದಲ್ಲದೇ ಟೂರ್ನಿಯುದ್ದಕ್ಕೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯರನ್ನು ತಂಡದ ನಾಯಕರನ್ನಾಗಿ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಐಪಿಎಲ್ ನಂತರ ಇದೀಗ ಹಾರ್ದಿಕ್ ಮತ್ತು ಪತ್ನಿ ನತಾಶಾ ನಡುವೆ ವಿಚ್ಛೇದನದ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: ವಿರಾಟ್-ಅನುಷ್ಕಾ ತಮ್ಮ ಮೊಬೈಲ್’ನಲ್ಲಿ ಪರಸ್ಪರ ಹೆಸರನ್ನು ಹೇಗೆ ಸೇವ್ ಮಾಡಿಕೊಂಡಿದ್ದಾರೆ ಗೊತ್ತಾ? ತಿಳಿದ್ರೆ ನಕ್ಕು ನಕ್ಕು ಸುಸ್ತಾಗೋದು ಗ್ಯಾರಂಟಿ

ನತಾಶಾ ಸ್ಟಾಂಕೋವಿಕ್ ತನ್ನ ಇನ್‌’ಸ್ಟಾಗ್ರಾಂನಿಂದ 'ಪಾಂಡ್ಯ' ಎಂಬ ಉಪನಾಮವನ್ನು ತೆಗೆದುಹಾಕಿದ್ದಾರೆ. ಈ ಬಳಿಕ ವಿಚ್ಛೇದನ ವದಂತಿ ಹರಿದಾಡುತ್ತಿದೆ. ಅಲ್ಲದೆ, ಒಂದು ವೇಳೆ ಡಿವೋರ್ಸ್ ಆದಲ್ಲಿ ಹಾರ್ದಿಕ್ ಶೇ.70ರಷ್ಟು ಆಸ್ತಿ ಪಾಲನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಈ ವರದಿಗಳನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಹಾರ್ದಿಕ್ ಅಥವಾ ನತಾಶಾ ಯಾವುದೇ ಅಧಿಕೃತ ಹೇಳಿಕೆ ಕೂಡ ನೀಡಿಲ್ಲ. ಈ ನಡುವೆ ಹಾರ್ದಿಕ್ ಅವರ ಹಳೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ತಮ್ಮ ಆಸ್ತಿಯ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ”ತಾಯಿಯ ಹೆಸರಲ್ಲಿ ಎಲ್ಲವನ್ನೂ ಮಾಡುತ್ತಿದ್ದೇನೆ. ನನ್ನ ಖಾತೆಯಲ್ಲಿ, ನನ್ನ ತಂದೆಯ ಖಾತೆಯಲ್ಲಿ, ನನ್ನ ಸಹೋದರನ ಖಾತೆಯಲ್ಲಿ ತಾಯಿಯ ಹೆಸರು ಇದೆ. ಎಲ್ಲವೂ ಆಕೆಯ ಹೆಸರಿನಲ್ಲಿದೆ. ಕಾರಿನಿಂದ ಮನೆಯವರೆಗೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2024: ಪ್ಲೇಆಫ್ ಹಂತದಲ್ಲಿ ಸೋಲುಂಡು ಹೊರಬಿದ್ದ RCB ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ?

ಹಾರ್ದಿಕ್-ನತಾಶಾ ಸಂಬಂಧ

ಹಾರ್ದಿಕ್ ಪಾಂಡ್ಯ ಜನವರಿ 20, 2020 ರಂದು ನತಾಶಾ ಸ್ಟಾಂಕೋವಿಕ್‌’ಗೆ ಪ್ರಪೋಸ್ ಮಾಡಿದ್ದರು. ಅಷ್ಟೇ ಅಲ್ಲದೆ, ಮದುವೆಗೂ ಮುನ್ನ ನತಾಶಾ ಗರ್ಭಿಣಿಯಾಗಿದ್ದರು. ಜುಲೈ 30, 2020 ರಂದು ಈ ಜೋಡಿ ತಮ್ಮ ಮೊದಲ ಮಗು ಅಗಸ್ತ್ಯಗೆ ಪೋಷಕರಾಗಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News