ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್ )ನ ಮೊದಲ ಆವೃತ್ತಿಯಲ್ಲಿ ಹರ್ಭಜನ್ ಸಿಂಗ್ ತನ್ನ ಸಹ ಆಟಗಾರ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು, ಇದೀಗ ಹರ್ಭಜನ್ ತನ್ನ ತಪ್ಪನ್ನು ಒಪ್ಪಿಕೊಂಡು ಈ 'ಮುಜುಗರ'ಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ವಿಕ್ರಮ್ ಸಾಥಾಯೆ ಗ್ಲಾನ್ಸ್ ಲೈವ್ ಫೆಸ್ಟ್ನಲ್ಲಿ ಭಾಗವಹಿಸಿ ಮಾತನಾಡಿದ ಹರ್ಭಜನ್, ಅವತ್ತು ನಡೆದದ್ದು ತಪ್ಪಾಗಿದೆ. ನಾನು ತಪ್ಪು ಮಾಡಿದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೆ ಈಗ ತುಂಬಾ ಮುಜುಗರವಾಗಿದೆ''.
ಇದನ್ನೂ ಓದಿ : Ind vs SA : ಈ ಸ್ಫೋಟಕ ಆಟಗಾರನನ್ನು ಕಡೆಗಣಿಸಿದ ಟೀಂ ಇಂಡಿಯಾ, ರೋಹಿತ್ ನೀಡ್ತಾರಾ ಚಾನ್ಸ್?
“ನಾನು ಒಂದು ತಪ್ಪನ್ನು ಸರಿಪಡಿಸುವುದಕ್ಕೆ, ಮೈದಾನದಲ್ಲಿ ಶ್ರೀಶಾಂತ್ ಜೊತೆ ಹಾಗೆ ನಡೆದುಕೊಂಡೆ. ಹೀಗಾಗಬಾರದಿತ್ತು. ಘಟನೆ ನಂತರ ನಾನು ಅದರ ಬಗ್ಗೆ ಯೋಚಿಸಿದಾಗ ತುಂಬಾ ಪಶ್ಚಾತ್ತಾಪವಾಗಿದೆ' ಎಂದು ಹೇಳಿದ್ದಾರೆ.
Harbhajan Singh and sreesanth are together in this video and everyone is watching this and you all must watch this and i hope yoy will love this#BhajjiBoleSorrySreepic.twitter.com/nI7xTYpDjh
— Alpha king 👑 (@_ursbaby) June 4, 2022
ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ 2008 ರ ಐಪಿಎಲ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಶ್ರೀಶಾಂತ್ ಪಂದ್ಯದ ನಂತರದ ಅಳುತ್ತಿರುವುದನ್ನು ಮೊದಲು ಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗಿತ್ತು.
ಘಟನೆಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನಿಖೆಯನ್ನು ಪ್ರಾರಂಭಿಸಿತು ಮತ್ತು ಇದರ ಪರಿಣಾಮವಾಗಿ ಹರ್ಭಜನ್ ಅವರನ್ನು 5 ಓದಿ ಮ್ಯಾಚ್ ನಿಂದ ನಿಷೇಧಿಸಿತು.
No one guess about this controversy between Harbhajan Singh and Sreesanth will end with a simple sorry. #BhajjiBoleSorrySree pic.twitter.com/iLObrlM0i8
— Murtaza (@ItsMurtazakw) June 4, 2022
ಹರ್ಭಜನ್ ಕಳೆದ ವರ್ಷ ಡಿಸೆಂಬರ್ 2021 ರಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ದೇಶದ ಶ್ರೇಷ್ಠ ಆಫ್-ಸ್ಪಿನ್ನರ್ಗಳಲ್ಲಿ ಹರ್ಭಜನ್ ಕೂಡ ಒಬ್ಬರು. ಟೀಮ್ ಇಂಡಿಯಾಗಾಗಿ 367 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 711 ವಿಕೆಟ್ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ, ಶ್ರೀಶಾಂತ್ ಮೂರು ತಿಂಗಳ ಹಿಂದೆ ಮಾರ್ಚ್ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತರಾದರು. ಕೇರಳ ಮೂಲದ ಶ್ರೀಶಾಂತ್ 90 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 169 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ : Cricket: ಅಂತರರಾಷ್ಟ್ರೀಯ ಪಂದ್ಯದಲ್ಲಿ ಕೇವಲ 8 ರನ್ ಗಳಿಗೆ ಇಡೀ ತಂಡವೇ ಉಡಿಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ