ಕ್ರೀಡಾಪ್ರಿಯರಿಗೆ ಒಂದು ಗುಡ್ ನ್ಯೂಸ್....! ಆದರೆ ಷರತ್ತುಗಳು ಅನ್ವಯ..!

ನಾಲ್ಕನೇ ಹಂತದದ ಲಾಕ್ ಡೌನ್ ನ್ನು ಮೇ 31 ರ ವರೆಗೆ ವಿಸ್ತರಿಸಿದ ಬೆನ್ನಲ್ಲೇ ಕೆಲವು ನಿಯಮಗಳ ಸಡಿಲಿಕೆಯನ್ನು ಈ ಬಾರಿ ಜಾರಿಗೆ ತರಲಾಗಿದೆ. 

Last Updated : May 17, 2020, 09:09 PM IST
ಕ್ರೀಡಾಪ್ರಿಯರಿಗೆ  ಒಂದು ಗುಡ್ ನ್ಯೂಸ್....! ಆದರೆ ಷರತ್ತುಗಳು ಅನ್ವಯ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ನಾಲ್ಕನೇ ಹಂತದದ ಲಾಕ್ ಡೌನ್ ನ್ನು ಮೇ 31 ರ ವರೆಗೆ ವಿಸ್ತರಿಸಿದ ಬೆನ್ನಲ್ಲೇ ಕೆಲವು ನಿಯಮಗಳ ಸಡಿಲಿಕೆಯನ್ನು ಈ ಬಾರಿ ಜಾರಿಗೆ ತರಲಾಗಿದೆ. 

ಈಗ ವಿಷಯ ಏನಪ್ಪಾ ಅಂದ್ರೆ ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಂಗಳನ್ನು ಭಾನುವಾರ ತೆರೆಯಲು ಅನುಮತಿ ನೀಡಲಾಗಿದೆ, ಆದರೆ ಪ್ರೇಕ್ಷಕರಿಗೆ ಅವಕಾಶವಿಲ್ಲ ಎನ್ನಲಾಗಿದೆ. ಇದೆಲ್ಲದರೂ ನಡುವೆ ಈಗ ಸ್ಟೇಡಿಯಂನ್ನು ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ಬಹುಶಃ ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಕ್ರೀಡಾ ತರಬೇತಿಗಳಿಗೆ ಮತ್ತೆ ಚಾಲನೆ ಸಿಗಲಿದೆ.

'ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಾಗಳನ್ನು ತೆರೆಯಲು ಅನುಮತಿಸಲಾಗುವುದು, ಆದಾಗ್ಯೂ, ಪ್ರೇಕ್ಷಕರನ್ನು ಅನುಮತಿಸಲಾಗುವುದಿಲ್ಲ" ಎಂದು ಲಾಕ್ ಡೌನ್ ಸಮಯದಲ್ಲಿ ಅನುಸರಿಸಬೇಕಾದ ಗೃಹ ಸಚಿವಾಲಯದ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಲಾಕ್ ಡೌನ್ ಸೋಮವಾರ ಕೊನೆಗೊಳ್ಳಬೇಕಿತ್ತು, ಆದರೆ ಮೇ  31 ವರೆಗೆ ವಿಸ್ತರಿಸಲಾಗಿದೆ.

ಭಾರತವು ಈವರೆಗೆ 90,000 COVID-19ಪ್ರಕರಣಗಳನ್ನು ದಾಖಲಿಸಿದೆ, ಸುಮಾರು 3000 ಸಾವುಗಳು ಸಂಭವಿಸಿವೆ. ಕ್ರೀಡೆಯನ್ನು ದೊಡ್ಡ ಕೂಟದಲ್ಲಿ ಪರಿಗಣಿಸುವುದರಿಂದ ಕ್ರೀಡಾಚಟುವಟಿಗಳಿಗೆ ಇನ್ನು ಅವಕಾಶವಿಲ್ಲ ಎನ್ನಲಾಗಿದೆ.

ಈ ಸಮಯದಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್, ಇದು ಆರೋಗ್ಯ ಬಿಕ್ಕಟ್ಟಿನಿಂದಾಗಿ ಏಪ್ರಿಲ್ನಲ್ಲಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿತು. ಭಾನುವಾರ ಘೋಷಿಸಿದ ನಿಯಮ ಸಡಿಲಿಕೆ ಹೊರತಾಗಿ ಯಾವುದೇ ಈ ಟೂರ್ನಿ ನಡೆಯುವ ಯಾವುದೇ ಸಾಧ್ಯತೆಗಳು ಈಗ ಕಂಡು ಬರುತ್ತಿಲ್ಲ. 

Trending News