ತನ್ನ ದೇಶಕ್ಕಾಗಿ ಭರ್ಜರಿ ಬ್ಯಾಟಿಂಗ್ ಮಾಡ್ತಾನೆ, ಆದ್ರೆ RCBಗೆ ಬಂದ್ರೆ ರನ್ ಗಳಿಸೋಕೆ ಪರದಾಡ್ತಾನೆ! ಈ ವಿದೇಶಿ ಕ್ರಿಕೆಟಿಗನ ವಿರುದ್ಧ ಫ್ಯಾನ್ಸ್ ಗರಂ

IPL 2024: ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಸ್ಫೋಟಕ ಬ್ಯಾಟಿಂಗ್’ಗೆ ಹೆಸರುವಾಸಿ. ಮ್ಯಾಕ್ಸ್‌ವೆಲ್ ಇದುವರೆಗೆ ಆಸ್ಟ್ರೇಲಿಯಾ ಪರ 106 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 155.51 ಸ್ಟ್ರೈಕ್ ರೇಟ್ ಮತ್ತು 30.09 ಸರಾಸರಿಯೊಂದಿಗೆ 2468 ರನ್ ಗಳಿಸಿದ್ದಾರೆ.

Written by - Bhavishya Shetty | Last Updated : Apr 7, 2024, 02:35 PM IST
    • ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್
    • ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದ ಅದ್ಭುತ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು.
    • ಆದರೆ ಕೇವಲ ಒಂದು ರನ್ ಗಳಿಸಿ ಔಟಾದರು.
ತನ್ನ ದೇಶಕ್ಕಾಗಿ ಭರ್ಜರಿ ಬ್ಯಾಟಿಂಗ್ ಮಾಡ್ತಾನೆ, ಆದ್ರೆ RCBಗೆ ಬಂದ್ರೆ ರನ್ ಗಳಿಸೋಕೆ ಪರದಾಡ್ತಾನೆ! ಈ ವಿದೇಶಿ ಕ್ರಿಕೆಟಿಗನ ವಿರುದ್ಧ ಫ್ಯಾನ್ಸ್ ಗರಂ title=
RCB

IPL 2024: IPL ತಂಡಗಳು ವಿದೇಶಿ ಸ್ಟಾರ್ ಆಟಗಾರರನ್ನು ದೊಡ್ಡ ಮೊತ್ತಕ್ಕೆ ಹರಾಜಿನ ಮೂಲಕ ಖರೀದಿಸುತ್ತವೆ. ಕ್ರಿಕೆಟ್ ಮೈದಾನದಲ್ಲಿ ತಮ್ಮ ದೇಶಕ್ಕೆ ಅದ್ಭುತ ಪ್ರದರ್ಶನ ನೀಡಿರುವ ಆಟಗಾರರು, ಐಪಿಎಲ್’ನಲ್ಲೂ ಅಬ್ಬರಿಸುತ್ತಾರೆ ಎಂಬ ನಂಬಿಕೆ ಅದು. ಆದರೆ ಕೆಲವು ವಿದೇಶಿ ಆಟಗಾರರು ತಮ್ಮ ದೇಶದ ಪರ ಅಬ್ಬರಿಸಿದರೂ, ಐಪಿಎಲ್‌’ಗೆ ಬಂದ ನಂತರ ಅವರ ಫಾರ್ಮ್ ಕುಸಿಯುತ್ತದೆ.

ಇದನ್ನೂ ಓದಿ: Vinaya Prasad: ನಟಿ ವಿನಯಾ ಪ್ರಸಾದ್ ಮಗಳು ಕೂಡ ಜನಪ್ರಿಯ ಸ್ಯಾಂಡಲ್‌ವುಡ್‌ ತಾರೆ.. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರೆ ನಾಟ್ಯ ಮಯೂರಿ!!

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಸ್ಫೋಟಕ ಬ್ಯಾಟಿಂಗ್’ಗೆ ಹೆಸರುವಾಸಿ. ಮ್ಯಾಕ್ಸ್‌ವೆಲ್ ಇದುವರೆಗೆ ಆಸ್ಟ್ರೇಲಿಯಾ ಪರ 106 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 155.51 ಸ್ಟ್ರೈಕ್ ರೇಟ್ ಮತ್ತು 30.09 ಸರಾಸರಿಯೊಂದಿಗೆ 2468 ರನ್ ಗಳಿಸಿದ್ದಾರೆ. ಜೊತೆಗೆ ಟಿ20 ಅಂತಾರಾಷ್ಟ್ರೀಯ ಮಾದರಿಯಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಇನ್ನು 138 ಏಕದಿನ ಪಂದ್ಯಗಳಲ್ಲಿ 3895 ರನ್ ಗಳಿಸಿರುವ, ಅವರು 1 ದ್ವಿಶತಕ, 4 ಶತಕ ಮತ್ತು 23 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2024 ರಲ್ಲಿ ದಯನೀಯ ವೈಫಲ್ಯವನ್ನು ಕಂಡುಕೊಂಡಿದ್ದಾರೆ. ಐಪಿಎಲ್ 2024 ರಲ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2024 ರಲ್ಲಿ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, ಕೇವಲ 32 ರನ್ ಸೇರಿಸಿದ್ದಾರೆ. ಈ 5 ಐಪಿಎಲ್ ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 0, 3, 28, 0, 1 ರನ್ ಗಳಿಸಿದ್ದಾರೆ.

ಇದನ್ನೂ ಓದಿ: Srirasthu Shubhamasthu: ಅಮ್ಮನಿಗೆ ಡ್ರೈವಿಂಗ್ ಕಲಿಸಲು ಗುರುವಾಗಿ ಬಂದ ಮಗ ಸಮರ್ಥ್!‌

ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದ ಅದ್ಭುತ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ಕೇವಲ ಒಂದು ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 6 ವಿಕೆಟ್‌’ಗಳಿಂದ ಸೋಲನುಭವಿಸಬೇಕಾಯಿತು. ವಿರಾಟ್ ಕೊಹ್ಲಿಗೆ ಬೆಂಬಲ ನೀಡುತ್ತಲೇ ಗ್ಲೆನ್ ಮ್ಯಾಕ್ಸ್ ವೆಲ್ ಸ್ಫೋಟಕ ಇನ್ನಿಂಗ್ಸ್ ಆಡಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಬಹುದಿತ್ತು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News