ಅಮೇರಿಕಾದಲ್ಲಿ ನಡೆಯತ್ತಿದ್ದ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿ ಸಂದರ್ಭದಲ್ಲಿ ಟೆನ್ನಿಸ್ ಆಟಗಾರ್ತಿ ಕ್ರೀಡಾಂಗಣದಲ್ಲೇ ಬಟ್ಟೆ ಬದಲಿಸಿದ ಘಟನೆ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮಂಗಳವಾರ ನಡೆದ ಯುಎಸ್ ಟೆನಿಸ್ ಟೂರ್ನಿಯಲ್ಲಿ ಆಟಗಾರರಿಗೆ 10 ನಿಮಿಷಗಳ ಕಾಲ ಪಂದ್ಯದ ಮಧ್ಯೆ ವಿಶ್ರಾಂತಿ ನೀಡಲಾಗಿತ್ತು. ಆ ವಿಶ್ರಾಂತಿ ಸಮಯದ ಬಳಿಕ ಮೈದಾನಕ್ಕೆ ಬಂದ ಫ್ರೆಂಚ್ ಟೆನ್ನಿಸ್ ತಾರೆ ಅಲೈಜ್ ಕಾರ್ನೆಟ್ ಅವರು ಟೀ ಶರ್ಟ್ ಉಲ್ಟಾ ಹಾಕಿಕೊಂಡು ಬಂದಿದ್ದು ತಿಳಿದು, ಮೈದಾನದಲ್ಲೇ ಟೀ ಶರ್ಟ್ ಬಿಚ್ಚಿ ಬದಲಿಸಿಕೊಂಡಿದ್ದಾರೆ. ಅಲ್ಲದೆ, ಟೆನಿಸ್ ಆಟಗಾರ್ತಿಯ ಈ ನಡೆಯ ಬಗ್ಗೆ ಅಲ್ಲಿದ್ದ ಅಂಪೈರ್ ಆಕ್ಷೇಪ ಕೂಡ ವ್ಯಕ್ತಪಡಿಸಿ, ಇದು ನಿಯಮಬಾಹಿರ ಎಂದಿದ್ದರು. ಇದೀಗ ಈ ವೀಡಿಯೋ ಸಖತ್ ವೈರಲ್ ಆಗಿದೆ.
Cornet( info - @nicklester , @BenRothenberg,@ymanojkumar)(🎥Eurosport) pic.twitter.com/RlfQT3t77a
— doublefault28 (@doublefault28) August 28, 2018
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಪ್ರಕಟಣೆ ಹೊರಡಿಸಿರುವ ಯುಎಸ್ ಓಪನ್, ಡ್ರೆಸ್ ಕೋಡ್ ಬಗ್ಗೆ ವಿವರಿಸಿದೆ. "ಎಲ್ಲಾ ಆಟಗಾರರೂ ತಮ್ಮ ಕುರ್ಚಿಯಲ್ಲಿ ಕುಳಿತಾಗ ತಮ್ಮ ಶರ್ಟ್'ಗಳನ್ನೂ ಬದಲಿಸಬಹುದು. ಇದರಿಂದ ವಸ್ತ್ರ ಸಂಹಿತೆ ಉಲ್ಲಂಘನೆಯಾಗುವುದಿಲ್ಲ. ಆದರೆ, ಈ ಘಟನೆ ಆಟದ ಆರಂಭದಲ್ಲಿ ನಡೆದಿದೆ. ಆದರೆ ಅಕೆಗೆ ಯಾವುದೇ ದಂಡ ಅಥವಾ ಶಿಕ್ಷೆ ವಿಧಿಸಿಲ್ಲ. ಮುಂದೆ ಇಂತಹ ಘಟನೆ ಪುನರಾವರ್ತನೆಯಾಗದಂತೆ ಎಚ್ಹರಿಕೆ ನೀಡಲಾಗಿದೆ" ಎಂದು ಹೇಳಿದೆ.