ಮಾಸ್ಕೋ: ರಷ್ಯಾದ ಮಾಸ್ಕೋದಲ್ಲಿ ನಡೆದ ಫಿಪಾ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಕ್ರೋಷಿಯಾ ತಂಡವನ್ನು 4- 2 ಗೋಲುಗಳ ಅಂತರದಲ್ಲಿ ಸೋಲಿಸಿ ವಿಶ್ವಕಪ್ ನ್ನು ಗೆದ್ದಿದೆ.
#FRA are the raining/reigning #WorldCup champions!
Sorry/not sorry about that pun. ☔️ pic.twitter.com/FAWosoP8lX
— FIFA World Cup (@FIFAWorldCup) July 15, 2018
ಭಾನುವಾರ ಭಾರಿ ಕೂತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಪ್ರಾರಂಭದಿಂದಲೂ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತು. ಪಂದ್ಯದ ಮೊದಲಾರ್ದದಲ್ಲಿ 2-1ರಲ್ಲಿ ಮುನ್ನಡೆಯನ್ನು ಸಾಧಿಸಿದ ಫ್ರಾನ್ಸ್ ತಂಡವು ನಂತರವೂ ಕೂಡ ಭರ್ಜರಿ ಪ್ರದರ್ಶನವನ್ನು ನೀಡಿತು. ಇನ್ನೊಂದೆಡೆ ಕ್ರೋಷಿಯಾ ತಂಡವು ಉತ್ತಮ ಪೈಪೋಟಿ ನೀಡಿದರೂ ಸಹಿತ, ತಾನು ಮಾಡಿದ್ದ ಹಲವು ತಪ್ಪುಗಳನ್ನು ಫ್ರಾನ್ಸ್ ಸರಿಯಾಗಿ ಬಳಸಿಕೊಂಡಿತು.
ಆ ಮೂಲಕ ಎರಡನೇಯ ಬಾರಿಗೆ ಫಿಫಾ ವಿಶ್ವಕಪ್ ಕಿರಿಟವನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ 1998ರಲ್ಲಿ ಫ್ರಾನ್ಸ್ ತಂಡವು ಮೊದಲ ಬಾರಿಗೆ ವಿಶ್ವಕಪ್ ಕೀರಿಟವನ್ನು ಗೆದ್ದಿತ್ತು ಈಗ ಅದಾದ ಎರಡು ದಶಕಗಳ ನಂತರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.ಈ ಹಿಂದೆ 2006ರಲ್ಲಿ ಪ್ರಶಸ್ತಿ ಸನಿಹ ಬಂದಿದ್ದರೂ ಸಹಿತ ಅದು ಕೇವಲ ರನ್ನರ್ ಅಪ್ ಗೆ ಮಾತ್ರ ತೃಪ್ತಿಪಟ್ಟುಕೊಂಡಿತ್ತು.
ಫ್ರಾನ್ಸ್ ತಂಡ ಗೋಲುಗಳು:
ಮಾರಿಯೊ ಮಂಡ್‌ಜುಕಿಚ್ - 18ನೇದಲ್ಲಿ ನಿಮಿಷ (ಸ್ವಂತ ಗೋಲು)
ಆಂಟೊನಿ ಗ್ರೀಜ್‌ಮನ್ - 38ನೇ ನಿಮಿಷ (ಪೆನಾಲ್ಕಿ ಕಿಕ್)
ಪೌಲ್ ಪೊಗ್ಬ - 59ನೇ ನಿಮಿಷದಲ್ಲಿ
ಕೈಲಿಯನ್ ಮಾಪೆ - 65ನೇ ನಿಮಿಷದಲ್ಲಿ
ಕ್ರೊಯೇಷ್ಯಾ ತಂಡದ ಗೋಲುಗಳು:
ಇವಾನ್ ಪೆರಿಸಿಚ್ - 28ನೇ ನಿಮಿಷದಲ್ಲಿ
ಮಾರಿಯೊ ಮಂಡ್‌ಜುಕಿಚ್ - 69ನೇ ನಿಮಿಷ
ಚಿನ್ನದ ಬಾಲ್: ಲೂಕಾ ಮಾಡ್ರಿಚ್ (ಕ್ರೊಯೇಷ್ಯಾ)
ಚಿನ್ನದ ಬೂಟ್: ಹ್ಯಾರಿ ಕೇನ್ (ಇಂಗ್ಲೆಂಡ್)
ಯುವ ಆಟಗಾರ: ಮಾಪೆ (ಫ್ರಾನ್ಸ್)
ಚಿನ್ನದ ಗ್ಲೌ: ತಿಬೌಟ್ ಕೋರ್ಟಿಯಸ್ (ಬೆಲ್ಜಿಯಂ)