IPL ಆರಂಭಕ್ಕೆ ದಿನಗಣನೆ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗನ ಕಾರು ಭೀಕರ ಅಪಘಾತ: ಆಟಗಾರ ಆಸ್ಪತ್ರೆಗೆ ದಾಖಲು

Lahiru Thirimanne Car Accident: ಅಪಘಾತ ಸ್ಥಳದಲ್ಲೇ ಇದ್ದ ಜನರು ತಕ್ಷಣ ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಾರಿನ ಭಯಾನಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಸಂಪೂರ್ಣ ವಾಹನ ಜಖಂಗೊಂಡಿದೆ.

Written by - Bhavishya Shetty | Last Updated : Mar 14, 2024, 05:39 PM IST
    • ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಲಹಿರು ತಿರಿಮನ್ನೆ
    • ತಕ್ಷಣ ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ
    • ಅದೃಷ್ಟವಶಾತ್ ಲಹಿರು ತಿರಿಮನ್ನೆ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ
IPL ಆರಂಭಕ್ಕೆ ದಿನಗಣನೆ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗನ ಕಾರು ಭೀಕರ ಅಪಘಾತ: ಆಟಗಾರ ಆಸ್ಪತ್ರೆಗೆ ದಾಖಲು title=
Lahiru Thirimanne car accident

Lahiru Thirimanne Car Accident: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಲಹಿರು ತಿರಿಮನ್ನೆ ಕಾರು ಅಪಘಾತಕ್ಕೀಡಾಗಿದೆ. ಅನುರಾಧಪುರದ ತಿರಪನ್ನೆ ಬಳಿ ಈ ದುರ್ಘಟನೆ ನಡೆದಿದ್ದು, ಕಾರು ಮಿನಿ ಟ್ರಕ್‌’ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ದುರ್ಘಟನೆಯನ್ನು ಕಂಡ ಜನ, ರಿಷಬ್ ಪಂತ್ ಅಪಘಾತವನ್ನು ನೆನೆಪಿಸಿಕೊಂಡಿದ್ದಾರೆ.

ಇದನ್ನೂ ಓದಿ: RCB ಸೇರಿದ್ರಾ ಜೋಫ್ರಾ ಆರ್ಚರ್! ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದೇಕೆ ಇಂಗ್ಲೆಂಡ್ ವೇಗಿ?

ಅಪಘಾತ ಸ್ಥಳದಲ್ಲೇ ಇದ್ದ ಜನರು ತಕ್ಷಣ ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಾರಿನ ಭಯಾನಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಸಂಪೂರ್ಣ ವಾಹನ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಲಹಿರು ತಿರಿಮನ್ನೆ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಲಹಿರು ತಿರಿಮನೆ ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಪರ ಆಡುತ್ತಿದ್ದಾರೆ. ವಾಹನದಲ್ಲಿ ತಿರಿಮನೆ ಅವರ ಕುಟುಂಬದವರೂ ಇದ್ದರು ಎಂದು ಹೇಳಲಾಗುತ್ತಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಮತ್ತು ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ನ್ಯೂಯಾರ್ಕ್ ಸ್ಟ್ರೈಕರ್ಸ್ ಹೇಳಿಕೆ ನೀಡಿದೆ.

ಲಹಿರು ತಿರಿಮನೆ ಅವರ ಕಾರು ಅಪಘಾತವನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ನೆನಪಿಸಿಕೊಂಡಿದ್ದಾರೆ. ಡಿಸೆಂಬರ್ 30, 2022 ರಂದು ಪಂತ್ ಕಾರು ಅಪಘಾತಕ್ಕೀಡಾಗಿತ್ತು.

ಇದನ್ನೂ ಓದಿ: ಅಭ್ಯಾಸ ಆರಂಭಿಸಿದ RCB: ಹಾಗಾದ್ರೆ ವಿರಾಟ್ ತಂಡ ಸೇರೋದು ಯಾವಾಗ? ಹೊರಬಿತ್ತು ಬಿಗ್ ಅಪ್ಡೇಟ್

2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ

ಲಹಿರು ತಿರಿಮನೆ ವಿಶ್ವಕಪ್ 2023ರ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿ ಹೊಂದಿದ್ದರು. ಈ ಎಡಗೈ ಆಟಗಾರ ಕಳೆದ ಒಂದು ವರ್ಷದಿಂದ ತಂಡದಿಂದ ನಿರ್ಲಕ್ಷಿಸಲ್ಪಟ್ಟಿದ್ದು, ಇದಾದ ಬಳಿಕ ನಿವೃತ್ತಿ ಘೋಷಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News