ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಶನಿವಾರದಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ತಂಡದ ನೂತನ ನಾಯಕನನ್ನಾಗಿ ಹೆಸರಿಸಿದೆ.
ಕಳೆದ ವರ್ಷ ಆರ್‌ಸಿಬಿ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿಯಿಂದ ಫಾಫ್ (Faf du Plessis) ಅಧಿಕಾರ ವಹಿಸಿಕೊಂಡಿದ್ದು, 2022 ರ ಆವೃತ್ತಿಯಲ್ಲಿ ಫ್ರಾಂಚೈಸಿಗೆ ಮೊದಲ ಪ್ರಶಸ್ತಿಯನ್ನು ಗೆಲ್ಲುವ ಭರವಸೆಯಲ್ಲಿದ್ದಾರೆ.ಐಪಿಎಲ್‌ನಲ್ಲಿ ಫಾಫ್ 100 ಪಂದ್ಯಗಳಲ್ಲಿ, 2935 ರನ್ ಗಳಿಸಿದ್ದಾರೆ.ಅದರಲ್ಲಿ 22 ಅರ್ಧಶತಕಗಳೊಂದಿಗೆ 131.08 ಸ್ಟ್ರೈಕ್ ರೇಟ್‌ನ್ನು ಹೊಂದಿದ್ದಾರೆ.
The Leader of the Pride is here!
Captain of RCB, @faf1307! 🔥#PlayBold #RCBCaptain #RCBUnbox #ForOur12thMan #UnboxTheBold pic.twitter.com/UfmrHBrZcb
— Royal Challengers Bangalore (@RCBTweets) March 12, 2022
ಐಪಿಎಲ್ 2021 ರ ಆವೃತ್ತಿಯಲ್ಲಿ ದುಪ್ಲೇಸಿಸ್ ಅವರು ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು,ಅವರು ಅಂತಿಮ ಪಂದ್ಯದಲ್ಲಿ 59 ಎಸೆತಗಳಲ್ಲಿ 86 ರನ್ ಗಳಿಸುವ ಮೂಲಕ ಚೆನ್ನೈ ತಂಡವು ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.
ಈಗ ಆರ್ಸಿಬಿ ತಂಡದ ನಾಯಕನಾಗಿ ನೇಮಕ ಮಾಡಿದ್ದಕ್ಕೆ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ."ನಾನು RCB ನಾಯಕನಾಗಿ ಮೊದಲ ಮತ್ತು ಅಗ್ರಗಣ್ಯವಾಗಿ ಆಟಗಾರರೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತೇನೆ." ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.