/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ರಾಹುಲ್ ದ್ರಾವಿಡ್ ನಿಸ್ವಾರ್ಥ ಕ್ರಿಕೆಟಿಗರಾಗಿದ್ದರು, ತಂಡವು ಬಯಸಿದಾಗ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದರು.ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡಕ್ಕೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಗತ್ಯವಿದ್ದಾಗ, ದ್ರಾವಿಡ್  ಕೀಪಿಂಗ್ ಉಸ್ತುವಾರಿಯನ್ನು ವಹಿಸಿಕೊಂಡರು ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ 2003 ರ ವಿಶ್ವಕಪ್ ಅಭಿಯಾನದಲ್ಲಿ ಅವರು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದರು.

ಇದರಿಂದಾಗಿ ಭಾರತಕ್ಕೆ ಹೆಚ್ಚುವರಿ ಬೌಲರ್ ಹಾಗೂ ಬ್ಯಾಟ್ಸಮನ್ ಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಈಗ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಬಂದಿದೆ.ಒಂದೆಡೆ ರಿಶಬ್ ಪಂತ್ ಅವರ ಸ್ಥಾನಕ್ಕೆ ಸೂಕ್ತ ಎಂದರೂ ಕೂಡ ಅವರು ಉತ್ತಮ ಫಾರ್ಮ್ ಕಂಡುಕೊಳ್ಳದೆ ಇರುವುದು ನಿಜಕ್ಕೂ ತಲೆನೋವಾಗಿ ಪರಿಣಮಿಸಿದೆ.

ಕೆ.ಎಲ್.ರಾಹುಲ್ ಗೆ ಕ್ಷಮೆ ಕೋರಿರುವುದಾಗಿ ಹೇಳಿದ ಗ್ಲೆನ್ ಮ್ಯಾಕ್ಸ್ ವೆಲ್ ...!

ಇಂತಹ ಸಂದರ್ಭದಲ್ಲಿ ಈಗ ಕನ್ನಡಿಗರಾಗಿರುವ ಕೆ.ಎಲ್ ರಾಹುಲ್ ಈಗ ಬ್ಯಾಟಿಂಗ್ ಮತ್ತು ಕೀಪಿಂಗ್ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ.ಅದು ಏಕದಿನವಾಗಿರಲಿ ಅಥವಾ ಟಿ 20 ಆಗಿರಲಿ ಎರಡರಲ್ಲಿಯೂ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಈಗ ಈ ವಿಚಾರವಾಗಿ ಮಾತನಾಡಿದ ಮೊಹಮ್ಮದ್ ಕೈಫ್ ಕೆ.ಎಲ್.ರಾಹುಲ್  'ದಿ ವಾಲ್' ದ್ರಾವಿಡ್ ಅನ್ನು ನೆನಪಿಸುತ್ತಾನೆ ಎಂದು ಹೇಳಿದ್ದಾರೆ.

ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ಗೆ ಆಯ್ಕೆಯಾಗಿದ್ದಕ್ಕೆ ಮಂಜ್ರೆಕರ್ ಗೆ ಸಿಟ್ಟು , ಬಾಂಬೆ ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದ ಈ ಆಟಗಾರ..!

ಕೆ.ಎಲ್ ರಾಹುಲ್ ನನಗೆ ರಾಹುಲ್ ದ್ರಾವಿಡ್ ಅನ್ನು ನೆನಪಿಸುತ್ತಾನೆ.ಅವರು ಐದನೇ ಸ್ಥಾನದಲ್ಲಿ ಆಡಲು ಹೇಳಿದರೆ, ಅದನ್ನು ನಿರ್ವಹಿಸುತ್ತಾರೆ ಒಂದು ವೇಳೆ ಇನಿಂಗ್ಸ್ ಆರಂಭಿಸಬೇಕೆಂದರೆ ಆ ಕೆಲಸವನ್ನು ಸಹ ಮಾಡುತ್ತಾರೆ.ಅಷ್ಟೇ ಅಲ್ಲದೆ ತಂಡದ ನಾಯಕನಾಗಿ ಕೂಡ ಜವಾಬ್ದಾರಿ ವಹಿಸುತ್ತಾರೆ.ಕೆ.ಎಲ್. ರಾಹುಲ್ ಅವರಂತಹ ಆಟಗಾರರು ಸಂಪೂರ್ಣವಾಗಿ ತಂಡಕ್ಕಾಗಿ ಅರ್ಪಿಸಿಕೊಂಡಿದ್ದಾರೆ, ಅಂತ ಆಟಗಾರರು ಸಿಗುವುದು ಬಹಳ ಕಡಿಮೆ ಎಂದು ಅವರು ಹೇಳಿದರು.

IPL 2020: ಎಂಟು ವರ್ಷದ ಸಚಿನ್ ದಾಖಲೆ ಮುರಿದ ಕನ್ನಡಿಗ ಕೆ.ಎಲ್.ರಾಹುಲ್

ಡಿಸೆಂಬರ್ 4 ರ ಆಸ್ಟ್ರೇಲಿಯಾ ವಿರುದ್ಧದ 1ನೇ ಟಿ 20 ಯಲ್ಲಿ ಭಾರತದ ಗೆಲುವಿನಲ್ಲಿ ರಾಹುಲ್ (51) ಪ್ರಮುಖ ಪಾತ್ರವಹಿಸಿದರು. ಈ ಕುರಿತಾಗಿ ಮಾತನಾಡಿದ ಕೈಫ್ 'ಇದು ಪರಿಪೂರ್ಣ ಇನ್ನಿಂಗ್ಸ್ ಎಂದು ನಾನು ಭಾವಿಸುತ್ತೇನೆ.ಅವರು ಉತ್ತಮವಾಗಿ ಪ್ರಾರಂಭಿಸಿದರು ಮತ್ತು ನಂತರ ಅವರು 80-90 ರನ್ ಗಳಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ಅವರು ಔಟಾದರು. ಆದರೆ ಒಟ್ಟಾರೆಯಾಗಿ, ಇದು ಉತ್ತಮ ಇನ್ನಿಂಗ್ಸ್ ಆಗಿದ್ದು, ಅವರು ಪರಿಸ್ಥಿತಿ ಆಧಾರದ ಮೇಲೆ ಬ್ಯಾಟಿಂಗ್ ಮಾಡಿದರು. ಅವರು ಬಯಸಿದಾಗಲೆಲ್ಲಾ ದೊಡ್ಡ ಹೊಡೆತಗಳನ್ನು ಹೊಡೆಯಬಹುದು ಆದರೆ ವಿಕೆಟ್ ಬಿಳುತ್ತಿದ್ದರಿಂದ ಅವರು ಜವಾಬ್ದಾರಿಯುತವಾಗಿ ಆಡಿದರು ಎಂದು ಕೈಫ್ ರಾಹುಲ್ ರನ್ನು ಶ್ಲಾಘಿಸಿದರು.

 

Section: 
English Title: 
former Indian cricketer Mohammad Kaif feels KL Rahul reminds him a lot of 'The Wall' Rahul Dravid
News Source: 
Home Title: 

ಈ ಭಾರತೀಯ ಆಟಗಾರ 'ದಿ ವಾಲ್' ರಾಹುಲ್ ದ್ರಾವಿಡ್ ಇದ್ದಂತೆ ಎಂದ ಕೈಫ್...!

ಈ ಭಾರತೀಯ ಆಟಗಾರ 'ದಿ ವಾಲ್' ರಾಹುಲ್ ದ್ರಾವಿಡ್ ಇದ್ದಂತೆ ಎಂದ ಕೈಫ್...!
Yes
Is Blog?: 
No
Tags: 
Facebook Instant Article: 
Yes
Mobile Title: 
ಈ ಭಾರತೀಯ ಆಟಗಾರ 'ದಿ ವಾಲ್' ರಾಹುಲ್ ದ್ರಾವಿಡ್ ಇದ್ದಂತೆ ಎಂದ ಕೈಫ್...!
Publish Later: 
No
Publish At: 
Saturday, December 5, 2020 - 17:35
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
6