IPL 2020: ಈ ಆವೃತ್ತಿಯ ಐಪಿಎಲ್ ನಲ್ಲಿ ಬ್ರೆಟ್ ಲಿ ಗಮನ ಸೆಳೆದ ಈ ಇಬ್ಬರು ಆಟಗಾರರು ಯಾರು ಗೊತ್ತೇ ?

ದುಬೈನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಐದನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

Last Updated : Nov 11, 2020, 11:14 PM IST
IPL 2020: ಈ ಆವೃತ್ತಿಯ ಐಪಿಎಲ್ ನಲ್ಲಿ ಬ್ರೆಟ್ ಲಿ ಗಮನ ಸೆಳೆದ ಈ ಇಬ್ಬರು ಆಟಗಾರರು ಯಾರು ಗೊತ್ತೇ ? title=
file photo

ನವದೆಹಲಿ: ದುಬೈನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಐದನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಈ ಟೂರ್ನಿಯುದ್ದಕ್ಕೂ ಕೆ.ಎಲ್.ರಾಹುಲ್, ಶಿಖರ್ ಧವನ್, ಡೇವಿಡ್ ವಾರ್ನರ್, ಕಗಿಸೊ ರಬಾಡಾ, ಜಸ್ಪಿರ್ತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರಿಂದ ಕೆಲವು ಸ್ಮರಣೀಯ ಪ್ರದರ್ಶನಗಳು ಇದ್ದವು.ಇದರ ಜೊತೆಗೆ ಅಚ್ಚರಿ ಎನ್ನುವಂತೆ ಕೆಲವು ಅದ್ಬುತ ಪ್ರತಿಭೆಗಳು ಸಹಿತ ಹೊರಬಂದಿವೆ.

ಎಬಿಡಿ ವಿಲಿಯರ್ಸ್ ಪ್ರಕಾರ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ತಂಡ ಯಾವುದು ಗೊತ್ತೇ ?

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರಿಗೆ ಈ ಆವೃತ್ತಿಯ ಟೂರ್ನಿಯಲ್ಲಿ  ಹೆಚ್ಚು ಪ್ರಭಾವಿಸಿದ ಸಂಗತಿ ಏನು ಎನ್ನುವ ಪ್ರಶ್ನೆಯನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು ಇದು ಅದ್ಬುತವಾಗಿತ್ತು,ಆದರೆ ನನಗೆ, ಈ ಋತುವಿನ ಉತ್ತಮ ಭಾಗವೆಂದರೆ ಯುವ ಭಾರತೀಯ ಆಟಗಾರರು. ಎಂದು ಹೇಳಿದರು. ವಿಶೇಷವಾಗಿ ಅವರು ಆರ್‌ಸಿಬಿ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮತ್ತು ರಾಜಸ್ಥಾನ್ ರಾಯಲ್ಸ್‌ನ ರಾಹುಲ್ ತಿವಾಟಿಯಾ ಅವರನ್ನು ಈ ಋತುವಿನ ಪ್ರಮುಖ ಅಂಶಗಳೆಂದು ಲೀ ಉಲ್ಲೇಖಿಸಿದ್ದಾರೆ.

IPL 2020: ಅತ್ಯಧಿಕ ರನ್ ಗಳೊಂದಿಗೆ ಕಿತ್ತಳೆ ಕ್ಯಾಪ್ ಗೆದ್ದ ಕನ್ನಡಿಗ ಕೆ.ಎಲ್ ರಾಹುಲ್

ದೇವದತ್ ಪಡಿಕ್ಕಲ್ಸ್, ತಿವಾಟಿಯಾಸ್...ದೆಹಲಿ ಕ್ಯಾಪಿಟಲ್ಸ್ ಕೆಲವು ಉತ್ತಮ ಕ್ರಿಕೆಟ್ ಆಡುವುದನ್ನು ನಾವು ನೋಡಿದ್ದೇವೆ, ಆದ್ದರಿಂದ, ನಾನು ವೇಗದ ಬೌಲರ್‌ಗಳನ್ನು ಸಹ ಹೇಳುತ್ತೇನೆ, ಆದರೆ ನಾನು ಯಾವಾಗಲೂ ವೇಗದ ಬೌಲರ್‌ಗಳನ್ನು ಹೇಳುತ್ತೇನೆ ಎಂದು ಲೀ ಹೇಳಿದರು.

ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ ಪಡಿಕ್ಕಲ್‌ಗೆ ಐಪಿಎಲ್ 2020 ರ ಉದಯೋನ್ಮುಖ ಆಟಗಾರ ಪ್ರಶಸ್ತಿ ನೀಡಲಾಯಿತು.15 ಪಂದ್ಯಗಳಲ್ಲಿ, ಅವರು ಐದು ಅರ್ಧಶತಕಗಳನ್ನು ಒಳಗೊಂಡಂತೆ 473 ರನ್ ಗಳಿಸಿ ಆರ್ ಸಿಬಿ ಪರವಾಗಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾದರು.

Trending News