ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಫಿಟ್ನೆಸ್ ಕೋಚ್..!

Written by - CHARITHA PATEL | Edited by - Manjunath Naragund | Last Updated : Mar 29, 2022, 08:56 PM IST
  • ಅವರು ಎಲ್ಲಾ ಅಂತರರಾಷ್ಟ್ರೀಯ ಫಿಟ್ನೆಸ್ ಬ್ರ್ಯಾಂಡ್ಗಳೊಂದಿಗೆ ಈಗಾಗಲೆ ಸಹಭಾಗಿತ್ವದಲ್ಲಿ ಕೆಲಸ ಮಾಡಿರುವ ಗರಿಮೆ ಕೂಡ ಅವರಿಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಫಿಟ್ನೆಸ್ ಕೋಚ್..! title=

ನಮ್ಮ ದೇಸಿ ಪ್ರತಿಭೆಯೊಂದು ಈಗ ತಮ್ಮ ವೈಯಕ್ತಿಕ ಸಾಧನೆಗಳ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕನ ಕಥೆಯಿದು.

ಹೌದು, ಈಗ ನಾವು ಹೇಳ್ತಾಯಿರೋದು ಸವೀನ್ ಅನ್ನೋ ಅಪ್ಪಟ ದೇಸಿ ಪ್ರತಿಭೆ ಬಗ್ಗೆ. ಸವೀನ್.ವಿ ಎಂಬ ಈ ಪ್ರತಿಭೆ ಮೂಲತಃ ನೆರೆ ರಾಜ್ಯ ಕೇರಳದವರು..ಆದ್ರೆ ಹುಟ್ಟಿ ಬೆಳೆದಿದ್ದೆಲ್ಲವು ಕೂಡ ಒರಿಸ್ಸಾದಲ್ಲಿ, ಆದ್ರೂ ಅವರ  ತಾಯ್ನಾಡಿನ ಬಗೆಗಿನ ಪ್ರೀತಿ ಮತ್ತು ಗೌರವ ಕಿಂಚಿತ್ತೂ ಕರಗಿಲ್ಲ. ಅಷ್ಟಕ್ಕೂ ಸವೀನ್ ಸಾಧನೆ ಮಾಡಿರೋದು ಯಾವ ಕ್ಷೇತ್ರದಲ್ಲಿ ಗೊತ್ತಾ ? ಅದು ಫಿಟ್ನೆಸ್ ಕ್ಷೇತ್ರದಲ್ಲಿ..! 

ಹೌದು, ಕಳೆದ 22 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ತಮ್ಮ ಫಿಟ್ನೆಸ್ ವೃತ್ತಿಜೀವನವನ್ನು ಪ್ರಾರಂಭಿಸಿದ ಸವೀನ್ ,ಅಲ್ಲಿಂದ ಇಲ್ಲಿವರೆಗಿನ ಅವರ ಸುದೀರ್ಘ ಫಿಟ್ನೆಸ್ ಬಗೆಗಿನ ಪಯಣ ಅವರ ಇಂದಿನ ಈ ಮಹತ್ವದ ಸಾಧನೆಗೆ ಕಾರಣವಾಗಿದೆ. ಅವರು ಎಲ್ಲಾ ಅಂತರರಾಷ್ಟ್ರೀಯ ಫಿಟ್ನೆಸ್ ಬ್ರ್ಯಾಂಡ್ಗಳೊಂದಿಗೆ ಈಗಾಗಲೆ ಸಹಭಾಗಿತ್ವದಲ್ಲಿ ಕೆಲಸ ಮಾಡಿರುವ ಗರಿಮೆ ಕೂಡ ಅವರಿಗಿದೆ.

ಇದನ್ನೂ ಓದಿ: Garadi Shoot In Badami: ಬಾದಾಮಿಯಲ್ಲಿ ಯೋಗರಾಜ್ ಭಟ್ಟರ "ಗರಡಿ"

ಆರಂಭದಲ್ಲಿ ಅವರು 2014ರಲ್ಲಿ ಫಿಟ್ ಸ್ಟುಡಿಯೋ ಎನ್ನುವ  ತಮ್ಮ ಸ್ವಂತ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದರು. ಆ ಮೂಲಕ ದೇಹದಾರ್ಢ್ಯದಲ್ಲಿ ಹೊಂದಿ ಸಾಧನೆ ಮಾಡಬೇಕೆಂದು ಕನಸು ಕಂಡ ಎಷ್ಟೋ ಯುವಕರಿಗೆ, ಕ್ರೀಡಾಪಟುಗಳಿಗೆ ಅಷ್ಟೇ ಏಕೆ ಸಿನಿಮಾ ತಾರೆಯರಿಗೆ ಕೂಡ ಇವರು ಅಚ್ಚುಮೆಚ್ಚಿನ ಕೋಚ್ ಎಂದರೆ ತಪ್ಪಾಗೋದಿಲ್ಲ..!

ಈಗಾಗಲೇ ಅವರು ಅಂತರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ,ಅತ್ಯುತ್ತಮ ವೈಯಕ್ತಿಕ ತರಬೇತುದಾರರಾಗಿ ಜೊತೆಗೆ 2019 ರಲ್ಲಿ ಭಾರತದ ಅತ್ಯುತ್ತಮ ಫಿಟ್ನೆಸ್ ತರಬೇತುದಾರರ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆ ಅವರದ್ದಾಗಿದೆ.ಪ್ರಸ್ತುತ ಇದೀಗ ಅವರು ಬೆಂಗಳೂರಿನ ಜಯನಗರದಲ್ಲಿ ರೂಪಾಂತರ ಮತ್ತು ಪುನರ್ವಸತಿ ಸ್ಟುಡಿಯೊವನ್ನು ಹೊಂದಿದ್ದಾರೆ.ಇದಿಷ್ಟೇ ಅಲ್ಲದೆ ಅವರು ರೂಪಾಂತರ ತಜ್ಞರಾಗಿ, ಸ್ಪರ್ಧೆಯ ಪ್ರಾಥಮಿಕ ತರಬೇತುದಾರ ಮತ್ತು ಪ್ರಸಿದ್ಧ ತರಬೇತುದಾರರಾಗಿ ಕೂಡ ಬಹಳ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: ಮತ್ತೆ ಶುರುವಾಗುತ್ತಾ ಮಜಾ ಟಾಕೀಸ್?‌

ಇದುವರೆಗೂ ಸವೀನ್ ಅವರು ಗೆದ್ದಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿ ಹೀಗಿದೆ.

1. WNBF -ಸಿಂಗಾಪುರ್ 2019 ರಲ್ಲಿ ನಡೆದ ಮಾಸ್ಟರ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ
2. IBBF ಶ್ರೀ ಕೇರಳ 2 ಬಾರಿ - 2021 ಮತ್ತು 2022
3. IFBB -ಥೈಲ್ಯಾಂಡ್ ಪರ ಪ್ರದರ್ಶನ - 60 ಕೆಜಿ ದೇಹದಾರ್ಢ್ಯದಲ್ಲಿ 1 ನೇ ಬಹುಮಾನ - 26/03/2022

ಇವರ ಸಾಧನೆ ಹಾದಿ ಹೀಗೆ ಮುಂದೆ ಸಾಗಲಿ ಮತ್ತು ಇಂತಹ ದೇಸಿ ಪ್ರತಿಭೆಗಳ ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಗಳು ಇನ್ನೂ ಅವರಿಂದ ಮೂಡಿ ಬರಲಿ ಎಂದು ನಾವೆಲ್ಲಾ ಆಶಿಸೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News