ಕೊಹ್ಲಿ ಶತಕದಿಂದ RCB ಗೆ ಪ್ರಯೋಜನ ಆಗಲಿಲ್ಲ... ಸೋಲಿಗೆ ಇದೇ ಕಾರಣವಾಗಿದ್ದು: ಫಾಫ್ ಡು ಪ್ಲೆಸ್ಸಿಸ್

virat kohli century: ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ, ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಎದುರಿಸಬೇಕಾಯಿತು.  

Written by - Chetana Devarmani | Last Updated : Apr 7, 2024, 11:45 AM IST
  • ಕೊಹ್ಲಿ ಶತಕದಿಂದ RCB ಗೆ ಪ್ರಯೋಜನ ಆಗಲಿಲ್ಲ
  • ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ
  • ಫಾಫ್ ಡು ಪ್ಲೆಸ್ಸಿಸ್ ಬಿಗ್‌ ಹೇಳಿಕೆ
ಕೊಹ್ಲಿ ಶತಕದಿಂದ RCB ಗೆ ಪ್ರಯೋಜನ ಆಗಲಿಲ್ಲ... ಸೋಲಿಗೆ ಇದೇ ಕಾರಣವಾಗಿದ್ದು: ಫಾಫ್ ಡು ಪ್ಲೆಸ್ಸಿಸ್ title=

faf du plessis big statement: ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ, ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೋಲು ಕಂಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು. ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ವಿರಾಟ್ ಕೊಹ್ಲಿ 156.94 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಕೊಹ್ಲಿ ಶತಕದ ಹೊರತಾಗಿಯೂ ಆರ್‌ಸಿಬಿ ಗೆಲ್ಲಲಿಲ್ಲ

ವಿರಾಟ್ ಕೊಹ್ಲಿ ಅವರ ಅಜೇಯ ಶತಕದ ಹೊರತಾಗಿಯೂ ಆರ್‌ಸಿಬಿ ಸೋಲುಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 3 ವಿಕೆಟ್‌ ನಷ್ಟಕ್ಕೆ 183 ರನ್ ಗಳಿಸಿತು. ಆದರೆ ಜೋಸ್ ಬಟ್ಲರ್ ಅವರ ಅಜೇಯ ಶತಕದ ಸಹಾಯದೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಐದು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದಿದೆ.

ಇದನ್ನೂ ಓದಿ: IPL 2024 : ಜೋಸ್ ಬಟ್ಲರ್ ಸ್ಪೋಟಕ ಶತಕಕ್ಕೆ ಬೆಚ್ಚಿದ ಆರ್ಸಿಬಿ, 'ರಾಯಲ್' ಗೆಲುವು ಕಂಡ ರಾಜಸ್ತಾನ್ 

ಸೋಲಿಗೆ ನಿಜವಾದ ಕಾರಣ ತಿಳಿಸಿದ ಡು ಪ್ಲೆಸ್ಸಿಸ್

ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೋಲುಕಂಡ ಬಳಿಕ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸ್ಸಿಸ್ ಮಾತನಾಡಿದ್ದಾರೆ. ನಾನು ವಿರಾಟ್ ಜೊತೆ ಬ್ಯಾಟಿಂಗ್ ಮಾಡುವಾಗ ವಿಕೆಟ್ ತುಂಬಾ ಕ್ಲಿಷ್ಟಕರವಾಗಿ ಕಾಣುತ್ತಿತ್ತು. 190 ರನ್‌ ಬಂದರೆ ಸರಿಯಾಗುತ್ತದೆ ಎಂದು ಭಾವಿಸಿದ್ದೆವು. ನಾವು ಇನ್ನೂ 10-15 ರನ್ ಗಳಿಸಬೇಕಿತ್ತು ಎಂದಿದ್ದಾರೆ. 

ಇಬ್ಬನಿ ಆಟವನ್ನು ಬದಲಾಯಿಸಿತು

ವಿರಾಟ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ನಾವು ಇನ್ನೂ ಸ್ವಲ್ಪ ರನ್ ಗಳಿಸಬೇಕಿತ್ತು. ನಾವೂ ಪ್ರಯತ್ನಿಸಿದ್ದೇವೆ ಆದರೆ ಶಾಟ್ ಹೊಡೆಯುವುದು ಕಷ್ಟಕರವಾಯಿತು. ಸ್ಪಿನ್ನರ್‌ಗಳ ಚೆಂಡು ಬ್ಯಾಟ್‌ನ ಕೆಳಗೆ ಬರುತ್ತಿತ್ತು. ಅಲ್ಲದೇ ಇಬ್ಬನಿ ಕೂಡ ಈ ಪಂದ್ಯದಲ್ಲಿ ಪರಿಣಾಮವನ್ನು ಬೀರಿತು ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.

ಸಿಕ್ಸರ್‌ನೊಂದಿಗೆ ಶತಕ ಪೂರೈಸಿದ ನಂತರ ಫಾರ್ಮ್‌ಗೆ ಮರಳಿದ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ ಕಾರಣರಾದರು. ಆರ್‌ಸಿಬಿ ವಿರುದ್ಧ ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ರಾಯಲ್ಸ್ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿಯೂ ಗೆದ್ದು ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ ಸತತ ಮೂರನೇ ಸೋಲಿನೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿದಿದೆ. 

ಇದನ್ನೂ ಓದಿ: IPLನಲ್ಲಿ ಕೊಹ್ಲಿ ‘ವಿರಾಟ’ ರೂಪ ದರ್ಶನ: ಶತಕದ ಜೊತೆ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ದಾಖಲೆ ಬರೆದ ‘ಕಿಂಗ್’ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News