Commentator Removed from WPL Panel: ಮಹಿಳಾ ಪ್ರೀಮಿಯರ್ ಲೀಗ್ (WPL-2023) ಅನ್ನು ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ. ವಿಶ್ವದ ದೊಡ್ಡ ತಂಡಗಳ ಮಹಿಳಾ ಕ್ರಿಕೆಟಿಗರೂ ಈ ಟಿ20 ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಮಾರ್ಚ್ 4ರಿಂದ ಆರಂಭವಾದ ಈ ಲೀಗ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಲೀಗ್‌ನಲ್ಲಿ ಕಾಮೆಂಟರಿ ಮಾಡುತ್ತಿದ್ದ ಇಬ್ಬರನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಟೆಸ್ಟ್ ಪಂದ್ಯದ ಮಧ್ಯೆ ಪತ್ನಿ ಜೊತೆ ಭರ್ಜರಿಯಾಗಿ ಹೋಳಿ ಆಡಿದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್: ಫೋಟೋ ನೋಡಿ
ಸಾಮಾಜಿಕ ಜಾಲತಾಣದಲ್ಲಿ ಗ್ರಾಫಿಕ್ ಒಂದನ್ನು ಹೆಚ್ಚು ಶೇರ್ ಮಾಡಲಾಗುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಹಿಳೆಯರ ಫೀಲ್ಡಿಂಗ್ ಬಗ್ಗೆ ಕಾಮೆಂಟ್ ಮಾಡಿದ ಕಾರಣಕ್ಕಾಗಿ ಇಬ್ಬರು ಪುರುಷ ಕಾಮೆಂಟೆಟರ್‌ಗಳನ್ನು ವಜಾ ಮಾಡಲಾಗಿದೆ ಎಂದು ಹೇಳಲಾಗಿದೆ. ಪಂದ್ಯವೊಂದರಲ್ಲಿ ಮಹಿಳಾ ಕ್ರಿಕೆಟಿಗರೊಬ್ಬರು ಕ್ಯಾಚ್ ಕೈಬಿಟ್ಟಿದ್ದಾರೆ. ಈ ಸಂದರ್ಭದಲ್ಲಿರ ಪುರುಷ ವಿವರಣೆಗಾರರು ನಗುತ್ತಾ ಕಮೆಂಟ್ ಮಾಡಿದ್ದಾರೆ ಎಂದು ಆ ಪೋಸ್ಟ್’ನಲ್ಲಿ ಹೇಳಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಸ್ವರ ಎದ್ದಿದೆ. ಈ ವಿಚಾರದ ಸತ್ಯವನ್ನು ತಿಳಿಯಲು ಜನರು ಎಲ್ಲಾ ಚಾನಲ್‌ಗಳು, ವೆಬ್‌ಸೈಟ್‌ಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಸದ್ಯ ಸತ್ಯಾಂಶ ಬಯಲಾಗಿದ್ದು, ಇದು ಸಂಪೂರ್ಣವಾಗಿ ನಕಲಿ ಎಂದು ಸಾಬೀತಾಗಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟವಾಗಿದೆ.
ಇದನ್ನೂ ಓದಿ: No.1 T20 Cricket Premier League: ವಿಶ್ವದ ನಂಬರ್.1 ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ಯಾವುದು ಗೊತ್ತಾ? ಗೆಸ್ ಮಾಡಿ ನೋಡೋಣ
ಸಮರ್ಥನೆಯ ಸತ್ಯವೇನು?
ಗ್ರಾಫಿಕ್‌ನಲ್ಲಿ, ಕ್ರಿಕೆಟ್ ಕಾಮೆಂಟರಿ ಬಾಕ್ಸ್‌ನಲ್ಲಿ ಮೂವರ ಮುಖಗಳನ್ನು ಬ್ಲರ್ ಮಾಡಲಾಗಿದೆ. “ಆಟಗಾರನೊಬ್ಬ ಕ್ಯಾಚ್ ಕೈಬಿಟ್ಟ ನಂತರ ಸ್ತ್ರೀದ್ವೇಷದ ಟೀಕೆಗಳನ್ನು ಮಾಡಿದ ಕಾರಣ ಇಬ್ಬರು ಪುರುಷ ಕಾಮೆಂಟೆಟರ್‌ಗಳನ್ನು ಪಂದ್ಯಾವಳಿಯಿಂದ ನಿಷೇಧಿಸಲಾಗಿದೆ” ಎಂದು ಬರೆಯಲಾಗಿದೆ. ಈ ಪೋಸ್ಟ್ ಟ್ವಿಟರ್, ಫೇಸ್‌ಬುಕ್’ನಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಈಗ ಇದೊಂದು ಸುಳ್ಳು ಪ್ರಚಾರ ಎಂಬುದು ಸ್ಪಷ್ಟವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.