IPL 2023: ಟೀಂ ಇಂಡಿಯಾದಿಂದ ಹೊರಗಿಟ್ಟ ಈ ಆಟಗಾರನಿಗೆ ಪಾಂಡ್ಯ ಕೂಡ ಕೊಡುತ್ತಿಲ್ಲ ಅವಕಾಶ! ಅಂತ್ಯವಾಯ್ತ ವೃತ್ತಿ ಜೀವನ?

Gujarat Titans vs Chennai Super Kings, IPL 2023: ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 178 ರನ್ ಗಳಿಸಿತು. ಬಳಿಕ ಗುಜರಾತ್ 19.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು.

Written by - Bhavishya Shetty | Last Updated : Apr 1, 2023, 07:48 PM IST
    • ಗುಜರಾತ್ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ
    • ಇದುವರೆಗಿನ ಲೀಗ್‌’ನಲ್ಲಿ ಚೆನ್ನೈ ವಿರುದ್ಧ ಗುಜರಾತ್‌’ಗೆ ಇದು ಮೂರನೇ ಗೆಲುವು
    • ಮೋಹಿತ್ ಕೊನೆಯ ಬಾರಿಗೆ 2015 ರಲ್ಲಿ ಭಾರತ ತಂಡದ ಜೆರ್ಸಿಯನ್ನು ಧರಿಸಿದ್ದರು
IPL 2023: ಟೀಂ ಇಂಡಿಯಾದಿಂದ ಹೊರಗಿಟ್ಟ ಈ ಆಟಗಾರನಿಗೆ ಪಾಂಡ್ಯ ಕೂಡ ಕೊಡುತ್ತಿಲ್ಲ ಅವಕಾಶ! ಅಂತ್ಯವಾಯ್ತ ವೃತ್ತಿ ಜೀವನ? title=
Hardik Pandya

Gujarat Titans vs Chennai Super Kings, IPL 2023: ಹಾಲಿ ಚಾಂಪಿಯನ್ ತಂಡ ಗುಜರಾತ್ ಟೈಟಾನ್ಸ್ ಐಪಿಎಲ್ 16 ನೇ ಋತುವಿನಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಿದೆ. ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಈ ತಂಡ, ಋತುವಿನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಆದರೆ ಈ ಪಂದ್ಯದಲ್ಲಿ ಓರ್ವ ಸ್ಟಾರ್ ಆಟಗಾರ ಅವಕಾಶಕ್ಕಾಗಿ ಕಾಯುತ್ತಿದ್ದ.

ಇದನ್ನೂ ಓದಿ: 2023 ಟಾಟಾ ಐಪಿಎಲ್ಗೆ ಜಿಯೋ ಸಿನಿಮಾ ಕಾಮೆಂಟರಿ ತಂಡದಲ್ಲಿ ಸೂಪರ್ಸ್ಟಾರ್ ಕ್ರಿಕೆಟಿಗರು

ಈ ಋತುವಿನ ಮೊದಲ ಪಂದ್ಯದಲ್ಲಿ ಗುಜರಾತ್ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಇದುವರೆಗಿನ ಲೀಗ್‌’ನಲ್ಲಿ ಚೆನ್ನೈ ವಿರುದ್ಧ ಗುಜರಾತ್‌’ಗೆ ಇದು ಮೂರನೇ ಗೆಲುವು. ಅನುಭವಿ ವಿಕೆಟ್‌ ಕೀಪರ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡದ ವಿರುದ್ಧ ಗುಜರಾತ್ ಈಗ 3-0 ಅಂತರದ ಗೆಲುವು-ಸೋಲಿನ ದಾಖಲೆಯನ್ನು ಹೊಂದಿದೆ.

ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 178 ರನ್ ಗಳಿಸಿತು. ಬಳಿಕ ಗುಜರಾತ್ 19.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು.

ಆದರೆ ಒಬ್ಬ ಆಟಗಾರ ಈಗಾಗಲೇ ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದು, ಹಾರ್ದಿಕ್ ಪಾಂಡ್ಯ ಕೂಡ ಅವರಿಗೆ ಅವಕಾಶ ನೀಡಲಿಲ್ಲ. 34 ವರ್ಷದ ವೇಗದ ಬೌಲರ್ ಮೋಹಿತ್ ಶರ್ಮಾ ಅವರ ಬಗ್ಗೆ ಇಲ್ಲಿ ಮಾತನಾಡಲಾಗುತ್ತಿದೆ.

ಮೋಹಿತ್ ಕೊನೆಯ ಬಾರಿಗೆ 2015 ರಲ್ಲಿ ಭಾರತ ತಂಡದ ಜೆರ್ಸಿಯನ್ನು ಧರಿಸಿದ್ದರು. ODI ಮತ್ತು T20 ಮಾದರಿಯಲ್ಲಿ ತಂಡದ ಭಾಗವಾಗಿದ್ದ ಅವರು, ಎಂದಿಗೂ ಟೆಸ್ಟ್‌’ಗೆ ಪದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ. ದೇಶೀಯ ಕ್ರಿಕೆಟ್‌’ನಲ್ಲಿ ಹರಿಯಾಣವನ್ನು ಪ್ರತಿನಿಧಿಸುತ್ತಾರೆ.

ಮೋಹಿತ್‌'ನ ವೃತ್ತಿಜೀವನ:

2013 ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದ ಮೋಹಿತ್ ಶರ್ಮಾ ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 26 ODI ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 31 ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 44 ಪಂದ್ಯಗಳಲ್ಲಿ 127 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: MS Dhoniಗೆ ಗಂಭೀರ ಗಾಯ! CSK ಕೋಚ್ ನೀಡಿದ ಹೆಲ್ತ್ ಅಪ್ಡೇಟ್’ನಲ್ಲಿದೆ ಈ ಮಹತ್ವದ ಮಾಹಿತಿ

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಬ್ಯಾಟಿಂಗ್ ಮಾಡುವಾಗ, 3 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಅಜೇಯ 10 ರನ್ ಗಳಿಸಿದರು. ಇದಲ್ಲದೇ 4 ಓವರ್ ಗಳಲ್ಲಿ 26 ರನ್ ನೀಡಿ 2 ವಿಕೆಟ್ ಕೂಡ ಪಡೆದಿದ್ದಾರೆ. ರಾಹುಲ್ ತೆವಾಟಿಯಾ (ಔಟಾಗದೆ 15) ಮತ್ತು ರಶೀದ್ ಖಾನ್ (ಔಟಾಗದೆ 10) ಆರನೇ ವಿಕೆಟ್‌’ಗೆ ಅಜೇಯ 26 ರನ್‌ಗಳ ಜೊತೆಯಾಟ ನೀಡಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News