ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ರಾಡ್‌ನ ಅಂತಿಮ ಓವರ್‌ನಲ್ಲಿ 35 ರನ್ ಗಳಿಸುವ ಮೂಲಕ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.
ಆ ಮೂಲಕ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ 416 ರನ್ ಗಳಿಸಲು ಭಾರತಕ್ಕೆ ನೆರವಾದರು.
We did not see this one coming...#WTC23 | #ENGvIND https://t.co/PScAnSipI5
— ICC (@ICC) July 2, 2022
ಇದನ್ನೂ ಓದಿ: ತಮ್ಮೂರಿನ ವಿದ್ಯಾರ್ಥಿಗಳಿಗೆ "777 ಚಾರ್ಲಿ" ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್
ಜಸ್ಪ್ರಿತ್ ಬುಮ್ರಾ ಅವರು ಬ್ರಾಡ್ ಅವರ ಓವರ್ ನಲ್ಲಿ ಎರಡು ಸಿಕ್ಸರ್ (ಒಂದು ನೋ-ಬಾಲ್‌ನಿಂದ ಬಂದದ್ದು), ಐದು ಬೌಂಡರಿಗಳು, ಹಾಗೂ ವೈಡ್ ಗಳ ನೆರವಿನಿಂದ 35 ರನ್ ಗಳಿಸಿದರು. ಆ ಮೂಲಕ ವೆಸ್ಟ್ ಇಂಡೀಸ್ ನ ಆಟಗಾರ ಬ್ರಿಯಾನ್ ಲಾರಾ, ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಮತ್ತು ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಅವರ ಹಿಂದಿನ ದಾಖಲೆಯನ್ನು ಹಿಂದಿಕ್ಕಿದರು.
Remember the over!
Details ➡️ https://t.co/n3Lic7OwWA#WTC23 | ENGvIND pic.twitter.com/xuo8oPdSNb
— ICC (@ICC) July 2, 2022
ಇದನ್ನೂ ಓದಿ : Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!
ಇನ್ನೊಂದೆಡೆಗೆ 10ನೇ ಕ್ರಮಾಂಕದಲ್ಲಿ ಬುಮ್ರಾ ಅಜೇಯ 31 ರನ್ ಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ದಾಖಲೆಯನ್ನು ನಿರ್ಮಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.