England vs India, 3rd ODI : ಅಬ್ಬರಿಸಿದ ರಿಶಬ್ ಪಂತ್, ಹಾರ್ದಿಕ್ ಪಾಂಡ್ಯ, ಭಾರತಕ್ಕೆ 2-1 ಅಂತರದ ಸರಣಿ ಜಯ

ಇಲ್ಲಿನ ಓಲ್ಡ್ ಟ್ರಾಪೋರ್ಡ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ. ಆ ಮೂಲಕ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ.

Written by - Manjunath N | Last Updated : Jul 17, 2022, 11:13 PM IST
  • ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 259 ರನ್ ಗಳಿಗೆ ನಿಯಂತ್ರಿಸಿತು,
England vs India, 3rd ODI : ಅಬ್ಬರಿಸಿದ ರಿಶಬ್ ಪಂತ್, ಹಾರ್ದಿಕ್ ಪಾಂಡ್ಯ, ಭಾರತಕ್ಕೆ 2-1 ಅಂತರದ ಸರಣಿ ಜಯ   title=
Photo Courtsey: Twitter

ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಪೋರ್ಡ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ. ಆ ಮೂಲಕ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 259 ರನ್ ಗಳಿಗೆ ನಿಯಂತ್ರಿಸಿತು, ಇಂಗ್ಲೆಂಡ್ ತಂಡದ ಪರವಾಗಿ ಜೋಸ್ ಬಟ್ಲರ್ (60) ರಾಯ್ (41) ರನ್ ಗಳ ನೆರವಿನಿಂದ 50 ಓವರ್ ಗಳಲ್ಲಿ 259 ರನ್ ಗಳಿಗೆ ಸರ್ವಪತನ ಕಂಡಿತು.ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 4 ಹಾಗೂ ಚಹಾಲ್ 3 ವಿಕೆಟ್ ಗಳನ್ನು ತೆಗೆದುಕೊಳ್ಳುವ ಮೂಲಕ ಇಂಗ್ಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಇಂಗ್ಲೆಂಡ್ ನೀಡಿದ 260 ರನ್ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಆರಂಭದಲ್ಲಿ ಆಘಾತವನ್ನು ಎದುರಿಸಿತು, ತಂಡದ ಮೊತ್ತ 38 ರನ್ ಗಳಾಗುವಷ್ಟರಲ್ಲಿ ಶಿಖರ್ ಧವನ್,ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯಂತಹ ಘಟಾನುಘಟಿಗಳ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ: ಗುರಾಯಿಸಿದ್ದಕ್ಕೆ‌ ರೌಡಿಗಳ‌‌ ನಡುವೆ ಮಾರಾಮಾರಿ: ಎಣ್ಣೆ ಬಾಟಲ್‌ನಲ್ಲಿ ಬಡಿದಾಟ

ಈ ಹಂತದಲ್ಲಿ ಜೊತೆಯಾದ ವಿಕೆಟ್ ಕೀಪರ್ ರಿಶಬ್ ಪಂತ್ 16 ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ಗಳ ನೆರವಿನೊಂದಿಗೆ ಅಜೇಯ125 ರನ್ ಗಳನ್ನು ಗಳಿಸಿದರು. ಇನ್ನೊಂದೆಡೆಗೆ ಪಂತ್ ಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಕೇವಲ 55 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 71 ರನ್ ಗಳನ್ನು ಗಳಿಸಿದರು.

ಆ ಮೂಲಕ ಭಾರತ ತಂಡವು 42.1 ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 261 ರನ್ ಗಳನ್ನು ಗಳಿಸುವ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News