IND vs ENG ಮೊದಲ ಟೆಸ್ಟ್ ಮಳೆಯಿಂದಾಗಿ ಡ್ರಾ..!

ಈ ಪಂದ್ಯದ ಐದನೇ ದಿನದಲ್ಲಿ ಭಾರತ ತಂಡಕ್ಕೆ ಗೆಲ್ಲಲು ಕೇವಲ 157 ರನ್ ಗಳ ಅಗತ್ಯವಿತ್ತು ಮತ್ತು 9 ವಿಕೆಟ್ ಕೂಡ ಉಳಿದಿತ್ತು, ಆದರೆ ಮಳೆಯಿಂದಾಗಿ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

Written by - Channabasava A Kashinakunti | Last Updated : Aug 8, 2021, 09:25 PM IST
  • ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್
  • ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ
  • ಆನ್-ಫೀಲ್ಡ್ ಅಂಪೈರ್‌ಗಳು ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಅನ್ನು ಡ್ರಾ ಮಾಡಬೇಕಾಯಿತು
IND vs ENG ಮೊದಲ ಟೆಸ್ಟ್ ಮಳೆಯಿಂದಾಗಿ ಡ್ರಾ..! title=

ನವದೆಹಲಿ : ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದ ಐದನೇ ದಿನದಲ್ಲಿ ಭಾರತ ತಂಡಕ್ಕೆ ಗೆಲ್ಲಲು ಕೇವಲ 157 ರನ್ ಗಳ ಅಗತ್ಯವಿತ್ತು ಮತ್ತು 9 ವಿಕೆಟ್ ಕೂಡ ಉಳಿದಿತ್ತು, ಆದರೆ ಮಳೆಯಿಂದಾಗಿ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಪಂದ್ಯಕ್ಕೆ ಖಳನಾಯಕನಾದ ಮಳೆ 

ನಾಟಿಂಗ್ ಹ್ಯಾಮ್(Nottingham) ಭಾನುವಾರ ಭಾರಿ ಮೋಡ ಕವಿದ ವಾತಾವರಣದ ಜೊತೆಗೆ ತಣ್ಣನೆಯ ಗಾಳಿ ಕೂಡ ಬೀಸುತ್ತಿತ್ತು ಅಲ್ಲದೆ ಮಳೆ ಇಡೀ ದಿನ ನಿಲ್ಲಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಆನ್-ಫೀಲ್ಡ್ ಅಂಪೈರ್‌ಗಳು ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಅನ್ನು ಡ್ರಾ ಮಾಡಬೇಕಾಯಿತು. ಇದರೊಂದಿಗೆ, ಈ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸುಲಭ ಅವಕಾಶ ಕೂಡ ಟೀಂ ಇಂಡಿಯಾದ ಕೈಯಿಂದ ತಪ್ಪಿ ಹೋಗಿದೆ. ಭಾರತೀಯ ಅಭಿಮಾನಿಗಳು ಹವಾಮಾನದಿಂದಾಗಿ ದಿನವಿಡೀ ನಿರಾಶೆಯನ್ನು ಎದುರಿಸಬೇಕಾಯಿತು.

ಇದನ್ನೂ ಓದಿ : Video ನೋಡಿ: ಕಣ್ಣೀರಿಡುತ್ತಲೇ ಬಾರ್ಸಿಲೋನಾ ಎಫ್‌ಸಿ ತಂಡಕ್ಕೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ..!

ಭಾರತ ಮೊದಲ ಟೆಸ್ಟ್ ಗೆಲ್ಲುವು ಸನಿಹದಲ್ಲಿತ್ತು

ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಿನ ನಾಟಿಂಗ್ ಹ್ಯಾಮ್ ಟೆಸ್ಟ್ ನಲ್ಲಿ ನಾಲ್ಕನೇ ದಿನದ ನಂತರ ವಿರಾಟ್ ಕೊಹ್ಲಿ ಪಡೆ ಗೆಲುವಿನತ್ತ ಸಾಗುತ್ತಿದೆ. ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಚೇತೇಶ್ವರ ಪೂಜಾರ ಮತ್ತು ರೋಹಿತ್ ಶರ್ಮಾ 12-12 ರನ್ ಗಳಿಸಿ ಅಜೇಯರಾಗಿ ಮರಳಿದರು. ಕೊನೆಯ ದಿನ, ಭಾರತದ ಗೆಲುವಿಗೆ 157 ರನ್ ಬೇಕಿತ್ತು ಮತ್ತು ಇನ್ನೂ 9 ವಿಕೆಟ್ ಬಾಕಿಯಿದೆ. ಆದರೆ ಮಳೆಯಿಂದಾಗಿ ತಂಡದ ಎಲ್ಲಾ ಭರವಸೆಯನ್ನು ನಿರಾಸೆಗೊಳಿಸಿತು.

ಇದನ್ನೂ ಓದಿ : Neeraj Chopra: 37 ವರ್ಷದಿಂದ ಅಪೂರ್ಣವಾಗಿ ಉಳಿದಿದ್ದ ಕನಸು ನನಸು ಮಾಡಿದ ನೀರಜ್ ಚೋಪ್ರಾ..!

ರೂಟ್ ಶತಕದಿಂದ ಇಂಗ್ಲೆಂಡ್ ಉಳಿಸಿತು

ಇಂಗ್ಲೆಂಡ್ ನಿನ್ನೆ ಈ ಟೆಸ್ಟ್ ಪಂದ್ಯ(Test Match)ವನ್ನು ಕಳೆದುಕೊಂಡಿತ್ತು, ಅಂದರೆ ನಾಲ್ಕನೇ ದಿನ, ಇಂಗ್ಲೆಂಡ್ ಕ್ಯಾಪಟನ್ ಜೋ ರೂಟ್ ಅದ್ಭುತ ಪ್ರದರ್ಶನದಿನದಿಂದ 109 ರನ್ ಗೆ ಕರಣವಾಯುತು, ಅವರ ಸೋಲನ್ನು ಐದನೇ ದಿನದವರೆಗೆ ತಪ್ಪಿಸಲಾಯಿತು. ವಾಸ್ತವವಾಗಿ ಇಂಗ್ಲೆಂಡ್ ನ ಮೊದಲ ಇನ್ನಿಂಗ್ಸ್ ಅನ್ನು ಕೇವಲ 183 ರನ್ ಗಳಿಗೆ ಇಳಿದಿತ್ತು. ಉತ್ತರವಾಗಿ, ಭಾರತ 10 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತು ಮತ್ತು ಗಣನೀಯ ಮುನ್ನಡೆ ಪಡೆಯಿತು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್ ಬ್ಯಾಕ್ ಮಾಡಿದೆ ಮತ್ತು ನಾಯಕ ರೂಟ್ ಶತಕದ ಹಿನ್ನಲೆಯಲ್ಲಿ 303 ರನ್ ಗಳಿಸಿತು. ಭಾರತ ಗೆಲ್ಲಲು 209 ರನ್ ಗಳ ಗುರಿಯನ್ನು ಪಡೆದುಕೊಂಡಿತು, ಆದರೆ ಕೊನೆಗೆ ಮಳೆ ಎಲ್ಲವನ್ನೂ ಹಾಳು ಮಾಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News