IND vs SL: ಶ್ರೀಲಂಕಾ ತಂಡಕ್ಕೆ ಮಳೆರಾಯನ ಶಾಪ... ಸತತವಾಗಿ ಎರಡನೇ ಪಂದ್ಯ ಗೆದ್ದ ಭಾರತ

IND vs SL: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಅಬ್ಬರ ಮುಂದುವರೆದಿದೆ. ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಎದುರಾಳಿ ತಂಡದ ಬೆವರಿಳಿಸಿದೆ. ಭಾನುವಾರ ನಡೆದ ಮೂರು ಟಿ20 ಸರಣಿಯ ಎರಡನೇ ಟಿ20 ಪಂದ್ದಯಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಅಡಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.  

Written by - Zee Kannada News Desk | Last Updated : Jul 29, 2024, 07:16 AM IST
  • ಟಿ20 ಪಂದ್ದಯಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಅಡಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
  • T20I ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ.
  • ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 161 ರನ್ ಕಲೆಹಾಕಿತು.
IND vs SL: ಶ್ರೀಲಂಕಾ ತಂಡಕ್ಕೆ ಮಳೆರಾಯನ ಶಾಪ... ಸತತವಾಗಿ ಎರಡನೇ ಪಂದ್ಯ ಗೆದ್ದ ಭಾರತ title=

IND vs SL: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಅಬ್ಬರ ಮುಂದುವರೆದಿದೆ. ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಎದುರಾಳಿ ತಂಡದ ಬೆವರಿಳಿಸಿದೆ. ಭಾನುವಾರ ನಡೆದ ಮೂರು ಟಿ20 ಸರಣಿಯ ಎರಡನೇ ಟಿ20 ಪಂದ್ದಯಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಅಡಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಪಡಿಸಿದ ಕಾರಣ ಅಂಪೈರ್‌ಗಳು ಭಾರತದ ಗುರಿಯನ್ನು 8 ಓವರ್‌ಗಳಲ್ಲಿ 78 ರನ್‌ಗಳಿಗೆ ಇಳಿಸಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ T20I ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಸರಣಿ ಗೆಲುವಿನೊಂದಿಗೆ ಸಂಭ್ರಮಸಿದ್ದಾರೆ.

ಇದನ್ನೂ ಓದಿ: IND vs SL: ಫೈನಲ್‌ನಲ್ಲಿ ವನಿತೆಯರ ಹೋರಾಟ..ಶ್ರೀಲಂಕಾದ ವಿರುದ್ಧ ಇಂದು ಎರಡು ಪಂದ್ಯಗಳ ರೋಚಕ ಕಾದಾಟ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 161 ರನ್ ಕಲೆಹಾಕಿತು. ಕುಶಾಲ್ ಪೆರೇರಾ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 53 ರನ್‌ ಕಲೆಹಾಕಿ ಅರ್ಧಶತಕದೊಂದಿಗೆ ಮಿಂಚಿದರು. ಭಾರತದ ಬೌಲರ್‌ಗಳ ಪೈಕಿ ರವಿ ಬಿಷ್ಣೋಯ್ 26 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.  2 ಓವರ್‌ ಬೌಲಿಂಗ್‌ ಮಾಡಿದ ಅಕ್ಷರ್ ಪಟೇಲ್ 24 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು ಇನ್ನೂ ಹಾರ್ದಿಕ್ ಪಾಂಡ್ಯ 2 ವಿಕೆಟ್‌ ಪಡೆದರು.

ಗುರಿತ ಬೆನ್ನತ್ತಿದ ಭಾರತ 6.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 81 ರನ್ ಗಳಿಸಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 3 ಬೌಂಡರಿ 30 ರನ್‌ ಕಲೆಹಾಕಿದರು. ಸೂರ್ಯಕುಮಾರ್ ಯಾದವ್ 12 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 26 ರನ್‌ ಗಳಿಸಿದರು ಮತ್ತು ಹಾರ್ದಿಕ್ ಪಾಂಡ್ಯ 9 ಎಸೆತಗಳನ್ನಾಡಿ, 3 ಬೌಂಡರಿ, 1 ಸಿಕ್ಸರ್ ಸಿಡಿಸಿ 22 ರನ್ ಗಳಿಸಿ ಮಿಂಚಿದರು. ಶ್ರೀಲಂಕಾ ಬೌಲರ್‌ಗಳ ಪೈಕಿ ಮಹಿಷ್ ತಿಕ್ಷಣ, ವನಿಂದು ಹಸರಂಗ ಮತ್ತು ಮಹಿಷ್ ಪತಿರಾನ ತಲಾ ಒಂದು ವಿಕೆಟ್ ಪಡೆದರು.

162 ರನ್‌ಗಳ ಗುರಿ ತಲುಪಿದ್ದ ಭಾರತ ಮೂರು ಎಸೆತಗಳನ್ನು ಆಡಿ 6/0 ಸ್ಕೋರ್ ಮಾಡಿದಾಗ ಮಳೆ ಅಡ್ಡಿಯಾಯಿತು. ಒಂದೂವರೆ ಗಂಟೆಗಳ ಕಾಲ ಆಟಕ್ಕೆ ಅಡ್ಡಿಯಾಯಿತು. ಮಳೆ ನಿಂತ ಬಳಿಕ ಪಂದ್ಯ ಆರಂಭವಾದಾಗ ಅಂಪೈರ್‌ಗಳು ಭಾರತದ ಗುರಿಯನ್ನು ತಗ್ಗಿಸಿದರು. ಭಾರತಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 8 ಓವರ್‌ಗಳಲ್ಲಿ 78 ರನ್‌ಗಳ ಗುರಿಯನ್ನು ನಿಗದಿಪಡಿಸಲಾಗಿತ್ತು.

ಇದನ್ನೂ ಓದಿ:IND vs SL: ವಿಕೆಟ್‌ ಪಡೆದ ಖುಷಿಯಲ್ಲಿ ಬ್ಯಾಟ್ಸ್‌ಮನ್‌ಗೆ ಛೀಮಾರಿ ಹಾಕಿದ ರಿಯಾನ್ ಪರಾಗ್..! ವಿಡಿಯೋ ವೈರಲ್‌

ಆಟ ಶುರುವಾದ ಕೂಡಲೇ ಭಾರತಕ್ಕೆ ದೊಡ್ಡ ಆಘಾತ. ಸಂಜು ಸ್ಯಾಮ್ಸನ್(0) ತೀಕ್ಷ್ಣವಾದ ಬೌಲಿಂಗ್‌ನಿಂದ ಗೋಲ್ಡನ್ ಡಕ್ ಆಗಿ ಹಿಂತಿರುಗಿದರು. ಗಾಯದ ಸಮಸ್ಯೆಯಿಂದ ಶುಬ್ಮನ್ ಗಿಲ್ ಬದಲಿಗೆ ಅಂತಿಮ ತಂಡದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ಭಾರಿ ನಿರಾಸೆ ಮೂಡಿಸಿದರು.

ಯಶಸ್ವಿ ಜೈಸ್ವಾಲ್ ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಬರುವುದರೊಂದಿಗೆ ವಿನಾಶಕಾರಿ ಬ್ಯಾಟಿಂಗ್ ಸ್ಪೆಲ್ ಅನ್ನು ಬಿಚ್ಚಿಟ್ಟರು. ಇವರಿಬ್ಬರು ಆಕ್ರಮಣಕಾರಿ ಆಟವಾಡಿದ್ದರಿಂದ ಭಾರತ ನಾಲ್ಕು ಓವರ್‌ಗಳಲ್ಲಿ 50 ರನ್ ಪೂರೈಸಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News