Dinesh Karthik Retirement: ದಿನೇಶ್ ಕಾರ್ತಿಕ್ ಭಾವುಕ ವಿಡಿಯೋ ವೈರಲ್.. ಶೀಘ್ರದಲ್ಲೇ ಘೋಷಿಸಲಿದ್ದಾರೆ ನಿವೃತ್ತಿ!

Dinesh Karthik will announce retirement soon: 2022ರ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಫಿನಿಶರ್‌ ಆಗಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಕೇವಲ ಒಂದಂಕಿ ರನ್ ಬಾರಿಸಿರುವ ದಿನೇಶ್ ನಿರ್ಣಾಯಕ ಪಂದ್ಯಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ

Written by - Bhavishya Shetty | Last Updated : Nov 24, 2022, 03:37 PM IST
    • ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಪ್ರಮುಖ ಆಟಗಾರ
    • ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದರು
    • ಭಾರತ ತಂಡದಲ್ಲಿ ಫಿನಿಶರ್‌ ಆಗಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್
Dinesh Karthik Retirement: ದಿನೇಶ್ ಕಾರ್ತಿಕ್ ಭಾವುಕ ವಿಡಿಯೋ ವೈರಲ್.. ಶೀಘ್ರದಲ್ಲೇ ಘೋಷಿಸಲಿದ್ದಾರೆ ನಿವೃತ್ತಿ! title=
Dinesh Karthik

Dinesh Karthik will announce retirement soon: ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಪ್ರಮುಖ ಆಟಗಾರ. ಕ್ಯಾಪ್ಟನ್ ಕೂಲ್ ಬಳಿಕ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದು, ಮಾತ್ರವಲ್ಲದೆ ತಂಡಕ್ಕೆ ಆಪತ್ಭಾಂದವನಂತೆ ಆಟವಾಡಿರುವ ಡಿಕೆ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: Glenn Maxwell : ಸೂರ್ಯ ಕುಮಾರ್'ನನ್ನು ಖರೀದಿಸಲು ನಮ್ಮ ಬಳಿ ಈಗ ಅಷ್ಟು ಹಣವಿಲ್ಲ : ಮ್ಯಾಕ್ಸ್‌ವೆಲ್ 

ಧೋನಿ ನಿವೃತ್ತಿಯ ನಂತರ ಟೀಂ ಇಂಡಿಯಾದ ಬೆಸ್ಟ್ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿ, ಬೆಸ್ಟ್ ಫಿನಿಶರ್ ಆಗಿ ಹೊರಹೊಮ್ಮಿದ್ದು ನಮಗೆಲ್ಲರಿಗೂ ತಿಳಿದ ಸಂಗತಿ.

2022ರ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಫಿನಿಶರ್‌ ಆಗಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಕೇವಲ ಒಂದಂಕಿ ರನ್ ಬಾರಿಸಿರುವ ದಿನೇಶ್ ನಿರ್ಣಾಯಕ ಪಂದ್ಯಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಅನೇಕ ರೀತಿಯಲ್ಲಿ ಟೀಕೆಗಳನ್ನು ಎದುರಿಸಬೇಕಾಯಿತು. ಇದರ ಬೆನ್ನಲೇ ನ್ಯೂಜಿಲ್ಯಾಂಡ್ ಸರಣಿಗೂ ಬಿಸಿಸಿಐ ದಿನೇಶ್ ಕಾರ್ತಿಕ್ ಗೆ ಸ್ಥಾನ ನೀಡಲಿಲ್ಲ.

 
 
 
 

 
 
 
 
 
 
 
 
 
 
 

A post shared by Dinesh Karthik (@dk00019)

 

 

ಇನ್ನು 2023ರಲ್ಲಿ ಭಾರತದಲ್ಲಿ ವಿಶ್ವಕಪ್ ಏಕದಿನ ಸರಣಿ ನಡೆಯಲಿದೆ. ಇದಕ್ಕಾಗಿ ಹಲವಾರು ಪಂದ್ಯಗಳನ್ನು ಟೀಂ ಇಂಡಿಯಾ ಆಡಬೇಕಿದೆ. ಆದರೆ ಈ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ದಿನೇಶ್ ಕಾರ್ತಿಕ್ ವಿದಾಯ ಹೇಳಲು ನಿರ್ಧರಿಸಿರುವಂತಿದೆ. ಇತ್ತೀಚೆಗಷ್ಟೇ ದಿನೇಶ್ ಕಾರ್ತಿಕ್ ಪೋಸ್ಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“2022 ರ ವಿಶ್ವಕಪ್‌ನಲ್ಲಿ ಆಡುವ ತನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದಕ್ಕಾಗಿ ಸಹ ಆಟಗಾರರು, ತರಬೇತುದಾರರಿಗೆ ಧನ್ಯವಾದಗಳು. ಮುಖ್ಯವಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಶೀರ್ಷಿಕೆ ನೀಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರ ಕ್ರಿಕೆಟ್ ಜರ್ನಿಯ ಕೆಲವೊಂದು ಫೋಟೋಗಳನ್ನು ಬಳಸಿಕೊಂಡಿದ್ದಾರೆ.  

ಇದನ್ನೂ ಓದಿ: Auckland Pitch Report: ಮೊದಲ ಏಕದಿನದಲ್ಲಿ ಟೀಂ ಇಂಡಿಯಾಗೆ ಸಿಕ್ತು ಈ ಪಿಚ್: ಇದರ ಹಿಂದಿದೆ ಅಚ್ಚರಿಯ ರಹಸ್ಯ!

ಇನ್ಸ್ಟಾಗ್ರಾಂನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಭಾರತ ತಂಡದ ಪರವಾಗಿ ಟಿ20 ವಿಶ್ವಕಪ್ ಆಡಬೇಕೆಂಬ ನನ್ನ ಗುರಿಗಾಗಿ ತುಂಬಾ ಶ್ರಮಿಸಿದ್ದೇನೆ. ಈಗ ನನ್ನ ಕನಸು ನನಸಾಗಿದೆ. ಆ ಬಗ್ಗೆ ನನಗೆ ತುಂಬಾ ಖುಷಿಯಿದೆ. ನಾವು T20 ವಿಶ್ವಕಪ್ 2022 ಪಂದ್ಯಾವಳಿಯನ್ನು ಗೆಲ್ಲದಿರಬಹುದು, ಆದರೆ ಅನೇಕ ನೆನಪುಗಳು ನನ್ನ ಜೀವನದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ತಂಡದ ಸಹ ಆಟಗಾರರು, ಕೋಚ್‌ಗಳು ಮತ್ತು ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳು” ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News