ಅಂದು ಅಪಘಾತದಲ್ಲಿ ಮೃತಪಟ್ಟ MS Dhoni ಗೆಳತಿ ಫೋಟೋ ಎಂದಾದರು ನೋಡಿದ್ದೀರಾ? ಅಪ್ಸರೆಯಂತಿದೆ ಆಕೆಯ ಸೌಂದರ್ಯ!

MS Dhoni Late Girlfriend Photo Viral: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಧೋನಿ ಪ್ರಿಯಾಂಕಾ ಝಾ ಎಂಬವರನ್ನು ಪ್ರೀತಿಸುತ್ತಿದ್ದರು. ಆದರೆ ಅವರನ್ನು ದೂರ ಮಾಡಿದ್ದು ವಿಧಿ. ಒಂದು ದಿನ ಕಾರು ಅಪಘಾತದಲ್ಲಿ ಪ್ರಿಯಾಂಕ ಸಾವನ್ನಪ್ಪಿದ್ದರು. 'ಎಂಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ' ಎಂಬ ಸಿನಿಮಾದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

Written by - Bhavishya Shetty | Last Updated : Mar 20, 2023, 12:20 AM IST
    • ಸಾಕ್ಷಿಯನ್ನು ಮದುವೆಯಾಗುವ ಮೊದಲು, ಧೋನಿಯ ಜೀವನದಲ್ಲಿ ಒಬ್ಬ ಹುಡುಗಿ ಬಂದಿದ್ದಳು
    • ಆದರೆ ಇವರಿಬ್ಬರ ಪ್ರೀತಿಯನ್ನು ದೂರ ಮಾಡಿದ್ದು ವಿಧಿ
    • ಧೋನಿ ಅವರನ್ನು ತುಂಬಾ ಪ್ರೀತಿಸುತ್ತಿದ್ದು, ಆಕೆಯನ್ನೇ ಮದುವೆಯಾಗಲು ಬಯಸಿದ್ದರು,
ಅಂದು ಅಪಘಾತದಲ್ಲಿ ಮೃತಪಟ್ಟ MS Dhoni ಗೆಳತಿ ಫೋಟೋ ಎಂದಾದರು ನೋಡಿದ್ದೀರಾ? ಅಪ್ಸರೆಯಂತಿದೆ ಆಕೆಯ ಸೌಂದರ್ಯ! title=
ms dhoni

MS Dhoni Late Girlfriend Photo Viral: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಅವರೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಧೋನಿಯ ಜೀವನದ ಒಂದು ಭಾಗವು ಇನ್ನೂ ಅನೇಕರಿಗೆ ತಿಳಿದಿಲ್ಲ. ಸಾಕ್ಷಿಯನ್ನು ಮದುವೆಯಾಗುವ ಮೊದಲು, ಧೋನಿಯ ಜೀವನದಲ್ಲಿ ಒಬ್ಬ ಹುಡುಗಿ ಬಂದಿದ್ದು, ಇಬ್ಬರೂ ಸಹ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಯನ್ನು ದೂರ ಮಾಡಿದ್ದು ವಿಧಿ. ಧೋನಿ ವೈಯಕ್ತಿಕ ಜೀವನದ ಕುರಿತು 'ಎಂಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ' ಎಂಬ ಸಿನಿಮಾ ತೆರೆ ಮೇಲೆ ಬಂದಿದ್ದು ಈ ವಿಷಯ ಪ್ರಸ್ತಾಪವಾಗಿದೆ.

ಇದನ್ನೂ ಓದಿ: Video Viral: ಮದುವೆಯಾಗಿದ್ರೂ ಸಹ ಏರ್ಪೋರ್ಟ್’ನಲ್ಲಿ ಅಭಿಮಾನಿಗೆ ಲವ್ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ…! ವಿಡಿಯೋ ನೋಡಿ

ಧೋನಿ ಗೆಳತಿ ಮೃತಪಟ್ಟಿದ್ದು ಹೇಗೆ?

ಧೋನಿ ಗೆಳತಿಯ ಹೆಸರು ಪ್ರಿಯಾಂಕಾ ಝಾ. ಧೋನಿ ಅವರನ್ನು ತುಂಬಾ ಪ್ರೀತಿಸುತ್ತಿದ್ದು, ಆಕೆಯನ್ನೇ ಮದುವೆಯಾಗಲು ಬಯಸಿದ್ದರು, ಆದರೆ ದುರದೃಷ್ಟವಶಾತ್ ಪ್ರಿಯಾಂಕಾ ಕಾರು ಅಪಘಾತದಲ್ಲಿ ನಿಧನರಾದರು. ಧೋನಿ ತನ್ನ ಗೆಳತಿಯೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವೈರಲ್ ಆಗಿದ್ದು, ಅದರಲ್ಲಿ ಇಬ್ಬರೂ ಒಟ್ಟಿಗೆ ಕುಳಿತಿರುವುದು ಕಂಡುಬಂದಿದೆ.

ಪ್ರಿಯಾಂಕಾ ಝಾ ಸಾವನ್ನಪ್ಪಿದ್ದಾರೆ ಎಂದು ಧೋನಿಗೆ ತಿಳಿದಾಗ, ಪ್ರಪಂಚವೇ ತಲೆಕೆಳಗಾಗುವಂತೆ ಅತ್ತಿದ್ದರಂತೆ. ಧೋನಿ ಬಹುಶಃ ಕ್ರಿಕೆಟ್‌ನಿಂದ ದೂರ ಉಳಿಯುತ್ತಾರೆ ಎಂದು ಅವರ ಆಪ್ತರು ಆಗ ಅಂದುಕೊಂಡಿದ್ದರು ಎನ್ನಲಾಗಿದೆ. ಆದರೆ ಧೋನಿ ಅದನ್ನು ತಮ್ಮ ದೌರ್ಬಲ್ಯವಾಗಲು ಬಿಡಲಿಲ್ಲ. ಕ್ರಿಕೆಟ್‌ನಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿ, ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟರು.

ಇದನ್ನೂ ಓದಿ: Hardik Pandya-Virat Kohli: ಮೈದಾನದಲ್ಲಿಯೇ ವಿರಾಟ್ ಕೊಹ್ಲಿಯನ್ನು ಕಡೆಗಣಿಸಿದ್ರಾ ಹಾರ್ದಿಕ್! ಈ ವಿಡಿಯೋ ನೋಡಿದ್ರೆ ಹಾಗೆ ಅನ್ಸುತ್ತೆ

ಧೋನಿಯ ದಾಖಲೆಗಳು:

ಧೋನಿ ನಾಯಕತ್ವದಲ್ಲಿ ಭಾರತವು ಐಸಿಸಿ ವಿಶ್ವ ಟಿ20 (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಗಳನ್ನು ಗೆದ್ದಿದೆ. ಇದಲ್ಲದೇ 2009ರಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ನಂಬರ್ ಒನ್ ಆಗಿದ್ದು ಕೂಡ ಇವರ ನಾಯಕತ್ವದ ಅವಧಿಯಲ್ಲಿಯೇ.

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News