ಬ್ಲೂ ಜರ್ಸಿಯಲ್ಲಿ ಧೋನಿಯನ್ನು ಮತ್ತೆ ನೋಡಲು ಅವರ ತಂದೆ ತಾಯಿಗೆ ಇಷ್ಟವಿಲ್ಲ- ಕೇಶವ್ ಬ್ಯಾನರ್ಜೀ

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರವಾಗಿ ಅವರ ಬಾಲ್ಯದ ಕೋಚ್ ಹೇಳಿರುವ ಮಾತುಗಳು ಈಗ ಧೋನಿ ಕ್ರಿಕೆಟ್ ಭವಿಷ್ಯದ ಕುರಿತಾಗಿ ಹಲವು ಊಹಾಪೋಹಗಳಿಗೆ ಕಾರಣವಾಗಿವೆ.

Last Updated : Jul 17, 2019, 03:26 PM IST
ಬ್ಲೂ ಜರ್ಸಿಯಲ್ಲಿ ಧೋನಿಯನ್ನು ಮತ್ತೆ ನೋಡಲು ಅವರ ತಂದೆ ತಾಯಿಗೆ ಇಷ್ಟವಿಲ್ಲ- ಕೇಶವ್ ಬ್ಯಾನರ್ಜೀ  title=

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರವಾಗಿ ಅವರ ಬಾಲ್ಯದ ಕೋಚ್ ಹೇಳಿರುವ ಮಾತುಗಳು ಈಗ ಧೋನಿ ಕ್ರಿಕೆಟ್ ಭವಿಷ್ಯದ ಕುರಿತಾಗಿ ಹಲವು ಊಹಾಪೋಹಗಳಿಗೆ ಕಾರಣವಾಗಿವೆ.

ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದ ನಂತರ ಈಗ ಧೋನಿ ನಿವೃತ್ತಿ ಘೋಷಿಸುತ್ತಾರೆ ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ.ಅದಕ್ಕೆ ಪೂರಕವಾಗಿ ಈಗ ಧೋನಿಯವರ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜೀ ಅವರ ಹೇಳಿಕೆ ಇದಕ್ಕೆ ಈಗ ಪೂರಕವೆನಿಸುತ್ತಿದೆ. 

' ಧೋನಿಯವರ ಪೋಷಕರು ಇಡೀ ಮೀಡಿಯಾ ಧೋನಿ ನಿವೃತ್ತಿ ಘೋಷಿಸಲು ಹೇಳುತ್ತಿವೆ, ನಮಗೂ ಅವರದ್ದು ಸರಿ ಎನಿಸಿದೆ. ಇಂತಹ ಆಸ್ತಿಯನ್ನು ನನಗೂ ನಿರ್ವಹಿಸಲು ಅಸಾಧ್ಯ' ಎಂದು ಅವರು ಹೇಳಿದ್ದಾರೆ. ಇನ್ನು ಮುಂದುವರೆದು 'ಧೋನಿ ಪೋಷಕರಿಗೆ ನಾನು ಇನ್ನು ಒಂದು ವರ್ಷ ಆಡಲು ಹೇಳಿದ್ದೇನೆ. ಈಗಾಗಲೇ 10-12 ವರ್ಷಗಳ ಕಾಲ ಇದನ್ನು ನಿರ್ವಹಿಸಲಾಗಿದೆ. ಇನ್ನು ಒಂದು ವರ್ಷ ಆಡಬಹುದು ಎಂದು ಹೇಳಿರುವುದಾಗಿ " ಕೇಶವ್ ಬ್ಯಾನರ್ಜೀ ತಿಳಿಸಿದ್ದಾರೆ. 

 2020 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ  ಟ್ವೆಂಟಿ ವಿಶ್ವಕಪ್ ವರೆಗೂ ನಿವೃತ್ತಿ ಘೋಷಿಸದಿರಲು ಧೋನಿ ಪೋಷಕರಿಗೆ ಮನವಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. 
 

Trending News