CWG 2022: ದೇಶಕ್ಕೆ ಮತ್ತೊಂದು ಬಂಗಾರದ ಗರಿ: ಗಾಯವಿದ್ದರೂ ಚಿನ್ನ ಗೆದ್ದ ಜೆರೆಮಿ

ಜೆರೆಮಿ ಲಾಲ್ರಿನ್ನುಂಗಾ ಸ್ನ್ಯಾಚ್‌ನಲ್ಲಿ 140 ಕೆಜಿ ಕ್ಲೀನ್ ಆಂಡ್‌ ಜರ್ಕ್‌ನಲ್ಲಿ 160 ಕೆಜಿ ಎತ್ತಿದ್ದಾರೆ. ಈ ಮೂಲಕ ಒಟ್ಟು 300 ಕೆ.ಜಿ ಭಾರ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ.

Written by - Bhavishya Shetty | Last Updated : Jul 31, 2022, 04:24 PM IST
  • ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ
  • ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ
  • ಭಾರತದ ಪದಕ ಪಟ್ಟಿಗೆ ಐದನೇ ಪದಕ ಸೇರ್ಪಡೆ
CWG 2022: ದೇಶಕ್ಕೆ ಮತ್ತೊಂದು ಬಂಗಾರದ ಗರಿ: ಗಾಯವಿದ್ದರೂ ಚಿನ್ನ ಗೆದ್ದ ಜೆರೆಮಿ  title=
CWG 2022

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ 22 ನೇ ಆವೃತ್ತಿಯಲ್ಲಿ ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಭಾರತವು ಚಿನ್ನ ಗೆದ್ದಿದೆ. ಜೆರೆಮಿ ಲಾಲ್ರಿನ್ನುಂಗಾ ಅವರು ಬಂಗಾರ ಮುಡಿಗೇರಿಸಿಕೊಳ್ಳುವ ಮೂಲಕ ಭಾರತಕ್ಕೆ ಐದನೇ ಪದಕ ತಂದುಕೊಟ್ಟಿದ್ದಾರೆ. 

ಇದನ್ನೂ ಓದಿ: Commonwealth Games 2022: ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟ ಮೀರಾಬಾಯಿ ಚಾನು

ಜೆರೆಮಿ ಲಾಲ್ರಿನ್ನುಂಗಾ ಸ್ನ್ಯಾಚ್‌ನ 140 ಕೆಜಿ ಕ್ಲೀನ್ ಆಂಡ್‌ ಜರ್ಕ್‌ನಲ್ಲಿ 160 ಕೆಜಿ ಎತ್ತಿದ್ದಾರೆ. ಈ ಮೂಲಕ ಒಟ್ಟು 300 ಕೆ.ಜಿ ಭಾರ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ.

ಜೆರೆಮಿ ಲಾಲ್ರಿನ್ನುಂಗಾ ಸ್ನ್ಯಾಚ್ ಸುತ್ತಿನ ಮೊದಲ ಪ್ರಯತ್ನದಲ್ಲಿ 136 ಕೆಜಿ, ಎರಡನೇ ಪ್ರಯತ್ನದಲ್ಲಿ 140 ಕೆ.ಜಿ ಭಾರ ಎತ್ತಿದ್ದರು. ಆದರೆ ಮೂರನೇ ಪ್ರಯತ್ನದಲ್ಲಿ 143 ಕೆಜಿ ಎತ್ತಲು ಪ್ರಯತ್ನಿಸಿ ವಿಫಲರಾದರು. ಈ ಮೂಲಕ ಸ್ನ್ಯಾಚ್ ಸುತ್ತಿನಲ್ಲಿ ಅವರ ಅತ್ಯುತ್ತಮ 140 ಕೆ.ಜಿ ಆಗಿದೆ. 

ಆದರೆ ಜೆರೆಮಿ ಲಾಲ್ರಿನ್ನುಂಗಾ ಅವರು ತಮ್ಮ ಮೊದಲ ಕ್ಲೀನ್ ಮತ್ತು ಜರ್ಕ್‌ನಲ್ಲಿ 154 ಕೆಜಿ ಮತ್ತು ಎರಡನೇ ಪ್ರಯತ್ನದಲ್ಲಿ 160 ಕೆಜಿ ಎತ್ತಿದ್ದರು. ಈ ಎಲ್ಲದರ ನಡುವೆ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಎಂತಹದ್ದೇ ಸಮಸ್ಯೆ ಇದ್ದರೂ ಸಹ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ ಜೆರೆಮಿ. 

​ಇದನ್ನೂ ಓದಿ: Commonwealth Games 2022 : ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 4ನೇ ಪದಕ : ಬೆಳ್ಳಿಗೆ ಮುತ್ತಿಕ್ಕಿದ ಬಿಂದಿಯಾರಾಣಿ!

ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮೂರನೇ ಪದಕ: 
ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತವು ಈಗ ಒಟ್ಟು 5 ಪದಕಗಳನ್ನು ಪಡೆದುಕೊಂಡಿದೆ. ಜೆರೆಮಿ ಲಾಲ್ರಿನ್ನುಂಗಾಗೂ ಮೊದಲು, ಸಂಕೇತ್ ಸರ್ಗರ್, ಗುರುರಾಜ್ ಪೂಜಾರಿ, ಮೀರಾಬಾಯಿ ಚಾನು ಮತ್ತು ಬಿಂದ್ಯಾರಾಣಿ ದೇವಿ ಭಾರತಕ್ಕಾಗಿ ಪದಕ ತಂದುಕೊಟ್ಟಿದ್ದಾರೆ. ಜೆರೆಮಿ ಲಾಲ್ರಿನ್ನುಂಗಾ ಅವರು 2018 ರ ಯೂತ್ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತರಾಗಿದ್ದಾರೆ. ಅಷ್ಟೇ ಅಲ್ಲದೆ, 2021 ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿಯೂ ಅವರು ಚಿನ್ನದ ಪದಕವನ್ನು ಗೆದ್ದಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News