CSK vs KKR Prediction: ಇರ್ವರ ನಡುವೆ ಗೆಲ್ಲುವವರು ಯಾರು?

ಬಹುನಿರೀಕ್ಷಿತ ಐಪಿಎಲ್ 2022 ರ ಆವೃತ್ತಿಗೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಮೂಲಕ ವಾಂಖೆಡ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಆ ಮೂಲಕ ಇಂದಿನಿಂದ ಅಭಿಮಾನಿಗಳಿಗೆ ಕ್ರಿಕೆಟ್ ನ ರಸದೌತಣ ಸಿಗಲಿದೆ.

Last Updated : Mar 26, 2022, 04:20 PM IST
  • ಐಪಿಎಲ್ 2022 (IPL 2022) ರ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ತಂಡದಲ್ಲಿ 4 ಆಟಗಾರರನ್ನು ಉಳಿಸಿಕೊಂಡಿದೆ.
  • ಅದರಲ್ಲಿ ಪ್ರಮುಖವಾಗಿ ಎಂಎಸ್ ಧೋನಿ,ರವೀಂದ್ರ ಜಡೇಜಾ, ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ಸೇರಿದ್ದಾರೆ.
CSK vs KKR Prediction: ಇರ್ವರ ನಡುವೆ ಗೆಲ್ಲುವವರು ಯಾರು?  title=

ನವದೆಹಲಿ: ಬಹುನಿರೀಕ್ಷಿತ ಐಪಿಎಲ್ 2022 ರ ಆವೃತ್ತಿಗೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಮೂಲಕ ವಾಂಖೆಡ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಆ ಮೂಲಕ ಇಂದಿನಿಂದ ಅಭಿಮಾನಿಗಳಿಗೆ ಕ್ರಿಕೆಟ್ ನ ರಸದೌತಣ ಸಿಗಲಿದೆ.

ಇಂತಹ ಸಂದರ್ಭದಲ್ಲಿ ಅಭಿಮಾನಿಗಳಿಗೆ ತಮ್ಮ ಫೆವರಿಟ್ ತಂಡಗಳ ಗೆಲುವಿನ ಗುರಿತಾಗಿ ಲೆಕ್ಕಾಚಾರವನ್ನು ಹಾಕುತ್ತಲೇ ಇರುತ್ತಾರೆ.ಹಾಗಾದರೆ ಈ ಹಿನ್ನಲೆಯಲ್ಲಿ ಮೊದಲ ಪಂದ್ಯದಲ್ಲಿನ ತಂಡಗಳ ಬಲಾ ಬಲಗಳ ಕುರಿತಾದ ಸಾಧ್ಯತೆಗಳನ್ನು ನಾವು ಈಗ ನಿಮ್ಮ ಮುಂದೆ ಪ್ರಸ್ತುತಪಡಿಸುವ ಪ್ರಯತ್ನವನ್ನು ಮಾಡುತ್ತೇವೆ.

ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಆಗಿರುವ ತಂಡಗಳೇ ಈಗ ಮೊದಲ ಪಂದ್ಯವನ್ನು ಎದುರಿಸುತ್ತಿರುವುದರಿಂದ ಮೊದಲ ಪಂದ್ಯ ಇನ್ನಷ್ಟು ಕುತೂಹಲಕಾರಿಯಾಗಿರಲಿದೆ.ಈಗಾಗಲೇ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿರುವ ಚೆನ್ನೈ ತಂಡವು ಸಹಜವಾಗಿ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನ್ ಅಪ್ ಹೊಂದಿರುವ ತಂಡವಾಗಿದೆ.ಈಗ ಧೋನಿ ಅವರು ನಾಯಕತ್ವದ ಜವಾಬ್ದಾರಿಯನ್ನು ರವೀಂದ್ರ ಜಡೇಜಾ ಅವರಿಗೆ ಹಸ್ತಾಂತರಿಸಿರುವುದರಿಂದ ಇದು ತಂಡದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ.

ಇದನ್ನೂ ಓದಿ- ಈ ಮೂರು ಕಾರಣಗಳಿಂದ CSK IPL 2022 ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ..!

ಐಪಿಎಲ್ 2022 (IPL 2022) ರ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ತಂಡದಲ್ಲಿ 4 ಆಟಗಾರರನ್ನು ಉಳಿಸಿಕೊಂಡಿದೆ.ಅದರಲ್ಲಿ ಪ್ರಮುಖವಾಗಿ ಎಂಎಸ್ ಧೋನಿ,ರವೀಂದ್ರ ಜಡೇಜಾ, ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ಸೇರಿದ್ದಾರೆ. ಇನ್ನೂ ಹರಾಜಿನ ಸಮಯದಲ್ಲಿ, ತಂಡವು ಕೆಲವು ನಿರ್ಣಾಯಕ ಆಟಗಾರರಾದ ಡ್ವೇನ್ ಬ್ರಾವೋ, ಅಂಬಟಿ ರಾಯುಡು, ದೀಪಕ್ ಚಹಾರ್, ಆಡಮ್ ಮಿಲ್ನೆ ಮತ್ತು ಶಿವಂ ದುಬೆ ಅವರನ್ನು ಖರೀದಿಸಿದೆ.

ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿರುವ ಶ್ರೇಯಸ್ ಅಯ್ಯರ್ ಅವರು ಕೊಲ್ಕತ್ತಾ ತಂಡದ ನೇತೃತ್ವವನ್ನು ವಹಿಸಿದ್ದಾರೆ.ಹಾಗಾಗಿ ಇದು ಕೋಲ್ಕತ್ತಾ (CSK vs KKR) ತಂಡಕ್ಕೆ ವರವಾಗಿ ಪರಿಣಮಿಸಲಿದೆ.ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆಂಡ್ರೆ ರಸೆಲ್, ಸುನಿಲ್ ನರೈನ್, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಅವರನ್ನು ತಮ್ಮ ತಂಡದಲ್ಲಿ ಉಳಿಸಿಕೊಂಡಿದೆ.ಐಪಿಎಲ್ 2022 ಹರಾಜಿನ ಸಮಯದಲ್ಲಿ, ಶ್ರೇಯಸ್ ಅಯ್ಯರ್, ಪ್ಯಾಟ್ ಕಮಿನ್ಸ್, ನಿತೀಶ್ ರಾಣಾ, ಶಿವಂ ಮಾವಿ, ಟಿಮ್ ಸೌಥಿರಂತಹ  ಮುಂತಾದ ಪ್ರಮುಖ ಆಟಗಾರರನ್ನು ಖರೀದಿಸಿದೆ.

ಉಭಯ ತಂಡಗಳ ಈ ಹಿಂದಿನ ದಾಖಲೆ ಏನು ಹೇಳುತ್ತೆ?

ಇದುವರೆಗೆ ಚೆನ್ನೈ ತಂಡವು ಕೊಲ್ಕತ್ತಾ  ತಂಡದ ವಿರುದ್ಧ 26  ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಚೆನ್ನೈ ತಂಡವು 17 ಪಂದ್ಯಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.ಇನ್ನೊಂದೆಡೆಗೆ ಕೊಲ್ಕತ್ತಾ ತಂಡವು 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

ಇದನ್ನೂ ಓದಿ- CSK : ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ಎಂಎಸ್ ಧೋನಿ!

ಟಾಸ್ ಲೆಕ್ಕಾಚಾರ: 

ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಚೇಸಿಂಗ್ ಮಾಡಲು ಉತ್ತಮ ಸ್ಥಳವಾಗಿದೆ.ಸಾಮಾನ್ಯವಾಗಿ ಇಲ್ಲಿ ಇದುವರೆಗೆ ನಡೆದಿರುವ IPL ಮತ್ತು T20I ಗಳಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡವು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 7 ಟಿ20ಐ ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯವನ್ನು ಗೆದ್ದಿದೆ.

ಈ ಕ್ರೀಡಾಂಗಣದಲ್ಲಿ 180 ರಿಂದ 200 ಸ್ಕೋರ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವಾಗುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News