4 4 4 6 6 0… ಬ್ಯಾಕ್ ಟು ಬ್ಯಾಕ್ ಸಿಕ್ಸರ್-ಬೌಂಡರಿ… ಟೀಂ ಇಂಡಿಯಾ ಆಟಗಾರನ ಅಬ್ಬರದ ‘ಯಶಸ್ವಿ’ ಅರ್ಧಶತಕ

Yashasvi Jaiswal Explosive Batting: ಯಶಸ್ವಿ ಜೈಸ್ವಾಲ್ ತಮ್ಮ T20 ಅಂತರಾಷ್ಟ್ರೀಯ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಬಾರಿಸಿದ್ದಾರೆ. 25 ಎಸೆತಗಳಲ್ಲಿ 53 ರನ್’ಗಳ ಕಿಲ್ಲರ್ ಇನ್ನಿಂಗ್ಸ್ ಆಡಿದ ಯಶಸ್ವಿ ಜೈಸ್ವಾಲ್ ಅವರ ಇನ್ನಿಂಗ್ಸ್‌’ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಸೇರಿತ್ತು.

Written by - Bhavishya Shetty | Last Updated : Nov 26, 2023, 08:47 PM IST
    • 21ರ ಹರೆಯದ ಭಾರತೀಯ ಆಟಗಾರ ಯಶಸ್ವಿ ಜೈಸ್ವಾಲ್
    • ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದಾರೆ
    • T20 ಅಂತರಾಷ್ಟ್ರೀಯ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಬಾರಿಸಿದ್ದಾರೆ
4 4 4 6 6 0… ಬ್ಯಾಕ್ ಟು ಬ್ಯಾಕ್ ಸಿಕ್ಸರ್-ಬೌಂಡರಿ… ಟೀಂ ಇಂಡಿಯಾ ಆಟಗಾರನ ಅಬ್ಬರದ ‘ಯಶಸ್ವಿ’ ಅರ್ಧಶತಕ  title=
Yashasvi Jaiswal

Yashasvi Jaiswal Explosive Batting: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದಾರೆ. ಕಾಂಗರೂ ಬೌಲರ್‌’ಗಳ ವಿರುದ್ಧ ಅಬ್ಬರಿಸಿದ 21ರ ಹರೆಯದ ಭಾರತೀಯ ಆಟಗಾರ ಯಶಸ್ವಿ ಜೈಸ್ವಾಲ್ ಅರ್ಧಶತಕದ ಆಟವನ್ನಾಡಿದ್ದಾರೆ.

ಇದನ್ನೂ ಓದಿ:  ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದೂ ಪಂದ್ಯವನ್ನು ಸೋಲದೆ 2 ಬಾರಿ ವಿಶ್ವಕಪ್ ಗೆದ್ದಿದೆ ಈ 2 ತಂಡ: ಯಾವುದದು ಗೊತ್ತಾ?

ಯಶಸ್ವಿ ಜೈಸ್ವಾಲ್ ತಮ್ಮ T20 ಅಂತರಾಷ್ಟ್ರೀಯ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಬಾರಿಸಿದ್ದಾರೆ. 25 ಎಸೆತಗಳಲ್ಲಿ 53 ರನ್’ಗಳ ಕಿಲ್ಲರ್ ಇನ್ನಿಂಗ್ಸ್ ಆಡಿದ ಯಶಸ್ವಿ ಜೈಸ್ವಾಲ್ ಅವರ ಇನ್ನಿಂಗ್ಸ್‌’ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಸೇರಿತ್ತು.

ಭಾರತೀಯ ಇನ್ನಿಂಗ್ಸ್‌’ನ ನಾಲ್ಕನೇ ಓವರ್‌’ನಲ್ಲಿ ಯಶಸ್ವಿ ಜೈಸ್ವಾಲ್ ಅವರು ಆಸ್ಟ್ರೇಲಿಯಾದ ಬೌಲರ್ ಶಾನ್ ಅಬಾಟ್ ಎಸೆದ ಬಾಲ್’ಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬೌಂಡರಿ ಬಾರಿಸಿದ್ದರು. ಅದೊಂದು ಓವರ್’ನಲ್ಲಿ 4, 4, 4, 6, 6, 0 ರನ್ ಗಳಿಸಿ ಒಟ್ಟು 24 ರನ್ ಕಲೆ ಹಾಕಿದರು.

ಯಶಸ್ವಿ ಜೈಸ್ವಾಲ್ 11 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 177.90 ಸ್ಟ್ರೈಕ್ ರೇಟ್‌’ನಲ್ಲಿ 322 ರನ್ ಗಳಿಸಿದ್ದಾರೆ. ಅದರಲ್ಲಿ  1 ಶತಕ ಹಾಗೂ 2 ಅರ್ಧ ಶತಕ ಸೇರಿವೆ.

ಇದನ್ನೂ ಓದಿ: ಟೋಪಿ ಧರಿಸಿ ತಾಯಿಯೊಂದಿಗೆ ನಿಂತಿರುವ ಈ ಬಾಲಕ ಭಾರತದ ಖ್ಯಾತ ಕ್ರಿಕೆಟಿಗ-ಸ್ಟಾರ್ ನಟನ ಅಳಿಯ! 99 ಕೋಟಿ ಒಡೆಯ ಈತ ಯಾರೆಂದು ಗೊತ್ತಾಯ್ತ?

ಯಶಸ್ವಿ ಜೈಸ್ವಾಲ್ ಐಪಿಎಲ್ 2023ರ 14 ಪಂದ್ಯಗಳಲ್ಲಿ 163.61 ಸ್ಟ್ರೈಕ್ ರೇಟ್‌’ನಲ್ಲಿ 82 ಬೌಂಡರಿ ಮತ್ತು 26 ಸಿಕ್ಸರ್‌ ಒಳಗೊಂಡಂತೆ 625 ರನ್ ಗಳಿಸಿದ್ದಾರೆ. ಅದರಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳು ಸೇರಿವೆ. ಜೈಸ್ವಾಲ್ ಅವರ ಅತ್ಯುತ್ತಮ ಸ್ಕೋರ್ 124 ರನ್. ಈತನನ್ನು ಭಾರತದ ಮುಂದಿನ ಸ್ಟಾರ್ ಓಪನರ್ ಆಗಬಹುದು ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News