T20 Series Postponed: ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್, ಈ ಟಿ20 ಸರಣಿ ಮುಂದೂಡಿಕೆ

IND vs AUS: 2023ರ ವಿಶ್ವಕಪ್ ಫೈನಲ್‌ ಪಂದ್ಯದ ಕೇವಲ ನಾಲ್ಕು ದಿನಗಳ ಬಳಿಕ ಎಂದರೆ ಇಂದಿನಿಂದ (ನವೆಂಬರ್ 23) ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ T20 ಸರಣಿಯನ್ನು ಆಯೋಜಿಸಲಾಗಿದೆ. ಈ ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಮೊದಲ ಟಿ20 ಸರಣಿ ಆರಂಭಕ್ಕೂ ಮುನ್ನವೇ ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದಿದೆ.  

Written by - Yashaswini V | Last Updated : Nov 23, 2023, 02:46 PM IST
  • ತನ್ನ ಆಟಗಾರರಿಗೆ ಈ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿಶ್ರಾಂತಿ ನೀಡುವ ನಿಟ್ಟಿನಲ್ಲಿ ಪಿ‌ಸಿ‌ಬಿ ಮಹತ್ವದ ನಿರ್ಧಾರ
  • 2024ರ ಮೇ ತಿಂಗಳಿಂದಲ್ಲಿ ನಿಗದಿಯಾಗಿದ್ದ ಟಿ20 ಸರಣಿ ಮುಂದೂಡಿಕೆ
T20 Series Postponed: ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್, ಈ ಟಿ20 ಸರಣಿ ಮುಂದೂಡಿಕೆ  title=

PAK vs NED T20 Series Postponed: ಇಂದಿನಿಂದ (ನವೆಂಬರ್ 23) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ದಿನಗಳ ಟಿ20 ಸರಣಿಯನ್ನು ಆಯೋಜಿಸಲಾಗಿದ್ದು, ಈ ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದಿದೆ. ಮೇ 2024 ರಲ್ಲಿ ನಿಗದಿಯಾಗಿದ್ದ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಟಿ20 ಸರಣಿಯನ್ನು ಮುಂದೂಡಲಾಗಿದೆ.  ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಯು ಈ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿ‌ಸಿ‌ಬಿ) ವಿನಂತಿ ಸ್ವೀಕರಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. 

ವಾಸ್ತವವಾಗಿ, ಪಾಕಿಸ್ತಾನ ಕ್ರಿಕೆಟ್ ತಂಡ ಮುಂದಿನ ವರ್ಷ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.  ಇದಕ್ಕೂ ಮೊದಲು,  ಪಾಕಿಸ್ತಾನ ಮಂಡಳಿಯು ನೆದರ್ಲೆಂಡ್ಸ್‌ನೊಂದಿಗೆ 3 ಪಂದ್ಯಗಳ ಟಿ 20 ಸರಣಿಯ ವೇಳಾಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೀಗ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಸರಣಿಯನ್ನು ಮುಂದೂಡಬೇಕಾಗಿದೆ. ಪಿಸಿಬಿಯ ಕೋರಿಕೆಯ ಮೇರೆಗೆ 2024 ರಲ್ಲಿ ಪಾಕಿಸ್ತಾನದ ನೆದರ್ಲ್ಯಾಂಡ್ಸ್ ಪ್ರವಾಸವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- IND vs AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಾರಣಾಂತಿಕ ಬ್ಯಾಟ್ಸ್‌ಮನ್ ಎಂಟ್ರಿ

ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಟಿ20 ಸರಣಿ ಮುಂದೂಡಿಕೆ ಬಗ್ಗೆ ವರದಿ ಮಾಡಿರುವ Cricbuzz, ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಯು ಪಿ‌ಸಿ‌ಬಿಯಿಂದ ಸರಣಿಯನ್ನು ಮುಂದೂಡಲು ವಿನಂತಿಯನ್ನು ಸ್ವೀಕರಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಎರಡೂ ಮಂಡಳಿಗಳು ಈಗ ಸರಣಿಯನ್ನು ಮರುಹೊಂದಿಸಲು ಆಯ್ಕೆಗಳನ್ನು ಅನ್ವೇಷಿಸುತ್ತಿವೆ ಎಂದು ವರದಿಯಾಗಿದೆ.

ವಾಸ್ತವವಾಗಿ, ಪಾಕಿಸ್ತಾನವು ಮೂರು ಟೆಸ್ಟ್ ಪಂದ್ಯಗಳಿಗಾಗಿ ಮುಂದಿನ ಆಸ್ಟ್ರೇಲಿಯಾ ಪ್ರವಾಸವನ್ನು ನಿಗದಿಪಡಿಸಿದೆ ಮತ್ತು ನಂತರ ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಈ ಮಧ್ಯೆ ಪಾಕ್ ತಂಡ ತಮ್ಮದೇ ಆದ ಪಾಕಿಸ್ತಾನ್ ಸೂಪರ್ ಲೀಗ್ (PSL) ಅನ್ನು ಹೊಂದಿದ್ದು ಪಾಕ್ ತಂಡದ ಪ್ರಮುಖ ಆಟಗಾರರು ಈ ಎಲ್ಲಾ ಸರಣಿಗಳು ಮತ್ತು ಲೀಗ್‌ಗಳಲ್ಲಿ ಆಡುತ್ತಾರೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಈ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿಶ್ರಾಂತಿ ನೀಡುವ ನಿಟ್ಟಿನಲ್ಲಿ ಮೇ 2024 ರಲ್ಲಿ ನಡೆಯಬೇಕಿದ್ದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ಐ ಸರಣಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಆಸ್ಟ್ರೇಲಿಯಾ 2023ರ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು ಕರ್ನಾಟಕದ ಈ ಮಹಿಳೆ! ಮಂಗಳೂರಿನ ಆ ನಾರಿ ಯಾರು ಗೊತ್ತೇ?

ಪಾಕಿಸ್ತಾನದ ಅಂತಾರಾಷ್ಟ್ರೀಯ ವೇಳಾಪಟ್ಟಿ ಈ ಕೆಳಕಂಡಂತಿದೆ:
* ಡಿಸೆಂಬರ್ 6 ರಿಂದ ಜನವರಿ 7 ರವರೆಗೆ ಆಸ್ಟ್ರೇಲಿಯಾ ಪ್ರವಾಸ - 3 ಟೆಸ್ಟ್ ಪಂದ್ಯಗಳು
* ಜನವರಿ 12 ರಿಂದ ಜನವರಿ 21 ರವರೆಗೆ ನ್ಯೂಜಿಲೆಂಡ್ ಪ್ರವಾಸ - 5 ಟಿ20ಐಗಳು
* ಏಪ್ರಿಲ್‌ನಲ್ಲಿ ಪಾಕಿಸ್ತಾನದ ನ್ಯೂಜಿಲೆಂಡ್ ಪ್ರವಾಸ - 5 ಟಿ20ಐಗಳು
* ಮೇ 22 ರಿಂದ ಮೇ 30 ರವರೆಗೆ ಇಂಗ್ಲೆಂಡ್ ಪ್ರವಾಸ - 4 ಟಿ20ಐಗಳು
* 2024 ಜೂನ್‌ನಲ್ಲಿ ಟಿ20 ವಿಶ್ವಕಪ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News