ತಾನು ಧರಿಸಿದ್ದ ಶರ್ಟ್’ನಿಂದಲೇ ಅಭಿಮಾನಿಯ ಬೈಕ್ ಕ್ಲೀನ್ ಮಾಡಿದ ಧೋನಿ: ವಿಡಿಯೋ ವೈರಲ್

MS Dhoni Viral Video: ಧೋನಿಗೆ ಸಂಬಂಧಿಸಿದ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅದರಲ್ಲಿ ಅಭಿಮಾನಿಯೊಬ್ಬರ ಬೈಕ್ ಅನ್ನು ಟೀ ಶರ್ಟ್ ನಿಂದ ಕ್ಲೀನ್ ಮಾಡುವುದನ್ನು ಕಾಣಬಹುದು.

Written by - Bhavishya Shetty | Last Updated : Nov 26, 2023, 05:04 PM IST
    • ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಮಹೇಂದ್ರ ಸಿಂಗ್ ಧೋನಿ
    • ಧೋನಿಗೆ ಸಂಬಂಧಿಸಿದ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ
    • ಅಭಿಮಾನಿಯೊಬ್ಬ ಬೈಕ್‌’ನಲ್ಲಿ ಆಟೋಗ್ರಾಫ್ ಕೇಳುತ್ತಿರುವುದು ಕಂಡು ಬಂದಿದೆ
ತಾನು ಧರಿಸಿದ್ದ ಶರ್ಟ್’ನಿಂದಲೇ ಅಭಿಮಾನಿಯ ಬೈಕ್ ಕ್ಲೀನ್ ಮಾಡಿದ ಧೋನಿ: ವಿಡಿಯೋ ವೈರಲ್ title=
MS Dhoni Viral Video

MS Dhoni Viral Video: ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದರೂ,  ಇಂದಿಗೂ ಐಪಿಎಲ್ ಪಂದ್ಯ ಆಡಲೆಂದು ಕ್ರೀಡಾಂಗಣಕ್ಕೆ ಬಂದರೆ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ.

ಇದನ್ನೂ ಓದಿ: ಸಿರಾಜ್ ಅಂದುಕೊಂಡಿದ್ದೆ, ಆದ್ರೆ ಈ ಯುವ ವೇಗಿಯೇ ಟೀಂ ಇಂಡಿಯಾದ 'ಜೂನಿಯರ್ ಶಮಿ' ಆಗ್ತಾನೆ: ಅಶ್ವಿನ್

ಇನ್ನು ಧೋನಿಗೆ ಸಂಬಂಧಿಸಿದ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅದರಲ್ಲಿ ಅಭಿಮಾನಿಯೊಬ್ಬರ ಬೈಕ್ ಅನ್ನು ಟೀ ಶರ್ಟ್ ನಿಂದ ಕ್ಲೀನ್ ಮಾಡುವುದನ್ನು ಕಾಣಬಹುದು.

ಅಭಿಮಾನಿಯೊಬ್ಬ ಬೈಕ್‌’ನಲ್ಲಿ ಆಟೋಗ್ರಾಫ್ ಕೇಳುತ್ತಿರುವುದು ಕಂಡು ಬಂದಿದೆ. ಹೀಗಾಗಿ ಧೋನಿ ಸಹಿ ಮಾಡುವ ಮೊದಲು ಅಭಿಮಾನಿಯ ಸೂಪರ್ ಬೈಕ್ ಅನ್ನು ತನ್ನ ಟೀ ಶರ್ಟ್‌’ನಿಂದಲೇ ಕ್ಲೀನ್ ಮಾಡುತ್ತಿದ್ದಾರೆ.

 

ಇದನ್ನೂ ಓದಿ:  ಈ ಪೋಟೋದಲ್ಲಿರುವ ಮಗು ಇಂದು ಸ್ಟಾರ್ ನಟಿ… ಜಗತ್ತೇ ಮೆಚ್ಚಿದ ಕ್ರಿಕೆಟಿಗನ ಮಡದಿ! 255 ಕೋಟಿ ಆಸ್ತಿಯ ಒಡತಿ ಯಾರೆಂದು ಗೊತ್ತಾಯ್ತ?

42ರ ಹರೆಯದ ಧೋನಿಗೆ ಬೈಕ್’ಗಳೆಂದರೆ ಪಂಚಪ್ರಾಣ. ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ಧೋನಿ ಬೈಕ್‌’ಗಳ ಸಂಗ್ರಹವನ್ನೇ ಹೊಂದಿದ್ದಾರೆ. ಇದರಲ್ಲಿ ಯಮಹಾ, ಡುಕಾಟಿ, ಕವಾಸಕಿಯಂತಹ ದೊಡ್ಡ ಬ್ರ್ಯಾಂಡ್‌’ಗಳು ಸೇರಿವೆ. ಇದಲ್ಲದೆ, ಕಾನ್ಫೆಡರೇಟ್ X132 ಹೆಲ್‌ ಕ್ಯಾಟ್, ವಿಂಟೇಜ್ ನಾರ್ಟನ್ ಜುಬಿಲಿ 250 ಮತ್ತು ಇನ್ನೂ ಅನೇಕ ಅಪರೂಪದ ಮಾದರಿಯ ಬೈಕ್’ಗಳಿವೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/-l9UZYUp33o?si=_K0khSS1BDeQ7ypt

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News