ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿಗೆ ಪೋಸ್ಟ್ ಶೇರ್ ಮಾಡಿ ಹೀಗಂದ ನಾಯಕ ರೋಹಿತ್ ಶರ್ಮಾ…

Rohit Sharma Instagram Story: ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ತಮ್ಮ ಪತ್ನಿ ರಿತಿಕಾ ಸಜ್ದೇಹ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವಿದೇಶದ್ದು ಎಂದು ತೋರುತ್ತದೆ.

Written by - Bhavishya Shetty | Last Updated : Nov 27, 2023, 04:17 PM IST
    • ರೋಹಿತ್ ಶರ್ಮಾ ಮೊದಲ ಬಾರಿಗೆ ಪೋಸ್ಟ್’ವೊಂದನ್ನು ಹಂಚಿಕೊಂಡಿದ್ದಾರೆ.
    • ಫೋಟೋದಲ್ಲಿ ಅವರು ತಮ್ಮ ಪತ್ನಿ ರಿತಿಕಾ ಸಜ್ದೇಹ್ ಜೊತೆ ಕಾಣಿಸಿಕೊಂಡಿದ್ದಾರೆ
    • ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು ರೋಹಿತ್ ಶರ್ಮಾ
ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿಗೆ ಪೋಸ್ಟ್ ಶೇರ್ ಮಾಡಿ ಹೀಗಂದ ನಾಯಕ ರೋಹಿತ್ ಶರ್ಮಾ… title=
Rohit Sharma

Rohit Sharma Instagram Story: ವಿಶ್ವಕಪ್ 2023ರಲ್ಲಿ ಎಲ್ಲಾ ಲೀಗ್ ಪಂದ್ಯಗಳು ಮತ್ತು ಸೆಮಿಫೈನಲ್‌’ಗಳನ್ನು ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿತ್ತು ಟೀಂ ಇಂಡಿಯಾ. ಆದರೆ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತ, ಕಾಂಗಾರೂ ಪಡೆ ಟ್ರೋಫಿ ಗೆಲ್ಲುವಂತಾಯಿತು.

ಇದನ್ನೂ ಓದಿ: ಬೆಂಗಳೂರಿನ ಫಿಟ್‌ನೆಸ್‌ ಸ್ಟಾರ್ಟಪ್‌ಗೆ ಹಣ ಹೂಡಿದ ಕ್ರಿಕೇಟಿಗ: ತಗ್ಡಾ ರಹೋ ಬೆಂಬಲಿಸಿದ ಧೋನಿ!

ಈ ಸೋಲಿನ ಮೂಲಕ ಕೇವಲ ಭಾರತ ಕ್ರಿಕೆಟ್ ತಂಡವಲ್ಲ ಲಕ್ಷಾಂತರ ಭಾರತೀಯ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದಂತಾಯಿತು. ಮೈದಾನದಲ್ಲೇ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಕಣ್ಣೀರಿಟ್ಟಿದ್ದರು. ಅನೇಕ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌’ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಇದೀಗ ರೋಹಿತ್ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಮೊದಲ ಬಾರಿಗೆ ಪೋಸ್ಟ್’ವೊಂದನ್ನು ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾ ಪೋಸ್ಟ್:

ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ತಮ್ಮ ಪತ್ನಿ ರಿತಿಕಾ ಸಜ್ದೇಹ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವಿದೇಶದ್ದು ಎಂದು ತೋರುತ್ತದೆ. ಫೋಟೊ ನೋಡಿದರೆ ರೋಹಿತ್ ಶರ್ಮಾ ತಮ್ಮ ಕುಟುಂಬದವರ ಜೊತೆ ವಿದೇಶದಲ್ಲಿ ಕಾಲ ಕಳೆಯುತ್ತಿರುವಂತಿದೆ.

2023ರ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು ರೋಹಿತ್ ಶರ್ಮಾ  ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಗರಿಷ್ಠ 765 ರನ್ ಗಳಿಸಿದ್ದರು. ರೋಹಿತ್ 11 ಪಂದ್ಯಗಳಲ್ಲಿ 54.27 ಸರಾಸರಿ ಮತ್ತು 125.95 ಸ್ಟ್ರೈಕ್ ರೇಟ್‌’ನೊಂದಿಗೆ 597 ರನ್ ಗಳಿಸಿದ್ದರು. ಇದರಲ್ಲಿ 66 ಬೌಂಡರಿ ಹಾಗೂ 31 ಸಿಕ್ಸರ್‌ ಸೇರಿದ್ದವು. ಜೊತೆಗೆ ರೋಹಿತ್ 3 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದರು.

ಇದನ್ನೂ ಓದಿ: ಕೊಹ್ಲಿ ಮುಖಕ್ಕೆ ಗಂಭೀರ ಗಾಯ! ಬ್ಯಾಂಡೇಜ್ ಹಾಕಿರೋ ಫೋಟೋ ಹಂಚಿಕೊಂಡ ವಿರಾಟ್

ಟೀಂ ಇಂಡಿಯಾ 2011 ರಿಂದ ಮೂರು ವಿಶ್ವಕಪ್‌’ಗಳನ್ನು ಆಡಿದೆ. ಆದರೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. 2013ರಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿತ್ತು. ಅಂದಿನಿಂದ ಐಸಿಸಿ ಟ್ರೋಫಿ ಬರ ಇನ್ನೂ ಮುಗಿದಿಲ್ಲ. ಇದೀಗ ತಂಡದ ಕಣ್ಣು ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಮೇಲೆ ನೆಟ್ಟಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಈ ಟೂರ್ನಿ ನಡೆಯಲಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News