Virat Kohli : ನಾನು ನಂಬರ್-1, ನನ್ನ ನಂತರ ವಿರಾಟ್.. ಪಾಕ್ ಕ್ರಿಕೆಟಿಗನ ವಿವಾದಿತ ಹೇಳಿಕೆ!

ಪ್ರಸ್ತುತ ಯುಗದ ಟಾಪ್ ಕ್ರಿಕೆಟಿಗರ ಪಟ್ಟಿಯಲ್ಲಿ ಇವರ ಹೆಸರು ಮೊದಲು ಬರುತ್ತದೆ, ಆದ್ರೆ, ಪಾಕ್ ಕ್ರಿಕೆಟಿಗನೊಬ್ಬ ನಾನು ವಿರಾಟ್‌ಗಿಂತ ನಂಬರ್-1 ಎಂದು ಹೇಳಿಕೊಂಡಿದ್ದಾನೆ. ಆಟಗಾರ ಬಾಲಿಶ ಹೇಳಿಕೆ ಕ್ರಿಕೆಟ್ ಲೋಕದಲ್ಲಿ ವಿವಾದ ಸೃಷ್ಟಿಸಿದೆ. 

Written by - Channabasava A Kashinakunti | Last Updated : Jan 25, 2023, 08:39 PM IST
  • ಸ್ವತಃ ನಂಬರ್-1 ಎಂದ ಪಾಕ್ ಕ್ರಿಕೆಟಿಗ
  • ಖುರ್ರಂ ಹೇಳಿದ್ದೇನು?
  • ಬಾಲಿಶ ಹೇಳಿಕೆ ನೀಡಿದ ಖುರ್ರಂ ಯಾರು?
Virat Kohli : ನಾನು ನಂಬರ್-1, ನನ್ನ ನಂತರ ವಿರಾಟ್.. ಪಾಕ್ ಕ್ರಿಕೆಟಿಗನ ವಿವಾದಿತ ಹೇಳಿಕೆ! title=

Khurram Manzoor Statement on Virat Kohli : ಕ್ರಿಕೆಟ್ ಲೋಕದ ದಿಗಜ್ಜ ಆಟಗಾರರಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಒಬ್ಬರು, ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಶತಕ ಸಿಡಿಸಿರುವ ಆಟಗಾರ ಕೊಹ್ಲಿ. ಪ್ರಸ್ತುತ ಯುಗದ ಟಾಪ್ ಕ್ರಿಕೆಟಿಗರ ಪಟ್ಟಿಯಲ್ಲಿ ಇವರ ಹೆಸರು ಮೊದಲು ಬರುತ್ತದೆ, ಆದ್ರೆ, ಪಾಕ್ ಕ್ರಿಕೆಟಿಗನೊಬ್ಬ ನಾನು ವಿರಾಟ್‌ಗಿಂತ ನಂಬರ್-1 ಎಂದು ಹೇಳಿಕೊಂಡಿದ್ದಾನೆ. ಆಟಗಾರ ಬಾಲಿಶ ಹೇಳಿಕೆ ಕ್ರಿಕೆಟ್ ಲೋಕದಲ್ಲಿ ವಿವಾದ ಸೃಷ್ಟಿಸಿದೆ. 

ಇದನ್ನೂ ಓದಿ : Breaking News : ಅದಾನಿ ಗ್ರೂಪ್ ತೆಕ್ಕೆಗೆ ಅಹಮದಾಬಾದ್ ಮಹಿಳಾ IPL ಟೀಂ, ₹1289 ಕೋಟಿ ಬಿಡ್!

ಸ್ವತಃ ನಂಬರ್-1 ಎಂದ ಪಾಕ್ ಕ್ರಿಕೆಟಿಗ

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುಮಾರು 25 ಸಾವಿರ ರನ್ ಗಳಿಸಿರುವ ವಿರಾಟ್ ಅವರ ಹಲವು ದಾಖಲೆಗಳ ಬರೆದಿದ್ದಾರೆ, ಆದ್ರೆ, ಪಾಕಿಸ್ತಾನಿ ಕ್ರಿಕೆಟಿನೊಬ್ಬ ತಾನು ಏಕದಿನ ಮಾದರಿಯಲ್ಲಿ ನಂಬರ್ -1 ಆಟಗಾರ ಎಂದು ಹೇಳಿಕೊಂಡಿದ್ದಾನೆ. 36 ವರ್ಷದ ಖುರ್ರಂ ಮಂಜೂರ್ ಎಂಬ ಆಟಗಾರ ಈ ಹೇಳಿಕೆ ನೀಡಿದ್ದಾರೆ. ಅವರು ವಿರಾಟ್‌ಗಿಂತ ಉತ್ತಮ ಆಟಗಾರ ಮತ್ತು ಈ ಸೂಪರ್‌ಸ್ಟಾರ್ ಭಾರತೀಯ ಕ್ರಿಕೆಟಿಗ ಅವರ ನಂತರ ಬರುತ್ತಾರೆ ಎಂದು ಅವರು ಹೇಳುತ್ತಾರೆ.

ಖುರ್ರಂ ಹೇಳಿದ್ದೇನು?

ಯೂಟ್ಯೂಬ್ ಚಾನೆಲ್‌ ಒಂದರ ಸಂವಾದದಲ್ಲಿ ಮಾತನಾಡಿದ ಪಾಕಿಸ್ತಾನಿ ಕ್ರಿಕೆಟಿಗ ಖುರ್ರಂ ಮಂಜೂರ್, 'ನಾನು ನನ್ನನ್ನು ವಿರಾಟ್‌ನೊಂದಿಗೆ ಹೋಲಿಸುತ್ತಿಲ್ಲ ಆದರೆ ವಾಸ್ತವವನ್ನು ನೋಡಿ. ಅವರು ಟಾಪ್ 10ರಲ್ಲಿದ್ದಾರೆ ಆದರೆ ನಾನು ಏಕದಿನ ಮಾದರಿಯಲ್ಲಿ ವಿಶ್ವದ ನಂ.1 ಆಟಗಾರ. ಕೊಹ್ಲಿ ನನ್ನ ಹಿಂದೆ ಬರುತ್ತಾರೆ. ನನ್ನ ಆಟದ ರೀತಿ ಅವರಿಗಿಂತ ತುಂಬಾ ಚೆನ್ನಾಗಿದೆ. ಅವರು ಸರಾಸರಿ ಆರು ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸುತ್ತಾರೆ ಆದರೆ ನಾನು ಸರಾಸರಿ 5.68 ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸುತ್ತೇನೆ. ಇಷ್ಟಕ್ಕೂ ಮಂಜೂರ್ ನಿಲ್ಲಲಿಲ್ಲ. ಕಳೆದ 10 ವರ್ಷಗಳಿಂದ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, 5ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ಬಾಲಿಶ ಹೇಳಿಕೆ ನೀಡಿದ ಖುರ್ರಂ ಯಾರು?

36ರ ಹರೆಯದ ಮಂಜೂರ್, 'ಕಳೆದ 10 ವರ್ಷಗಳಲ್ಲಿ, ನಾನು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 53 ಸರಾಸರಿಯಲ್ಲಿ ರನ್ ಗಳಿಸಿದ್ದೇನೆ ಮತ್ತು ಪ್ರಸ್ತುತ ನಾನು ವಿಶ್ವದಲ್ಲಿ ಟಿಪ್ 5 ಸ್ಥಾನದಲ್ಲಿದ್ದೇನೆ. ಕಳೆದ 48 ಇನ್ನಿಂಗ್ಸ್‌ಗಳಲ್ಲಿ ನಾನು 24 ಶತಕಗಳನ್ನು ಗಳಿಸಿದ್ದೇನೆ ಆದರೆ ಆಯ್ಕೆಗಾರರು ನನ್ನನ್ನು ನಿರ್ಲಕ್ಷಿಸಿದ್ದಾರೆ. ಇದಕ್ಕೆ ಸರಿಯಾದ ಕಾರಣವನ್ನು ಇಲ್ಲಿಯವರೆಗೆ ಯಾರೂ ಹೇಳಿಲ್ಲ ಎಂದು ಹೇಳಿದ್ದಾನೆ.

 ಖುರ್ರಂ ಮಂಜೂರ್ ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್.  ಖುರ್ರಂ ತಮ್ಮ ವೃತ್ತಿಜೀವನದಲ್ಲಿ 16 ಟೆಸ್ಟ್, 7 ODI ಮತ್ತು 3 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ಅವರು 28.17ರ ಸರಾಸರಿಯಲ್ಲಿ ಒಟ್ಟು 817 ರನ್ ಗಳಿಸಿದರು. ODIಗಳಲ್ಲಿ 33.71 ರ ಸರಾಸರಿಯಲ್ಲಿ 236 ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ 11 ರನ್ ಗಳಿಸಿದ್ದಾನೆ.

ಇದನ್ನೂ ಓದಿ : IND vs AUS : ಆಸ್ಟ್ರೇಲಿಯಾ ಇಡೀ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್!

ಅಂಕಿಅಂಶಗಳು ಏನು ಹೇಳುತ್ತವೆ?

ಅಂಕಿಅಂಶಗಳ ಪ್ರಕಾರ, ಪಾಕ್ ಆಟಗಾರ ಮಂಜೂರ್ ಹೇಳಿರುವ ಹೇಳಿಕೆ ಎಷ್ಟು ಬಾಲಿಶ ಎಂಬುವುದು ನಿಮಗೆ ಗೊತ್ತಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಸರಾಸರಿ 48 ಆದರೆ ODI ಮತ್ತು ಟಿ20 ಗಳಲ್ಲಿ ಇದು ಕ್ರಮವಾಗಿ 57.69 ಮತ್ತು 52.73 ಕ್ಕೆ ಏರುತ್ತದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 14251 ರನ್ ಗಳಿಸಿದ್ದರೆ, ಖುರ್ರಾಮ್ 7922 ರನ್ ಗಳಿಸಿದ್ದಾನೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿರಾಟ್ 50 ಶತಕಗಳನ್ನು ಗಳಿಸಿದ್ದರೆ, ಖುರ್ರಂ ಮಂಜೂರ್ ಇದುವರೆಗೆ ಒಟ್ಟು 27 ಶತಕಗಳನ್ನು ಗಳಿಸಲು ಶಕ್ತರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News