ಈ 3 ಭಾರತೀಯ ಕ್ರಿಕೆಟಿಗರ ವೃತ್ತಿಜೀವನಕ್ಕೆ ಕ್ಷಣಗಣನೆ ಶುರುವಾಗಿದೆಯೇ?: ಶೀಘ್ರವೇ ಗೇಟ್ ಪಾಸ್ ಸಾಧ್ಯತೆ!

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ನಿರಂತರ ಪೈಪೋಟಿ ಹೆಚ್ಚುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಕೆಲ ದಿಗ್ಗಜ ಕ್ರಿಕೆಟಿಗರ ಕ್ರಿಕೆಟ್ ಜೀವನ ಅಂತ್ಯಗೊಳ್ಳುವ ಸಾಧ್ಯತೆ ಇದೆ.

Written by - Puttaraj K Alur | Last Updated : Nov 22, 2021, 01:32 PM IST
  • ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ನಿರಂತರವಾಗಿ ಹೆಚ್ಚುತ್ತಿದೆ ಪೈಪೋಟಿ
  • ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ದಿಗ್ಗಜ ಕ್ರಿಕೆಟಿಗರಿಗೆ ಗೇಟ್ ಪಾಸ್ ಸಾಧ್ಯತೆ
  • ಸದ್ಯದಲ್ಲೇ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಟೀಂ ಇಂಡಿಯಾದಲ್ಲಿ ಸಿದ್ಧತೆ ಆರಂಭ?
ಈ 3 ಭಾರತೀಯ ಕ್ರಿಕೆಟಿಗರ ವೃತ್ತಿಜೀವನಕ್ಕೆ ಕ್ಷಣಗಣನೆ ಶುರುವಾಗಿದೆಯೇ?: ಶೀಘ್ರವೇ ಗೇಟ್ ಪಾಸ್ ಸಾಧ್ಯತೆ! title=
ದಿಗ್ಗಜ ಕ್ರಿಕೆಟಿಗರಿಗೆ ಗೇಟ್ ಪಾಸ್ ಸಾಧ್ಯತೆ

ನವದೆಹಲಿ: ಟೀಂ ಇಂಡಿಯಾ(Team India)ದಲ್ಲಿ ಸ್ಥಾನ ಪಡೆಯಲು ನಿರಂತರವಾಗಿ ಪೈಪೋಟಿ ಹೆಚ್ಚುತ್ತಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕೆಲ ದಿಗ್ಗಜ ಕ್ರಿಕೆಟಿಗರ ಕ್ರಿಕೆಟ್ ಜೀವನ ಅಂತ್ಯಗೊಳ್ಳುವ ಸಾಧ್ಯತೆ ಇದೆ. ತಂಡದಲ್ಲಿ ಯುವಕರಿಗೆ ಸ್ಥಾನ ನೀಡುವ ನಿಟ್ಟಿನಲ್ಲಿ ಸದ್ಯದಲ್ಲೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಟೀಂ ಇಂಡಿಯಾದಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ.

ನವೆಂಬರ್ 25ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ(India Vs New Zealand Test Series)ಯಲ್ಲಿ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ಕೆ.ಎಸ್.ಭರತ್ ಮತ್ತು ಪ್ರಸಿದ್ಧ ಕೃಷ್ಣ ಅವರಿಗೆ ಅವಕಾಶ ಸಿಕ್ಕಿದೆ. ಪ್ರತಿಯೊಬ್ಬ ಕ್ರಿಕೆಟಿಗನು ತನ್ನ ದೇಶಕ್ಕಾಗಿ ಕ್ರಿಕೆಟ್‌ನ ಎಲ್ಲಾ 3 ಸ್ವರೂಪಗಳಲ್ಲಿ ಆಡಲು ಬಯಸುತ್ತಾನೆ. ಆದರೆ ಕೆಲವೇ ಆಟಗಾರರು ಮಾತ್ರ ಸ್ಥಾನ ಪಡೆದುಕೊಳ್ಳಲು ಯಶಸ್ವಿಯಾಗುತ್ತಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೇ ಇದಕ್ಕೆ ಉತ್ತಮ ಉದಾಹರಣೆ. ಟೀಂ ಇಂಡಿಯಾದಲ್ಲಿ ಸದ್ಯ 3 ಆಟಗಾರರ ಸ್ಥಾನ ಅಪಾಯದಲ್ಲಿದೆ. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ. 

ಇದನ್ನೂ ಓದಿ: ಕಿವೀಸ್ ಕಿವಿ ಹಿಂಡಿದ ಭಾರತ: ಸರಣಿ ಕ್ಲೀನ್‌ಸ್ವೀಪ್ ಬಳಿಕ ರಾಹುಲ್ ದ್ರಾವಿಡ್ ಹೇಳಿದ್ದೇನು?

1) ವೃದ್ಧಿಮಾನ್ ಸಹಾ

ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ(MS Dhoni) ಟೀಂ ಇಂಡಿಯಾದಲ್ಲಿ ಸಕ್ರಿಯವಾಗಿರುವವರೆಗೂ ವೃದ್ಧಿಮಾನ್ ಸಹಾ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಹೀಗಾಗಿ ಈ ಆಟಗಾರನಿಗೆ ಏಕದಿನ ಮತ್ತು ಟಿ-20 ಕ್ರಿಕೆಟ್‌ನಲ್ಲಿ ಅವಕಾಶಗಳ ಕೊರತೆ ಕಾಡಿತ್ತು. ಧೋನಿ ನಿವೃತ್ತಿಯ ನಂತರ ಈ ಆಟಗಾರನಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಸಿಕ್ಕಿತು. ಹಿರಿಯ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ(Wriddhiman Saha) ಅವರ ಟೆಸ್ಟ್ ವೃತ್ತಿಜೀವನವು ಈಗ ರಿಷಭ್ ಪಂತ್‌ನಿಂದಾಗಿ ಬಹುತೇಕ ಅಂತ್ಯಗೊಳ್ಳುತ್ತಿದೆ. ಟೆಸ್ಟ್ ಕ್ರಿಕೆಟ್‌ನಿಂದ ಧೋನಿ ನಿವೃತ್ತಿಯ ನಂತರ ಸಹಾ ನಿರಂತರವಾಗಿ ತಂಡದಲ್ಲಿ ವಿಕೆಟ್‌ಕೀಪರ್ ಆಗಿ ಆಡುತ್ತಿದ್ದರು. ಆದರೆ ಪಂತ್ ತಂಡದಲ್ಲಿ ಸ್ಥಾನ ಪಡೆದ ತಕ್ಷಣ ಸಹಾ ಕೆಲವೇ ಕೆಲವು ಅವಕಾಶಗಳನ್ನು ಪಡೆದರು. ಇದೀಗ ವೃದ್ಧಿಮಾನ್ ಸಹಾಗೆ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ. ರಿಷಬ್ ಪಂತ್ ಗಾಯದ ಸಮಸ್ಯೆಯಿಂದ ಹೊರಗುಳಿದಾಗಲೇ ಸಹಾ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು. ಸಹಾಗೆ ಪ್ರಸ್ತುತ 36 ವರ್ಷ ಮತ್ತು ಈ ವಯಸ್ಸಿನಲ್ಲಿ ಅನೇಕ ಕ್ರಿಕೆಟಿಗರು ನಿವೃತ್ತಿ ತೆಗೆದುಕೊಳ್ಳಲು ಮನಸ್ಸು ಮಾಡುತ್ತಾರೆ.

2) ಇಶಾಂತ್ ಶರ್ಮಾ

ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ(Ishant Sharma) 2007ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಈ ಟೆಸ್ಟ್ ಸರಣಿ ಮುಗಿದ ಒಂದೇ ತಿಂಗಳ ಅಂತರದಲ್ಲಿ ಇಶಾಂತ್ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಪಡೆದರು. ಇಶಾಂತ್ ಇದುವರೆಗೆ 80 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 115 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಇಶಾಂತ್ ಟಿ-20 ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲಿಲ್ಲ. ಇಶಾಂತ್ ಅವರ ಏಕದಿನ ವೃತ್ತಿಜೀವನ ಉತ್ತಮವಾಗಿದೆ ಎಂದು ಹೇಳಬಹುದು. ಆದರೆ ಆಯ್ಕೆಗಾರರು 2016ರಿಂದ ಅವರಿಗೆ ಒಂದೇ ಒಂದು ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ನೀಡಿಲ್ಲ. ಟೀಂ ಇಂಡಿಯಾದಲ್ಲಿ ನಿರಂತರವಾಗಿ ಪೈಪೋಟಿ ಹೆಚ್ಚುತ್ತಿದೆ. ಮೊಹಮ್ಮದ್ ಸಿರಾಜ್ ಅವರಂತಹ ಬೌಲರ್‌ಗಳು ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದಿಂದ ಇಶಾಂತ್ ಶರ್ಮಾರಿಗೆ ಗೇಟ್ ಪಾಸ್ ಸಿಗಬಹುದು. ಇಶಾಂತ್ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 311 ವಿಕೆಟ್ ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: Team India: ಒಂದು ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದ ಈ ಆಟಗಾರನ ಕೆರಿಯರ್ ಜಡೇಜಾರಿಂದಾಗಿ ಹಾಳಾಗಿದೆಯಂತೆ!

3) ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ(Ajinkya Rahane) ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಟೀಂ ಇಂಡಿಯಾ ಪರ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಆಡಿದ್ದಾರೆ. 2011ರಲ್ಲಿ ಪಾದಾರ್ಪಣೆ ಮಾಡಿದ ರಹಾನೆ ಒಟ್ಟು 90 ಏಕದಿನ ಮತ್ತು 20 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಈ ಆಟಗಾರನನ್ನು ಟೆಸ್ಟ್ ಸ್ಪೆಷಲಿಸ್ಟ್ ಆಗಿ ನೋಡಲಾಗುತ್ತಿದೆ. ಆಯ್ಕೆದಾರರು ರಹಾನೆಗೆ ಪ್ರತಿಯೊಂದು ಟೆಸ್ಟ್ ಸರಣಿಯಲ್ಲಿ ಆಡಲು ಅವಕಾಶ ನೀಡುತ್ತಾರೆ. ಆದರೆ ಏಕದಿನ ಮತ್ತು ಟಿ.20 ಪಂದ್ಯಗಳಲ್ಲಿ ಅವರನ್ನು ನಿರ್ಲಕ್ಷಿಸಲಾಗುತ್ತದೆ. ಟಿ-20 ಕ್ರಿಕೆಟ್‌(T20 Cricket)ನಲ್ಲಿ 2016ರಿಂದ ಒಂದೇ ಒಂದು ಪಂದ್ಯದಲ್ಲಿ ರಹಾನೆಗೆ ಅವಕಾಶ ಸಿಕ್ಕಿರಲಿಲ್ಲ. 2018ರಿಂದ ಏಕದಿನ ಕ್ರಿಕೆಟ್‌ನಲ್ಲಿಯೂ ಅವರಿಗೆ ಸ್ಥಾನ ನೀಡಲಾಗಿಲ್ಲ. ಇದನ್ನು ನೋಡಿದರೆ ರಹಾನೆ ಈಗ ಏಕದಿನ ಕ್ರಿಕೆಟ್ ಅಥವಾ ಟಿ-20 ಆಡುವುದು ಅಪರೂಪ ಎನಿಸುತ್ತಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ(Team India) ಕಳಪೆ ಪ್ರದರ್ಶನ ನೀಡಿದ ಬಳಿಕ ರಹಾನೆ ಲಕ್ ಬದಲಾಗಿದೆ. ನ.25ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯು ರಹಾನೆಗೆ ಕೊನೆಯ ಅವಕಾಶ ಎಂದು ಹೇಳಲಾಗುತ್ತಿದೆ. ಈ ಸರಣಿಯಲ್ಲಿ ರಹಾನೆ ವಿಫಲವಾದರೆ ಟೆಸ್ಟ್ ಉಪನಾಯಕತ್ವದ ಜೊತೆಗೆ ಅವರು ತಂಡದಿಂದ ಹೊರಬೀಳುವ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ ಅವರಂತಹ ಪ್ರತಿಭಾವಂತ ಯುವ ಬ್ಯಾಟ್ಸ್‌ ಮನ್‌ಗಳು ರಹಾನೆ ಬದಲಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬಹುದು.

ಭಾರತ vs ನ್ಯೂಜಿಲೆಂಡ್ ಸರಣಿ ವೇಳಾಪಟ್ಟಿ

2 ಪಂದ್ಯಗಳ ಟೆಸ್ಟ್ ಸರಣಿ

1ನೇ ಟೆಸ್ಟ್ ಪಂದ್ಯ – ನವೆಂಬರ್ 25 ರಿಂದ 29 - ಕಾನ್ಪುರ - ಬೆಳಗ್ಗೆ 9:30 ರಿಂದ

2ನೇ ಟೆಸ್ಟ್ ಪಂದ್ಯ – ಡಿಸೆಂಬರ್ 3 ರಿಂದ 7 - ಮುಂಬೈ - ಬೆಳಗ್ಗೆ 9:30 ರಿಂದ

===========================================================================================================

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News