Commonwealth Games 2022: ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟ ಮೀರಾಬಾಯಿ ಚಾನು

Mirabai Chanu: ಕಾಮನ್‌ವೆಲ್ತ್ ಕ್ರೀಡಾಕೂಟ 2022 ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ. ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಒಲಿಂಪಿಕ್ ಚಾಂಪಿಯನ್ ಏಕಪಕ್ಷೀಯ ರೀತಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾಳೆ.  

Written by - Nitin Tabib | Last Updated : Jul 30, 2022, 10:55 PM IST
  • ಕಾಮನ್‌ವೆಲ್ತ್ ಕ್ರೀಡಾಕೂಟ 2022ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ.
  • ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದ ಮೀರಾಬಾಯಿ ಚಾನು,
  • ಈ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ.
Commonwealth Games 2022: ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟ ಮೀರಾಬಾಯಿ ಚಾನು title=
Commonwealth Games 2022

Commonwealth Games 2022: ಕಾಮನ್‌ವೆಲ್ತ್ ಕ್ರೀಡಾಕೂಟ 2022ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದ ಮೀರಾಬಾಯಿ ಚಾನು, ಈ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಮೀರಾಬಾಯಿ ವೇಟ್ ಲಿಫ್ಟಿಂಗ್ ನ 49 ಕೆ.ಜಿ ತೂಕದ ವಿಭಾಗದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕವನ್ನು ತನ್ನದಗಿಸಿಕೊಂದಿದ್ದಾಳೆ. ಈ ವರ್ಷ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ.

ದಾಖಲೆ ಬರೆದ ಮೀರಾಬಾಯಿ
ಮೀರಾಬಾಯಿ ಕಾಮನ್‌ವೆಲ್ತ್ ಕ್ರೀಡಾಕೂಟದ 49 ಕೆಜಿ ತೂಕ ವಿಭಾಗದಲ್ಲಿ ಏಕಪಕ್ಷೀಯವಾಗಿ ಚಿನ್ನ ಗೆದ್ದಿದ್ದಾರೆ. ಬೇರೆ ದೇಶಗಳ ಆಟಗಾರ್ತಿಯರೂ ಇಂದು ಮೀರಾಬಾಯಿ ಹತ್ತಿರಕ್ಕೂ ಸುಳಿದಿಲ್ಲ. ಅದು ಸ್ನ್ಯಾಚ್ ಆಗಿರಲಿ ಅಥವಾ ಕ್ಲೀನ್ ಮತ್ತು ಜರ್ಕ್ ಆಗಿರಲಿ. ಮೀರಾಬಾಯಿ ಇತರ ಆಟಗಾರ್ತಿಯರಿಗಿಂತ ತುಂಬಾ ಮುಂಚೂಣಿಯಲ್ಲಿದ್ದರು. ಮೀರಾಬಾಯಿ ಸ್ನ್ಯಾಚ್‌ನಲ್ಲಿ 88 ಕೆಜಿ ಭಾರ ಎತ್ತಿದರೆ,  ಕ್ಲೀನ್ ಅಂಡ್ ಜರ್ಕ್ ನಲ್ಲಿ ಒಟ್ಟು 113 ಕೆ.ಜಿ. ಭಾರವನ್ನು ಎತ್ತಿದ್ದಾರೆ. ತನ್ಮೂಲಕ ಮೀರಾಬಾಯಿಯ ಒಟ್ಟು ಸ್ಕೋರ್ 201 ಆಗಿತ್ತು. ಅಷ್ಟೇ ಅಲ್ಲ ಕಾಮನ್ ವೆಲ್ತ್ ದಾಖಲೆಯೊಂದಿಗೆ ಮೀರಾಬಾಯಿ ಈ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಇದನ್ನೂ ಓದಿ-Commonwealth Games 2022: ವೇಟ್‌ಲಿಫ್ಟಿಂಗ್‌ನಲ್ಲಿ ಸಂಕೇತ್ ಮಹಾದೇವ್ ಸರ್ಗರ್ ಗೆ ಬೆಳ್ಳಿ

ಭಾರತಕ್ಕೆ ಮೊದಲ ಚಿನ್ನ
ಇದು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಇದಾಗಿದೆ. ಈ ಚಿನ್ನದ ಪದಕದೊಂದಿಗೆ ಭಾರತ ಇದುವರೆಗೆ ಒಟ್ಟು 3 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂರೂ ಪದಕಗಳು ಬಂದಿರುವುದು ವೇಟ್ ಲಿಫ್ಟಿಂಗ್ ನಲ್ಲಿ ಮಾತ್ರ. ಮೀರಾಬಾಯಿಗೂ ಮೊದಲು ಭಾರತಕ್ಕೆ ಸಂಕೇತ್ ಮಹದೇವ್ ಬೆಳ್ಳಿ ಮತ್ತು ಗುರುರಾಜ್ ಪೂಜಾರಿ ಕಂಚಿನ ಪದಕಗಳನ್ನು ತಂದು ಕೊಟ್ಟಿದ್ದಾರೆ.

ಇದನ್ನೂ ಓದಿ-Commonwealth Games 2022: 61 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಗುರುರಾಜ ಪೂಜಾರಿಗೆ ಕಂಚು

ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಚಿನ್ನ ಗೆದ್ದಿರುವ ಮೀರಾಬಾಯಿ ಚಾನು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಪ್ರಧಾನಿ ನರಂದ್ರ ಮೋದಿ, 'ಅಸಾಧಾರಣ ಮೀರಾಬಾಯಿ ಚಾನು ಮತ್ತೊಮ್ಮೆ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ! ಬರ್ಮಿಂಗ್ ಹ್ಯಾಮ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಹೊಸ ಕಾಮನ್ ವೆಲ್ತ್ ದಾಖಲೆ ನಿರ್ಮಿಸಿದ್ದಕ್ಕೆ ಪ್ರತಿಯೊಬ್ಬ ಭಾರತೀಯ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಯಶಸ್ಸು ಅನೇಕ ಭಾರತೀಯರಿಗೆ, ವಿಶೇಷವಾಗಿ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ' ಎಂದಿದ್ದಾರೆ.
 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News