ನವದೆಹಲಿ: ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಕಳೆದ ದಿನ ನ್ಯೂಜಿಲೆಂಡ್ ಅನ್ನು 16-13 ರಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿತ್ತು.ಇದೀಗ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದಿದ್ದ ತಂಡವು ಚಿನ್ನದ ಪದಕವನ್ನು ಗೆದ್ದಿದೆ.ಈ ಪದಕ ಪಡೆಯುವ ಮೂಲಕ ಭಾರತೀಯ ಪಡೆ 10ನೇ ಪದಕವನ್ನು ತನ್ನ ಕೊರಳಿಗೆ ಏರಿಸಿಕೊಂಡಿದೆ.ಇನ್ನು ಈ ಸಾಧನೆ ಐತಿಹಾಸಿಕವಾಗಿದ್ದು, ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.
ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಅವರ ತಂಡ ಕ್ವಾರ್ಟೆಟ್ ಪಂದ್ಯದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿ ಪದಕವನ್ನು ಖಾತರಿಪಡಿಸಿಕೊಂಡಿತ್ತು. ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾರ್ಫೋಕ್ ದ್ವೀಪವನ್ನು ಸೋಲಿಸಿದ ಮಹಿಳೆಯರ ಫೋರ್ಸ್ ತಂಡವು ಲಾನ್ ಬೌಲ್ಸ್ ಸ್ಪರ್ಧೆಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು.
✨ History created folks ✨
India win their 1st ever CWG GOLD medal in Lawn Bowls.
👉 Indian quartet of Lovely, Pinki, Nayanmoni & Rupa beat South African team 17-10 in Women's Fours Final.
👉 South Africa are 3 time CWG Champions in this event. #CWG2022India #CWG2022 pic.twitter.com/ZKCqNW0DwP— India_AllSports (@India_AllSports) August 2, 2022
ಇದನ್ನೂ ಓದಿ: ಒಂದೆಡೆ ‘ಜನತಾ ಜಲಧಾರೆ’ ಮತ್ತೊಂದೆಡೆ ಕಣ್ಣೀರಧಾರೆ: ಬಿಜೆಪಿ ವ್ಯಂಗ್ಯ
ಇನ್ನು ಸೋಮವಾರದಂದು ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಇನ್ನು ಈ ಕ್ರೀಡೆಯಲ್ಲಿ 40 ಪದಕಗಳನ್ನು ಹೊಂದಿರುವ ಮತ್ತು ಐದು ಅತ್ಯಂತ ಯಶಸ್ವಿ ಲಾನ್ ಬೌಲ್ಸ್ ತಂಡಗಳಲ್ಲಿ ಒಂದಾಗಿರುವ ತಂಡವನ್ನು ಸೋಲಿಸುವ ಮೂಲಕ ಭಾರತವು ತನ್ನ ಮೊದಲ ಪದಕವನ್ನು ಖಚಿತಪಡಿಸಿಕೊಂಡಿತ್ತು.
ಇದನ್ನೂ ಓದಿ: ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ ವಿತರಣೆ-ಶಶಿಕಲಾ ಜೊಲ್ಲೆ
ನ್ಯೂಜಿಲೆಂಡ್ ತಂಡವನ್ನು 16-13 ಅಂತರದಿಂದ ಸೋಲಿಸಿತ್ತು ಈ ತಂಡ. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಅವರನ್ನೊಳಗೊಂಡ ಭಾರತ ತಂಡ ಸದ್ಯ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದೆ.
ಸದ್ಯ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್‌ನಲ್ಲಿ ಸಹ ಭಾರತ ಚಿನ್ನದ ಪದಕ ಪಡೆಯಲು ಹೋರಾಟ ನಡೆಸಲಿದೆ. ಭಾರತ ಈಗಾಗಲೇ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದ್ದು, ಇಂದು ಮತ್ತಷ್ಟು ಪದಕ ಬೇಟೆ ಮಾಡಲು ಸಿದ್ಧರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.