ಮತ್ತೆ ಗೂಳಿ ಓಟ ಆರಂಭ: ಬೆಂಗಳೂರು ಬುಲ್ಸ್ ಗೆ ಭರ್ಜರಿ ಗೆಲುವು, ಗುಜರಾತ್‌ ಜಯಂಟ್ಸ್‌ಗೂ ಒಲಿದ ಜಯ

ಆಲ್ರೌಂಡ್‌ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ಮನೆಯಂಗಣದಲ್ಲಿ ತಮಿಳು ತಲೈವಾಸ್‌ ವಿರುದ್ಧ 45-28 ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ.

Written by - VISHWANATH HARIHARA | Edited by - Manjunath N | Last Updated : Oct 19, 2022, 11:04 PM IST
  • ಗುಜರಾತ್‌ ಜಯಂಟ್ಸ್‌ ಪರ ನಾಯಕ ಚಂದ್ರನ್‌ ರಂಜಿತ್‌ 13 ಅಂಕಗಳನ್ನು ಗಳಿಸಿ ಪ್ರಥಮಾರ್ಧದಲ್ಲೇ ಸೂಪರ್‌ ಟೆನ್‌ ಸಾಧನೆ ಮಾಡಿದರು.
  • ಪ್ರದೀಪ್‌ ನರ್ವಾಲ್‌ (8) ಹಾಗೂ ಸುರಿಂದರ್‌ ಗಿಲ್‌ (5) ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ನೆರವಾದರು.
  • ಸಮಬಲದ ಹೋರಾಟ ಕಂಡು ಬಂದ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ಆಲೌಟ್‌ ಆದದ್ದು ಅಂಕದಲ್ಲಿನ ಅಂತರಕ್ಕೆ ಕಾರಣವಾಯಿತು.
 ಮತ್ತೆ ಗೂಳಿ ಓಟ ಆರಂಭ: ಬೆಂಗಳೂರು ಬುಲ್ಸ್ ಗೆ ಭರ್ಜರಿ ಗೆಲುವು, ಗುಜರಾತ್‌ ಜಯಂಟ್ಸ್‌ಗೂ ಒಲಿದ ಜಯ title=

ಬೆಂಗಳೂರು:ಆಲ್ರೌಂಡ್‌ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ಮನೆಯಂಗಣದಲ್ಲಿ ತಮಿಳು ತಲೈವಾಸ್‌ ವಿರುದ್ಧ 45-28 ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ.

ಭರತ್‌ ಸೂಪರ್‌ ಟೆನ್‌ (12) ಹಾಗೂ ವಿಕಾಸ್ ಕಂಡೋಲ (7) ಅದ್ಭುತ ರೈಡಿಂಗ್‌ ನೆರವಿನಿಂದ ಬೆಂಗಳೂರು ಬುಲ್ಸ್‌ ತಮಿಳು ತಲೈವಾಸ್‌ ವಿರುದ್ಧ ಜಯ ಗಳಿಸಿದೆ. ನಾಯಕ ಮಹೇಂದರ್‌ ಸಿಂಗ್‌ ಮತ್ತು ಸೌರಭ್‌ ನಂದಾಲ್‌ ಟ್ಯಾಕಲ್‌ನಲ್ಲಿ ತಲಾ 3 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ತಮಿಳು ತಲೈವಾಸ್‌ ಪವನ್‌ ಶೆರಾವತ್‌ ಇಲ್ಲದೆ ಮತ್ತೊಂದು ಪಂದ್ಯವನ್ನು ಸೋತಿತು, ತಂಡದ ಪರ ನರೇಂದರ್‌ ರೈಡಿಂಗ್‌ನಲ್ಲಿ ಸೂಪರ್‌ ಟೆನ್‌ ಸಾಧನೆ ಮಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಇದನ್ನೂ ಓದಿ: "ಚುನಾವಣೆಯನ್ನು ಎದುರಿಟ್ಟುಕೊಂಡು ಸಂಪುಟ ವಿಸ್ತರಿಸಲಾಗಿದೆ ಹೊರತು, ಜನರ ಕಲ್ಯಾಣಕ್ಕಲ್ಲ"

ಪ್ರಥಮಾರ್ಧದಲ್ಲಿ ಬೆಂಗಳೂರು ಮುನ್ನಡೆ: ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ತಮಿಳು ತಲೈವಾಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 18-12 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಬೆಂಗಳೂರು ಬುಲ್ಸ್‌ ಪರ ಭರತ್‌ ಹಾಗೂ ನೀರಜ್‌ ನರ್ವಾಲ್‌ ತಲಾ 5 ರೈಡಿಂಗ್‌ ಅಂಕಗಳನ್ನು ಗಳಿಸಿ ಪ್ರಥಮಾರ್ಧದ ಮುನ್ನಡೆಗೆ ನೆರವಾದರು, ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್‌ ತಂಡಕ್ಕೆ ಈ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ. ತಮಿಳು ತಲೈವಾಸ್‌ ಪರ ನರೇಂದರ್‌ 7 ಅಂಕಗಳನ್ನು ಗಳಿಸಿ ಉತ್ತಮ ಪೈಪೋಟಿ ನೀಡುವಲ್ಲಿ ನೆರವಾದರು. ಟ್ಯಾಕಲ್‌ನಲ್ಲ ತಮಿಳು ತಲೈವಾಸ್‌ 4 ಅಂಕಗಳನ್ನು ಗಳಿಸಿತು. 

ಗುಜರಾತ್‌ ಜಯಂಟ್ಸ್‌ಗೆ ಜಯ

ಮತ್ತೊಂದು ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ 51-45 ಅಂತರದಲ್ಲಿ ಯುಪಿ ಯೋಧಾಸ್‌ ವಿರುದ್ಧ ಜಯ ಗಳಿಸಿತು.ನಾಯಕ ಚಂದ್ರನ್‌ ರಂಜಿತ್‌ (20) ಹಾಗೂ ರಂಜಿತ್‌ (16) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗುಜರಾತ್‌ ಜಯಂಟ್ಸ್‌ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಜಯ ಗಳಿಸಿತು. ಈ ಜಯದೊಂದಿಗೆ ಗುಜರಾತ್‌ ಜಯಂಟ್ಸ್‌ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿಯಿತು.ಯುಪಿ ಯೋಧಾಸ್‌ ಪರ ಪ್ರದೀಪ್‌ ನರ್ವಾಲ್‌ (17 )ಹಾಗೂ ಸುರಿಂದರ್‌ ಗಿಲ್‌ (14) ಉತ್ತಮ ರೈಡಿಂಗ್‌ ಪ್ರದರ್ಶನ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ದ್ವಿತಿಯಾರ್ಧದ ಆರಂಭದಲ್ಲೇ ಗುಜರಾತ್‌ ಜಯಂಟ್ಸ್‌ ಎದುರಾಳಿಯನ್ನು ಆಲೌಟ್‌ ಮಾಡುವ ಮೂಲಕ 25-23 ಅಂಕಗಳಲ್ಲಿ ಮುನ್ನಡೆ ಕಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಂತರದ ಐದು ನಿಮಿಷಗಳ ಅವಧಿಯಲ್ಲಿ ಯುಪಿ ಯೋಧಾಸ್‌ ಎರಡನೇ ಬಾರಿಗೆ ಆಲೌಟ್‌ ಆಗುವ ಮೂಲಕ ಗುಜರಾತ್‌ ಜಯಂಟ್ಸ್‌ 37-29 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. 

ಇದನ್ನೂ ಓದಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ

ಪಂದ್ಯ ಮುಗಿಯಲು 4 ನಿಮಿಷ ಬಾಕಿ ಇರುವಾಗ ಯುಪಿ ಯೋಧಾಸ್‌ ಮತ್ತೊಮ್ಮೆ ಆಲೌಟ್‌ ಆಗುವ ಮೂಲಕ ಗುಜರಾತ್‌ ಜಯಂಟ್ಸ್‌ 49-38 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಜಯದತ್ತ ಹೆಜ್ಜೆ ಹಾಕಿತು.ಉತ್ತಮ ಪೈಪೋಟಿಯಿಂದ ಕೂಡಿದ ಪ್ರಥಮಾರ್ಧದಲ್ಲಿ ಯುಪಿ ಯೋಧಾಸ್‌ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧ 21-19 ಅಂತರದಲ್ಲಿ ಮುನ್ನಡೆದಿತ್ತು. ಪ್ರದೀಪ್‌ ನರ್ವಾಲ್‌ (8) ಹಾಗೂ ಸುರಿಂದರ್‌ ಗಿಲ್‌ (5) ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ನೆರವಾದರು. ಪ್ರದೀಪ್‌ ನರ್ವಾಲ್‌ ಸೂಪರ್‌ ರೈಡ್‌ ಸಾಧನೆ ಪಂದ್ಯದ ಆಕರ್ಷಣೆಯಾಗಿತ್ತು.

ಗುಜರಾತ್‌ ಜಯಂಟ್ಸ್‌ ಪರ ನಾಯಕ ಚಂದ್ರನ್‌ ರಂಜಿತ್‌ 13 ಅಂಕಗಳನ್ನು ಗಳಿಸಿ ಪ್ರಥಮಾರ್ಧದಲ್ಲೇ ಸೂಪರ್‌ ಟೆನ್‌ ಸಾಧನೆ ಮಾಡಿದರು.ರಂಜಿತ್‌ ಒಟ್ಟು ಅಂಕದಲ್ಲಿ ಸೂಪರ್‌ ರೈಡ್‌ ಸಾಧನೆಯೂ ಸೇರಿತ್ತು.ಸಮಬಲದ ಹೋರಾಟ ಕಂಡು ಬಂದ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ಆಲೌಟ್‌ ಆದದ್ದು ಅಂಕದಲ್ಲಿನ ಅಂತರಕ್ಕೆ ಕಾರಣವಾಯಿತು. ತಂಡದ ಪರ ರಾಕೇಶ್‌ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News