ಸರ್ಜರಿ ನಂತರ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಆರೋಗ್ಯದಲ್ಲಿ ಚೇತರಿಕೆ

ಕೊಲೊನ್ ಟ್ಯೂಮರ್ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.ಆದರೆ ಸಂಪೂರ್ಣ ಗುಣಮುಖರಾಗುವವರಗೆ ಅವರು ಇನ್ನೂ ತೀವ್ರ ನಿಗಾ ಘಟಕದಲ್ಲಿಯೇ ಇರುತ್ತಾರೆ ಎನ್ನಲಾಗಿದೆ.

Written by - Zee Kannada News Desk | Last Updated : Sep 11, 2021, 03:20 PM IST
  • ಕೊಲೊನ್ ಟ್ಯೂಮರ್ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.
  • ಆದರೆ ಸಂಪೂರ್ಣ ಗುಣಮುಖರಾಗುವವರಗೆ ಅವರು ಇನ್ನೂ ತೀವ್ರ ನಿಗಾ ಘಟಕದಲ್ಲಿಯೇ ಇರುತ್ತಾರೆ ಎನ್ನಲಾಗಿದೆ.
 ಸರ್ಜರಿ ನಂತರ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಆರೋಗ್ಯದಲ್ಲಿ ಚೇತರಿಕೆ title=
file photo

ನವದೆಹಲಿ: ಕೊಲೊನ್ ಟ್ಯೂಮರ್ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.ಆದರೆ ಸಂಪೂರ್ಣ ಗುಣಮುಖರಾಗುವವರಗೆ ಅವರು ಇನ್ನೂ ತೀವ್ರ ನಿಗಾ ಘಟಕದಲ್ಲಿಯೇ ಇರುತ್ತಾರೆ ಎನ್ನಲಾಗಿದೆ.

"ಸಕ್ರಿಯವಾಗಿ ಸಂಭಾಷಣೆ ನಡೆಸುತ್ತಿದ್ದಾರೆ ಮತ್ತು ಸಹಜ ಸ್ಥಿತಿಗೆ ಬರುವುದು ಅವರಲ್ಲಿ ಕಂಡುಬರುತ್ತಿದೆ ಎಂದು ಸಾವೊ ಪಾಲೊದಲ್ಲಿರುವ ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಲ್ಲಿರುವ ಪೀಲೆ (Pele) ಅವರ ವೈದ್ಯಕೀಯ ತಂಡವು ಹೇಳಿದೆ. ಇನ್ನೊಂದೆಡೆಗೆ ತಮ್ಮ ಅಭಿಮಾನಿಗಳಲ್ಲಿನ ಆತಂಕವನ್ನು ನಿವಾರಿಸಲು 80 ವರ್ಷದ ಪೀಲೆ ಇನ್‌ಸ್ಟಾಗ್ರಾಮ್‌ ನಲ್ಲಿ ತಮ್ಮ ಆರೋಗ್ಯದ ಕುರಿತಾಗಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Yamaha Festive Offers: ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ

'ನನ್ನ ಸ್ನೇಹಿತರೇ, ಪ್ರತಿ ದಿನವೂ ನನಗೆ ಸ್ವಲ್ಪ ಉತ್ತಮ ಎನಿಸುತ್ತಿದೆ. ನಾನು ಮತ್ತೆ ಆಡಲು ಎದುರು ನೋಡುತ್ತಿದ್ದೇನೆ, ಆದರೆ ನಾನು ಇನ್ನೂ ಕೆಲವು ದಿನಗಳವರೆಗೆ ಚೇತರಿಸಿಕೊಳ್ಳಲಿದ್ದೇನೆ"ಎಂದು ಅವರು ಹೇಳಿದರು.

"ನಾನು ಇಲ್ಲಿದ್ದಾಗ, ನನ್ನ ಕುಟುಂಬದೊಂದಿಗೆ ಸಾಕಷ್ಟು ಮಾತನಾಡಲು ಮತ್ತು ವಿಶ್ರಾಂತಿ ಪಡೆಯಲು ನಾನು ಅವಕಾಶವನ್ನು ಪಡೆಯುತ್ತೇನೆ.ಎಲ್ಲಾ ಪ್ರೀತಿಯ ಸಂದೇಶಗಳಿಗೆ ಮತ್ತೊಮ್ಮೆ ಧನ್ಯವಾದಗಳು.ನಾವು ಶೀಘ್ರದಲ್ಲೇ ಮತ್ತೆ ಒಂದಾಗುತ್ತೇವೆ!" ಎಂದು ಅವರು ಬರೆದುಕೊಂಡಿದ್ದಾರೆ.ಆಸ್ಪತ್ರೆಯ ಪ್ರಕಾರ ಶಂಕಿತ ಗಡ್ಡೆಯನ್ನು ಪತ್ತೆ ಮಾಡಲಾಗಿದೆ, ಆಸ್ಪತ್ರೆಯ ಪ್ರಕಾರ, ಪೆಲೆ ಆಗಸ್ಟ್ 31 ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಈ ಪುಟ್ಬಾಲ್ ಆಟಗಾರ ಹಲವು ಬಾರಿ ತನ್ನ ಹೆಂಡತಿಗೆ ಮೋಸ ಮಾಡಿದ್ದನಂತೆ...!

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಡ್ಸನ್ ಅರಾಂಟೆಸ್ ಡೋ ನಾಸ್ಸಿಮೆಂಟೊ, ಪೆಲೆ ಅವರ ನಿಜವಾದ ಹೆಸರು, ಇತ್ತೀಚಿನ ವರ್ಷಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ ಮತ್ತು ಆಗಾಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ.

ಇದನ್ನೂ ಓದಿ : Delhi Rain : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ : ಹಲವು ಪ್ರದೇಶಗಳು ಜಲಾವೃತ

ಪುಟ್ಬಾಲ್ ಕ್ರೀಡೆಯ ಇತಿಹಾಸದಲ್ಲಿ ಮೂರು ವಿಶ್ವಕಪ್‌ಗಳನ್ನು ಗೆದ್ದ ಏಕೈಕ ಆಟಗಾರ  (1958, 1962 ಮತ್ತು 1970), ಪೀಲೆ ಕೇವಲ 17 ನೇ ವಯಸ್ಸಿಗೆ ಅವರು ಪಾದಾರ್ಪಣೆ ಮಾಡಿದರು, ಆತಿಥೇಯ ಸ್ವೀಡನ್ ವಿರುದ್ಧದ ಫೈನಲ್‌ನಲ್ಲಿ ಅವರು ಎರಡು ಗೋಲ್ ಗಳಿಸಿದ್ದರಿಂದಾಗಿ 1958 ರಲ್ಲಿ ಬ್ರೆಜಿಲ್ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು.

ಓ ರೇ" (ದಿ ಕಿಂಗ್) 1977 ರಲ್ಲಿ ನಿವೃತ್ತಿಯಾಗುವ ಮೊದಲು 1,000 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸುವ ಮೂಲಕ ಕ್ರೀಡೆಯಲ್ಲಿ ಅತ್ಯಂತ ಮಹತ್ವದ ವೃತ್ತಿಜೀವನವನ್ನು ಹೊಂದಿದ್ದರು.

ಇದನ್ನೂ ಓದಿ : Delhi Rain : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ : ಹಲವು ಪ್ರದೇಶಗಳು ಜಲಾವೃತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News