ಬುಕ್ಕಿ ಒಬ್ಬ ಕ್ರಿಕೆಟಿಗನನ್ನು ಭೇಟಿಯಾದಾಗ, 'ದಾದಾ' ಕೈಗೊಂಡ ಕ್ರಮ ಏನು?

ಟಿ 20 ಪಂದ್ಯದಲ್ಲಿ, ಒಬ್ಬ ಬುಕ್ಕಿ ಆಟಗಾರನನ್ನು ಭೇಟಿಯಾಗಲು ಪ್ರಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Last Updated : Dec 2, 2019, 08:55 AM IST
ಬುಕ್ಕಿ ಒಬ್ಬ ಕ್ರಿಕೆಟಿಗನನ್ನು ಭೇಟಿಯಾದಾಗ, 'ದಾದಾ' ಕೈಗೊಂಡ ಕ್ರಮ ಏನು? title=
File Photo

ಮುಂಬೈ: ಸೈಯದ್ ಮುಷ್ತಾಕ್ ಅಲಿ(Syed Mushtaq Ali T20) ಟಿ 20 ಪಂದ್ಯಾವಳಿಯಲ್ಲಿ ಬುಕ್ಕಿ ಆಟಗಾರನನ್ನು ಭೇಟಿಯಾಗಿರುವ ಬಗ್ಗೆ ಬಿಸಿಸಿಐ(BCCI)  ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಭಾನುವಾರ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಆಟಗಾರ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ACU) ಮಾಹಿತಿ ನೀಡಿದ್ದಾರೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ (AGM) ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌರವ್ ಗಂಗೂಲಿ, "ಸೈಯದ್ ಮುಷ್ತಾಕ್ ಅಲಿ ಟಿ 20 ಪಂದ್ಯದಲ್ಲೂ ಬುಕ್ಕಿ ಒಬ್ಬ ಆಟಗಾರನನ್ನು ಭೇಟಿಯಾಗಲು ಪ್ರಯತ್ನಿಸಿದರು ಎಂದು ನನಗೆ ತಿಳಿದು ಬಂದಿದೆ. ಆದರೆ ಆತನ ಹೆಸರು ತಿಳಿದುಬಂದಿಲ್ಲ. ಆದರೆ ಅವನನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು ಮತ್ತು ಆಟಗಾರರೇ ಆ ಬುಕ್ಕಿಯ ಬಗ್ಗೆ ಮಾಹಿತಿ ನೀಡಿದ್ದಾರೆ" ಎಂದು ತಿಳಿಸಿದರು.

"ಬುಕ್ಕಿಯೊಬ್ಬ ಆಟಗಾರನನ್ನು ಭೇಟಿಯಾದಾಕ್ಷಣ ಏನೋ ತಪ್ಪು ನಡೆದಿದೆ ಎಂದು ಅರ್ಥೈಸುವುದು ತಪ್ಪು ಎಂದು ತಿಳಿಸಿದ ಸೌರವ್ ಗಂಗೂಲಿ, ನಾವು ಅವರನ್ನು ಸಂಪರ್ಕಿಸುತ್ತೇವೆ.  ಟಿಎನ್‌ಪಿಎಲ್ ಮತ್ತು ಕೆಪಿಎಲ್ ವಿಷಯದಲ್ಲಿ ನಾವು ಆಯಾ ರಾಜ್ಯ ಸಂಘಗಳನ್ನು ಸಂಪರ್ಕಿಸಿದ್ದೇವೆ." ಇಂತಹ ಪ್ರಕರಣಗಳನ್ನು ಎದುರಿಸಲು ಬಿಸಿಸಿಐ ತನ್ನ ಎಸಿಯು ಅನ್ನು ಬಲಪಡಿಸುತ್ತದೆ ದಾದಾ(ಸೌರವ್ ಗಂಗೂಲಿ) ಭರವಸೆ ನೀಡಿದರು.

Trending News