ನವದೆಹಲಿ: ಶನಿವಾರದಂದು ನಡೆದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಕೆನಡಾದ ಆಟಗಾರ್ತಿ ಬಿಯಾಂಕಾ ಆಂಡ್ರೀಸ್ಕು ಸೆರೆನಾ ವಿಲಿಯಮ್ಸ್ ರನ್ನು 6-3, 7-5 ಸೆಟ್‌ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಆ ಮೂಲಕ ಸಾರ್ವಕಾಲಿಕ ದಾಖಲೆ ಸಮವಾಗಿಸುವ ಸೆರೆನಾ ವಿಲಿಯಮ್ಸ್ ಪ್ರಯತ್ನಕ್ಕೆ ಬ್ರೇಕ್ ಹಾಕಿದರು.
A humble and graceful champion.
😍 @Bandreescu_ 😍#USOpen | #WomenWorthWatching pic.twitter.com/vIW84lmWw2
— US Open Tennis (@usopen) September 7, 2019
ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದ ನಂತರ ಪ್ರತಿಕ್ರಿಯಿಸಿರುವ ಆಂಡ್ರೀಸ್ಕು 'ಈ ಗೆಲುವಿನ ಅರ್ಥವನ್ನು ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಹೇಳಿದ್ದಾರೆ. 'ನಾನು ನಿಜಕ್ಕೂ ಕೃತಜ್ಞ ಹಾಗೂ ಹಾರೈಕೆಗಳನ್ನು ಹೊಂದಿದ್ದೇನೆ. ಈ ಕ್ಷಣಕ್ಕೆ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಈ ವರ್ಷ ಕನಸು ನನಸಾಗಿದೆ. ಈ ಕ್ರೀಡೆಯ ನಿಜವಾದ ದಂತಕತೆಯಾಗಿರುವ ಸೆರೆನಾ ವಿರುದ್ಧ ಈ ವೇದಿಕೆಯಲ್ಲಿ ಆಡಲು ಸಾಧ್ಯವಾಗಿರುವ ಬಗ್ಗೆ ಆಂಡ್ರೀಸ್ಕು ಸಂತಸ ವ್ಯಕ್ತಪಡಿಸಿದರು.
O Canada 🇨🇦
Bianca Andreescu becomes the first Canadian to win a Grand Slam singles title.#USOpen | #WomenWorthWatching pic.twitter.com/naCBhTSaAL
— US Open Tennis (@usopen) September 7, 2019
ವೃತ್ತಿಪರ ಯುಗದಲ್ಲಿ ಪ್ರಮುಖ ಪ್ರಶಸ್ತಿ ಗೆದ್ದ ಮೊದಲ ಕೆನಡಾದ ಆಟಗಾರ್ತಿ ಎನ್ನುವ ಖ್ಯಾತಿಗೆ ಆಂಡ್ರೀಸ್ಕು ಪಾತ್ರರಾದರು. ಇನ್ನೊಂದೆಡೆಗೆ ಸಾರ್ವಕಾಲಿಕ ದಾಖಲೆ ಗಳಿಸುವ ಹುಮ್ಮಸ್ಸಿನಲ್ಲಿದ್ದ ಸೆರೆನಾ ವಿಲಿಯಮ್ಸ್ ನಿರಾಸೆಯಾಯಿತು. ಈ ಪ್ರಶಸ್ತಿಯನ್ನು ಅವರು ಗೆದ್ದಿದ್ದರೆ ಮಾರ್ಗರೆಟ್ ಕೋರ್ಟ್‌ನ 24 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟುತ್ತಿದ್ದರು.
ಫೈನಲ್ ಪಂದ್ಯದಲ್ಲಿ ಸೋತ ನಂತರ ಮಾತನಾಡಿದ ಸೆರೆನಾ ವಿಲಿಯಮ್ಸನ್ ಬಿಯಾಂಕಾ ಆಂಡ್ರೀಸ್ಕು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು' ಬಿಯಾಂಕಾ ನಂಬಲಸಾಧ್ಯ ಪಂದ್ಯವನ್ನು ಆಡಿದರು. ಅಭಿನಂದನೆಗಳು, ನಾನು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ. ನಾನು ಉತ್ತಮವಾಗಿ ಆಡಬಹುದಿತ್ತು ಎಂದು ಹೇಳಿದರು.