IPL 2024: ಜನರಿಗೆ ಐಪಿಎಲ್ ಇಷ್ಟವಾಗಲು ಅಸಲಿ ಕಾರಣ ಇದುವೇ.. ಸತ್ಯ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ

Virat Kohli reveals why people like IPL: ವಿರಾಟ್ 2008 ರಿಂದ ಆರ್‌ಸಿಬಿ ಜೊತೆ ಇದ್ದಾರೆ. ತಂಡದ ನಾಯಕತ್ವವನ್ನೂ ನಿಭಾಯಿಸಿದ್ದಾರೆ. ಆದರೆ ಇದುವರೆಗೆ ಒಂದೇ ಒಂದು IPL ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಕೊಹ್ಲಿ, 66 ರಲ್ಲಿ ಗೆದ್ದರೆ, 70 ರಲ್ಲಿ ಸೋತಿದ್ದಾರೆ.

Written by - Bhavishya Shetty | Last Updated : Mar 9, 2024, 05:03 PM IST
    • ಅತ್ಯಂತ ಜನಪ್ರಿಯ ಲೀಗ್ ಮಾರ್ಚ್ 22 ರಿಂದ ಪ್ರಾರಂಭ
    • ವಿರಾಟ್ ಕೊಹ್ಲಿ ಐಪಿಎಲ್‌’ನ ಜನಪ್ರಿಯತೆ ಮತ್ತು ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ
    • ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌’ಗೆ ಮರಳುವ ಸಾಧ್ಯತೆ ಇದೆ
IPL 2024: ಜನರಿಗೆ ಐಪಿಎಲ್ ಇಷ್ಟವಾಗಲು ಅಸಲಿ ಕಾರಣ ಇದುವೇ.. ಸತ್ಯ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ  title=
Virat Kohli

Virat Kohli reveals why people like IPL: ಐಪಿಎಲ್ 2024ರ ಆರಂಭಕ್ಕೆ ದಿನಗಣನೆ ಶುರುವಾಗಿದೆ ಉಳಿದಿದೆ. ವಿಶ್ವದ ಅತ್ಯಂತ ಜನಪ್ರಿಯ ಲೀಗ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಐಪಿಎಲ್‌’ನ ಜನಪ್ರಿಯತೆ ಮತ್ತು ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: 6 ಮಕ್ಕಳಿದ್ದರೂ 92ನೇ ವಯಸ್ಸಲ್ಲಿ 5ನೇ ಮದುವೆಗೆ ಸಜ್ಜಾದ ಜಗತ್ತಿನ ಖ್ಯಾತ ಉದ್ಯಮಿ!

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌’ಗೆ ಮರಳುವ ಸಾಧ್ಯತೆ ಇದೆ. 17ನೇ ಆವೃತ್ತಿಯ ಆರಂಭದ ಮೊದಲು, ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, "ನನಗೆ ಐಪಿಎಲ್ ಮೇಲೆ ತುಂಬಾ ಪ್ರೀತಿ ಇದೆ. ಇದರಲ್ಲಿ ನೀವು ಅನೇಕ ಹೊಸ ಆಟಗಾರರೊಂದಿಗೆ ಆಡುತ್ತೀರಿ. ದೀರ್ಘಕಾಲದಿಂದ ತಿಳಿದಿರುವ ಮತ್ತು ನಿಮ್ಮ ದೇಶದವರಲ್ಲದ ಅನೇಕ ಆಟಗಾರರೊಂದಿಗೆ ಆಡುತ್ತೀರಿ. ಜತೆಗೆ ಆಟಗಾರರು ಮತ್ತು ಅಭಿಮಾನಿಗಳ ನಡುವೆ ವಿಶೇಷವಾದ ಸಂಪರ್ಕವಿರುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಐಪಿಎಲ್ ಅನ್ನು ಇಷ್ಟಪಡುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಹೂವಿನ ಪುಡಿಗೆ ತೆಂಗಿನೆಣ್ಣೆ ಬೆರಸಿ ಹಚ್ಚಿ… ಅರ್ಧ ಗಂಟೆಯಲ್ಲಿ ಬಿಳಿಕೂದಲು ಕಡು ಕಪ್ಪಾಗಿ ಸೊಂಪಾಗಿ ಹೊಳೆಯುತ್ತೆ!

ವಿರಾಟ್ 2008 ರಿಂದ ಆರ್‌ಸಿಬಿ ಜೊತೆ ಇದ್ದಾರೆ. ತಂಡದ ನಾಯಕತ್ವವನ್ನೂ ನಿಭಾಯಿಸಿದ್ದಾರೆ. ಆದರೆ ಇದುವರೆಗೆ ಒಂದೇ ಒಂದು IPL ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಕೊಹ್ಲಿ, 66 ರಲ್ಲಿ ಗೆದ್ದರೆ, 70 ರಲ್ಲಿ ಸೋತಿದ್ದಾರೆ. ಇನ್ನು ಕೊಹ್ಲಿ ಆಡಿರುವ 237 ಐಪಿಎಲ್ ಪಂದ್ಯಗಳಲ್ಲಿ ಏಳು ಶತಕ ಮತ್ತು 50 ಅರ್ಧ ಶತಕಗಳ ಸಹಾಯದಿಂದ 7263 ರನ್ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ ಅವರು RCB ಪರ ಆಡಿದ 14 ಪಂದ್ಯಗಳಲ್ಲಿ 639 ರನ್ ಗಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News