Rohit Sharma ಕೆಳಗಿಳಿಸಿ ಈ ಆಟಗಾರನಿಗೆ ನಾಯಕತ್ವ ನೀಡಲು BCCI ಮಾಸ್ಟರ್ ಪ್ಲಾನ್!

Rohit Sharma T20 Captaincy: ಇದೀಗ, ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದರಲ್ಲಿ, ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಟಿ20 ಮಾದರಿಯಲ್ಲಿ ನಾಯಕತ್ವ ನೀಡುವ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಹೇಳಲಾಗಿದೆ

Written by - Bhavishya Shetty | Last Updated : Nov 19, 2022, 01:07 PM IST
    • ರೋಹಿತ್ ಶರ್ಮಾ ಅವರನ್ನು ಟಿ 20 ಮಾದರಿಯಲ್ಲಿ ನಾಯಕತ್ವದಿಂದ ತೆಗೆದುಹಾಕಲಾಗುತ್ತದೆ
    • ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟಿ20 ನಾಯಕತ್ವ ವಹಿಸಿಕೊಳ್ಳಬಹುದು
    • ಹೀಗೆಂದು ಭಾರೀ ಚರ್ಚೆಯಲ್ಲಿರುವ ಸುದ್ದಿ
Rohit Sharma ಕೆಳಗಿಳಿಸಿ ಈ ಆಟಗಾರನಿಗೆ ನಾಯಕತ್ವ ನೀಡಲು BCCI ಮಾಸ್ಟರ್ ಪ್ಲಾನ್!  title=
BCCI

Rohit Sharma T20 Captaincy: T20 ವಿಶ್ವಕಪ್-2022 ರಲ್ಲಿ ಕಳಪೆ ಪ್ರದರ್ಶನದ ನಂತರ, ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳಿಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿರಿಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ ಮತ್ತು ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಮಧ್ಯೆ ರೋಹಿತ್ ಶರ್ಮಾ ಅವರನ್ನು ಟಿ 20 ಮಾದರಿಯಲ್ಲಿ ನಾಯಕತ್ವದಿಂದ ತೆಗೆದುಹಾಕಲಾಗುತ್ತದೆ ಎಂಬ ವರದಿಗಳೂ ಇವೆ.

ಇದನ್ನೂ ಓದಿ: BCCI: ಚೇತನ್ ಶರ್ಮಾ ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಬಿಸಿಸಿಐ

ಇದೀಗ, ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದರಲ್ಲಿ, ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಟಿ20 ಮಾದರಿಯಲ್ಲಿ ನಾಯಕತ್ವ ನೀಡುವ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಹೇಳಲಾಗಿದೆ.

ಹಾರ್ದಿಕ್ ಪಾಂಡ್ಯಗೆ ನಾಯಕತ್ವ!

ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟಿ20 ನಾಯಕತ್ವ ವಹಿಸಿಕೊಳ್ಳಬಹುದು. ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಅವರು ಟೀಂ ಇಂಡಿಯಾ ಸೀಮಿತ ಓವರ್‌ಗಳ ಸರಣಿಯನ್ನು ಆಡಬೇಕಿದೆ. ಈ ಪ್ರವಾಸದಲ್ಲಿ ಹಾರ್ದಿಕ್ ಟಿ20 ಮಾದರಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಶುಕ್ರವಾರದಂದು ವೆಲ್ಲಿಂಗ್ಟನ್‌ನಲ್ಲಿ ಸರಣಿಯ ಮೊದಲ ಪಂದ್ಯ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಟಾಸ್ ಇಲ್ಲದೇ ರದ್ದಾಯಿತು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ.

ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಹಾರ್ದಿಕ್ ಸಂಪೂರ್ಣವಾಗಿ ಫಿಟ್ ಆಗಿದ್ದು, 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಅವರು ಈಗಿನಿಂದಲೇ ಸಿದ್ಧರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ, ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, 'ನಾವು ಈಗಿನಿಂದಲೇ T20 ವಿಶ್ವಕಪ್-2024 ಗೆ ತಯಾರಿ ನಡೆಸಬೇಕಾಗಿದೆ. ಈ ಪಾತ್ರಕ್ಕೆ ಹಾರ್ದಿಕ್ ಸೂಕ್ತ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಮುಂದಿನ ಟಿ20 ಸರಣಿಗೂ ಮುನ್ನ ಆಯ್ಕೆ ಸಮಿತಿ ಸಭೆ ನಡೆಸಿ ಹಾರ್ದಿಕ್ ಅವರನ್ನು ಭಾರತ ತಂಡದ ನಾಯಕನನ್ನಾಗಿ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂಬುದು ಮೂಲಗಳ ಮಾಹಿತಿ.

ಶ್ರೀಲಂಕಾ ಸರಣಿಗೂ ಮುನ್ನ ಘೋಷಣೆ ಸಾಧ್ಯತೆ

ಮುಂದಿನ ವರ್ಷ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ರೋಹಿತ್ ಬದಲಿಗೆ ಹಾರ್ದಿಕ್‌ಗೆ ನಾಯಕತ್ವ ನೀಡುವ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ವೇಳೆ 2023ರ ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಅವರನ್ನು ಟಿ20 ನಾಯಕರನ್ನಾಗಿ ಮಾಡಲಾಗುವುದು. ಭಾರತ ಮತ್ತು ಶ್ರೀಲಂಕಾ ನಡುವೆ 3-3 ಏಕದಿನ ಪಂದ್ಯಗಳು ಮತ್ತು ಸರಣಿಗಳು ನಡೆಯಲಿವೆ. ರೋಹಿತ್ ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ನಾಯಕತ್ವವನ್ನು ಮುಂದುವರಿಸಲಿದ್ದಾರೆ.

ಇದನ್ನೂ ಓದಿ: ಕೊನೆಯಾಯ್ತೇ KL Rahul ಕ್ರಿಕೆಟ್ ಜೀವನ? ಆಯ್ಕೆದಾರರಿಗೆ BCCI ಈ ಪ್ರಶ್ನೆ ಕೇಳಿದ್ದೇಕೆ?

ರೋಹಿತ್ ನೀಡಿದ ಮಾಹಿತಿ?

ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್‌ನಲ್ಲಿ ತಮ್ಮ ಅತಿದೊಡ್ಡ ನಾಯಕತ್ವ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಫಲಿತಾಂಶವನ್ನು ಲೆಕ್ಕಿಸದೆ ಅವರನ್ನು ಹೊಸ ನಾಯಕನಾಗಿ ಘೋಷಿಸಲಾಗುವುದು. ಆದರೆ ರೋಹಿತ್ ಶರ್ಮಾ ಈ ನಿರ್ಧಾರದ ಬಗ್ಗೆ ತಿಳಿದಿದ್ದಾರೆಯೇ ಎಂದು ಬಿಸಿಸಿಐ ಅಧಿಕಾರಿಯನ್ನು ಕೇಳಿದಾಗ?, “ಇನ್ನೂ ಇಲ್ಲ. ಈ ಬಗ್ಗೆ ರೋಹಿತ್‌ಗೆ ಇನ್ನೂ ಮಾಹಿತಿ ನೀಡಿಲ್ಲ. ಅವರು ಈಗಷ್ಟೇ ಟಿ20 ವಿಶ್ವಕಪ್‌ನಿಂದ ವಾಪಸಾಗಿದ್ದಾರೆ. ನಾವು ಶೀಘ್ರದಲ್ಲೇ ಕೋಚ್, ಕ್ಯಾಪ್ಟನ್ ಅವರನ್ನು ಸಭೆಗೆ ಕರೆದು ನಂತರ ಅದರ ಬಗ್ಗೆ ಮಾತನಾಡುತ್ತೇವೆ” ಎಂದು ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News