Asia Cup 2021 Called Off: ಕೊರೊನಾ ವೈರಸ್ ಹಿನ್ನೆಲೆ ಮತ್ತೊಂದು ದೊಡ್ಡ ಟೂರ್ನಿ ರದ್ದು, ಮುಂದಿನ ಎರಡು ವರ್ಷ ನಡೆಯೋಲ್ಲ ಟೂರ್ನಾಮೆಂಟ್

Asia Cup 2021 Called Off: ಜೂನ್ ತಿಂಗಳಿನಲ್ಲಿ ಶ್ರೀಲಂಕಾದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಏಷ್ಯಾ ಕಪ್ ಟೂರ್ನಿಯನ್ನು ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ರದ್ದುಗೊಳಿಸಲಾಗಿದೆ.

Written by - Nitin Tabib | Last Updated : May 19, 2021, 08:08 PM IST
  • ಕೊರೊನಾ ಪ್ರಕೋಪದ ಹೊಡೆತಕ್ಕೆ ಸಿಲುಕಿದ ಮತ್ತೊಂದು ಕ್ರಿಕೆಟ್ ಟೂರ್ನಿ.
  • ಶ್ರೀಲಂಕಾದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಟೂರ್ನಿ
  • ಟೂರ್ನಿ ರದ್ದತಿಯ ಕುರಿತು ಘೋಷಣೆ ಮಾಡಿದೆ ಶ್ರೀಲಂಕಾ ಕ್ರಿಕೆಟ್ ಮಂಡಳಿ
Asia Cup 2021 Called Off: ಕೊರೊನಾ ವೈರಸ್ ಹಿನ್ನೆಲೆ ಮತ್ತೊಂದು ದೊಡ್ಡ ಟೂರ್ನಿ ರದ್ದು, ಮುಂದಿನ ಎರಡು ವರ್ಷ ನಡೆಯೋಲ್ಲ ಟೂರ್ನಾಮೆಂಟ್  title=
Asia Cup 2021 Called Off (File Photo)

ನವದೆಹಲಿ: Asia Cup 2021 Called Off - ಕ್ರಿಕೆಟ್ ನ ಮತ್ತೊಂದು ದೊಡ್ಡ ಟೂರ್ನಾಮೆಂಟ್ ಕೊರೊನಾ ಹೊಡೆತಕ್ಕೆ ಸಿಲುಕಿದೆ. ಜೂನ್ ತಿಂಗಳಿನಲ್ಲಿ ಶ್ರೀಲಂಕಾದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಏಷ್ಯಾ ಕಪ್ ಟೂರ್ನಿ (Asia Cup 2021) ಕೊರೊನಾ ವೈರಸ್ (Coronavirus Pandemic) ಹಿನ್ನೆಲೆ ರದ್ದುಗೊಂಡಿದೆ. ಕಳೆದ ವರ್ಷ ಈ ಟೂರ್ನಾಮೆಂಟ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಕಳೆದ ವರ್ಷವೂ ಕೂಡ ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಇದನ್ನು ರದ್ದುಗೊಳಿಸಲಾಗಿತ್ತು.

ಈ ಕುರಿತು ಹೇಳಿಕೆ ನೀಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯ (Sri Lankan Cricket Board) ಮುಖ್ಯ ಕಾರ್ಯದರ್ಶಿ ಆಶ್ಲೆ ಡಿ ಸಿಲ್ವಾ, " ಕೊರೊನಾ ವೈರಸ್ ಪ್ರಕೋಪದ (Covid-19 Pandemic) ಹಿನ್ನೆಲೆ ಪರಿಸ್ಥಿತಿ ಈ ಟೂರ್ನಾಮೆಂಟ್ ನಡೆಸಲು ಹಿತಕರವಾಗಿಲ್ಲ" ಎಂದಿದ್ದಾರೆ. ಏಷ್ಯಾ ಕಪ್ ರದ್ದತಿಯ ಕುರಿತು ಘೋಷಣೆ ಮಾಡಿರುವ ಡಿ ಸಿಲ್ವಾ, ಈ ಟೂರ್ನಿಯನ್ನು ಮುಂದಿನ ಎರಡು ವರ್ಷಗಳವರೆಗೆ ನಡೆಸಲಾಗುವುದಿಲ್ಲ ಎಂದಿದ್ದಾರೆ. ಏಕೆಂದರೆ ತಂಡಗಳು ಈಗಾಗಲೇ ತಮ್ಮ ಕಾರ್ಯಕ್ರಮಗಳ ಸೂಚಿಯನ್ನು ಸಿದ್ಧಪಡಿಸಿಕೊಂಡಿವೆ. ಹೀಗಿರುವಾಗ 2023ರ ವರ್ಲ್ಡ್ ಕಪ್ ಬಳಿಕ ಮಾತ್ರವೆ ಈ ಟೂರ್ನಿಯನ್ನು ಮತ್ತೆ ನಡೆಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಶೀಘ್ರದಲ್ಲಿಯೇ ಏಷ್ಯಾ ಕ್ರಿಕೆಟ್ (Cricket) ಒಕ್ಕೂಟ ಈ ಕುರಿತು ಅಧಿಕೃತ ಘೋಷಣೆ ಮಾಡಲಿದೆ ಎಂದು ಡಿ ಸಿಲ್ವಾ ಹೇಳಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕೋರೋಣ ವೈರಸ್ ತುಂಬಾ ವೇಗವಾಗಿ ಹರಡುತ್ತಿದೆ. ಹಲವು ದೇಶಗಳು ತಮ್ಮ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಿವೆ. ಈ ಹಿನ್ನೆಲೆ ಏಷ್ಯಾ ಕಪ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Covid-19 Vaccination To Corona Recovered Patients: Corona ಸೋಂಕಿನಿಂದ ಚೇತರಿಸಿಕೊಂಡವರಿಗೆ ಎಷ್ಟು ದಿನಗಳ ಬಳಿಕ ವ್ಯಾಕ್ಸಿನ್ ಸಿಗಲಿದೆ ಗೊತ್ತಾ?

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಭಾಗವಹಿಸುವುದು ಸಾಧ್ಯವಿರಲಿಲ್ಲ
ಏಷ್ಯಾ ಕಪ್ ರದ್ದುಗೊಳಿಸುವುದರ ಹಿಂದೆ ಟೀಂ ಇಂಡಿಯಾದ ಶೆಡ್ಯೂಲ್ ಕೂಡ ಒಂದು ಕಾರಣ ಎನ್ನಲಾಗುತ್ತಿದೆ. ಏಕೆಂದರೆ ಭಾರತೀಯ ತಂಡ ಜೂನ್ ನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಟವಾಡಲು ಇಂಗ್ಲೆಂಡ್ ಗೆ ತೆರಳುತ್ತಿದೆ. ಅಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಏಷ್ಯಾ ಕಪ್ ಟೂರ್ನಿಯಲ್ಲಿ ಒಂದು ವೇಳೆ ಭಾರತವೇ ಭಾಗವಹಿಸುವುದಿಲ್ಲ ಎಂದಾದರೆ, ಇದರಿಂದ ಆಯೋಜಕರಿಗೂ ಕೂಡ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇತ್ತು.

ಇದನ್ನೂ ಓದಿ-Corona ಬಳಿಕ ಮಹಾಮಾರಿ ಎಂದು ಘೋಷಿಸಲ್ಪಟ್ಟ Black Fungus, ಅಧಿಸೂಚನೆ ಜಾರಿಗೊಳಿಸಿದ ಸರ್ಕಾರ

ಭಾರತವೇ ಏಷ್ಯಾ ಕಪ್ ಗೆ ಸಿಕಂದರ್
ಟೀಂ ಇಂಡಿಯಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಬರ್ದಸ್ತ್ ದಾಖಲೆ ಹೊಂದಿದೆ ಎಂಬುದು ಇಲ್ಲಿ ವಿಶೇಷ. ಭಾರತ ಎಲ್ಲಕ್ಕಿಂತ ಹೆಚ್ಚು ಅಂದರೆ 7 ಬಾರಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 2018 ರಲ್ಲಿ ಕೊನೆಯ ಬಾರಿಗೆ ಭಾರತ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಭಾರತ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ದೇಶ ತಂಡವನ್ನು ಬಗ್ಗುಬಡಿದಿತ್ತು. ಇದಕ್ಕೂ ಮೊದಲು ಭಾರತ 1984, 1988, 1990-91, 1995, 2010, 2016 ಏಷ್ಯಾ ಕಪ್ ಟೂರ್ನಿಯನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ-Spain ನಲ್ಲಿ ಅಸ್ಟ್ರಾಜೆನಿಕಾ ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಫೈಸರ್ ಲಸಿಕೆಯ ಎರಡನೇ ಪ್ರಮಾಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News