ಏಕದಿನ ಸರಣಿ ಆರಂಭವಾಗುತ್ತಿದ್ದಂತೆ ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್!

Tim Paine Retirement: ಆಸ್ಟ್ರೇಲಿಯಾ ಪರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದ ಟಿಮ್ ಪೈನ್ ಅವರು ತಮ್ಮ ದೇಶಕ್ಕಾಗಿ ಒಟ್ಟು 35 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 2018 ರಿಂದ 2021 ರವರೆಗೆ 23 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ತಂಡದ ನಾಯಕರಾಗಿದ್ದರು. 2018 ರಲ್ಲಿ, ಸ್ಟೀವ್ ಸ್ಮಿತ್ ದಕ್ಷಿಣ ಆಫ್ರಿಕಾದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು.

Written by - Bhavishya Shetty | Last Updated : Mar 17, 2023, 03:25 PM IST
    • ಈ ನಡುವೆ ಆಸ್ಟ್ರೇಲಿಯಾದ ಅನುಭವಿ ಆಟಗಾರರೊಬ್ಬರು ನಿವೃತ್ತಿ ಘೋಷಿಸಿದ್ದಾರೆ.
    • ಆಸ್ಟ್ರೇಲಿಯಾ ತಂಡದ ಟೆಸ್ಟ್ ಮಾದರಿಯ ನಾಯಕರಾಗಿದ್ದ ಟಿಮ್ ಪೈನ್ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ.
    • ಕ್ವೀನ್ಸ್‌ಲ್ಯಾಂಡ್ ವಿರುದ್ಧ ಟ್ಯಾಸ್ಮೆನಿಯಾದ ಶೆಫೀಲ್ಡ್ ಶೀಲ್ಡ್ ಪ್ರಥಮ ದರ್ಜೆ ಪಂದ್ಯದ ನಂತರ ಅವರು ನಿವೃತ್ತಿ ಘೋಷಿಸಿದರು.
ಏಕದಿನ ಸರಣಿ ಆರಂಭವಾಗುತ್ತಿದ್ದಂತೆ ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ವಿಕೆಟ್ ಕೀಪರ್  ಕಂ ಬ್ಯಾಟ್ಸ್ ಮನ್! title=
Tim Paine

Tim Paine Retirement: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಏಕದಿನ ಸರಣಿ ಇಂದು ಭಾರತದಲ್ಲಿ ಆರಂಭವಾಗಿದೆ. ಈ ನಡುವೆ ಆಸ್ಟ್ರೇಲಿಯಾದ ಅನುಭವಿ ಆಟಗಾರರೊಬ್ಬರು ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಟೆಸ್ಟ್ ಮಾದರಿಯ ನಾಯಕರಾಗಿದ್ದ ಟಿಮ್ ಪೈನ್ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ವಿರುದ್ಧ ಟ್ಯಾಸ್ಮೆನಿಯಾದ ಶೆಫೀಲ್ಡ್ ಶೀಲ್ಡ್ ಪ್ರಥಮ ದರ್ಜೆ ಪಂದ್ಯದ ನಂತರ ಅವರು ನಿವೃತ್ತಿ ಘೋಷಿಸಿದರು.

ಇದನ್ನೂ ಓದಿ: Railways: ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ಕಿ.ಮೀ ಓಡುತ್ತದೆ? ರೈಲಿನ ಮೈಲೇಜ್ ಹೇಗಿದೆ ಗೊತ್ತಾ?

ಆಸ್ಟ್ರೇಲಿಯಾ ಪರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದ ಟಿಮ್ ಪೈನ್ ಅವರು ತಮ್ಮ ದೇಶಕ್ಕಾಗಿ ಒಟ್ಟು 35 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 2018 ರಿಂದ 2021 ರವರೆಗೆ 23 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ತಂಡದ ನಾಯಕರಾಗಿದ್ದರು. 2018 ರಲ್ಲಿ, ಸ್ಟೀವ್ ಸ್ಮಿತ್ ದಕ್ಷಿಣ ಆಫ್ರಿಕಾದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು.

ಈ ಘಟನೆಯ ನಂತರ ಟಿಮ್ ಪೈನ್ ಅವರನ್ನು ಆಸ್ಟ್ರೇಲಿಯಾದ ಟೆಸ್ಟ್ ನಾಯಕರನ್ನಾಗಿ ಮಾಡಲಾಯಿತು. ಆದರೆ ಟಿಮ್ ಪೈನ್ ಅವರಿಗೆ ಸಂಬಂಧಿಸಿದ ವಿವಾದವು ಚರ್ಚೆಗೆ ಬಂದಾಗ 2021 ರಲ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ವಾಸ್ತವವಾಗಿ, ಅವರು ಕ್ರಿಕೆಟ್ ಟ್ಯಾಸ್ಮೆನಿಯಾದ ಮಾಜಿ ಉದ್ಯೋಗಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದರು ಎಂದು ಭಾರೀ ಗದ್ದಲ ಉಂಟಾಗಿತ್ತು.

ಇದನ್ನೂ ಓದಿ: ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನ ಏಕದಿನ ಕ್ರಿಕೆಟ್ ಜೀವನ ಅಂತ್ಯ!

ಟಿಮ್ ಪೈನ್ 2010ರಲ್ಲಿ ಪಾಕಿಸ್ತಾನದ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಟಿಮ್ ತನ್ನ ವೃತ್ತಿಜೀವನದುದ್ದಕ್ಕೂ ಟೆಸ್ಟ್ ಪಂದ್ಯಗಳಲ್ಲಿ 32.63 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 92 ರನ್ ಆಗಿದೆ. ಪೆನ್ ವಿಕೆಟ್ ಹಿಂದೆ 157 ಆಟಗಾರರ ಕ್ಯಾಚ್‌ಗಳನ್ನು ಪಡೆದಿದ್ದಾರೆ, ಇದಲ್ಲದೇ 35 ಏಕದಿನ ಪಂದ್ಯಗಳನ್ನು ಸಹ ಆಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News