World Cup: ವಿದೇಶಿ ತಂಡದಲ್ಲಿ ವಿಶ್ವಕಪ್ ಆಡಲಿದ್ದಾರೆ ಭಾರತದ ಈ ಆಟಗಾರ

World Cup: ಪ್ರತಿಷ್ಠಿತ ODI ವಿಶ್ವಕಪ್‌ಗಾಗಿ ಇಡೀ ವಿಶ್ವವೇ ಕಾದು ಕುಳಿತಿದೆ. ಈ 12 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಬೇಕೆಂದು ಕೋಟ್ಯಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ. 

Written by - Yashaswini V | Last Updated : Sep 8, 2023, 07:43 AM IST
  • 2023ರ ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿರುವ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್‌ಗಾಗಿ ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ.
  • ಇತ್ತೀಚೆಗೆ ನೆದರ್‌ಲ್ಯಾಂಡ್‌ ಕೂಡ ತಂಡದ ಹೆಸರನ್ನು ಪ್ರಕಟಿಸಿದೆ
  • ನೆದರ್‌ಲ್ಯಾಂಡ್‌ನ 15 ಸದಸ್ಯರ ತಂಡದಲ್ಲಿ ಭಾರತೀಯರೊಬ್ಬರು ಸ್ಥಾನ ಪಡೆದಿದ್ದಾರೆ.
World Cup: ವಿದೇಶಿ ತಂಡದಲ್ಲಿ ವಿಶ್ವಕಪ್ ಆಡಲಿದ್ದಾರೆ ಭಾರತದ ಈ ಆಟಗಾರ  title=

World Cup: ODI ವಿಶ್ವ ಕಪ್-2023 ಇದೇ ಅಕ್ಟೋಬರ್ 05, 2023ರಿಂದ ಆರಂಭವಾಗಲಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ODI ವಿಶ್ವಕಪ್ ಪಂದ್ಯಗಳನ್ನು ಈ ವರ್ಷ ಭಾರತ ಆಯೋಜಿಸಲಿದೆ. ಈ ಐಸಿಸಿ ಟೂರ್ನಮೆಂಟ್ ನಲ್ಲಿ 12 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಬೇಕೆಂದು ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಒಡಿಐ ವಿಶ್ವಕಪ್ ಪಂದ್ಯಗಳಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಬಲಿಷ್ಠ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಟೂರ್ನಿ ಆಡಲಿದೆ. ಈ ವೇಳೆ ಈ ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗನೊಬ್ಬ ವಿದೇಶಿ ತಂಡದಲ್ಲಿ ಆಡುವುದನ್ನು ಕಾಣಬಹುದಾಗಿದೆ. 

ಹೌದು, 2023ರ ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿರುವ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್‌ಗಾಗಿ ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಇತ್ತೀಚೆಗೆ  ನೆದರ್‌ಲ್ಯಾಂಡ್‌ ಕೂಡ ತಂಡದ ಹೆಸರನ್ನು ಪ್ರಕಟಿಸಿದ್ದು, ನೆದರ್‌ಲ್ಯಾಂಡ್‌ನ 15 ಸದಸ್ಯರ ತಂಡದಲ್ಲಿ 20 ವರ್ಷದ ಓಪನರ್ ವಿಕ್ರಮಜಿತ್ ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ. 

ಅಂತರಾಷ್ಟ್ರೀಯ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟ್‌ನ ಮ್ಯಾಜಿಕ್ ತೋರಿಸಿದ್ದ 20ರ ಹರೆಯದ ವಿಕ್ರಮ್ ಸಿಂಗ್ ಇದೀಗ ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದಲ್ಲಿ ಟೂರ್ನಿ ಆಡಲಿರುವ ನೆದರ್‌ಲ್ಯಾಂಡ್‌ ತಂಡದ ಭಾಗವಾಗಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ವಿಕ್ರಮ್ ಸಿಂಗ್ ಭಾರತದ ಪಂಜಾಬ್‌ ಮೂಲದವರು. 

ಇದನ್ನೂ ಓದಿ- ಏಷ್ಯಾ ಕಪ್ ಸೂಪರ್ 4 ಪಾಯಿಂಟ್ ಟೇಬಲ್’ನಲ್ಲಿ ಈ ತಂಡವೇ ಅಗ್ರಸ್ಥಾನಿ: ಎಷ್ಟು ಅಂಕ? ಇಲ್ಲಿದೆ ಪಟ್ಟಿ

ಪಂಜಾಬ್‌ನಲ್ಲಿ ಜನಿಸಿದ ವಿಕ್ರಮಜೀತ್ ಸಿಂಗ್:
ಜನವರಿ 9, 2003 ರಂದು ಪಂಜಾಬ್‌ನ ಚೀಮಾ ಖುರ್ದ್‌ನಲ್ಲಿ ಜನಿಸಿದ ವಿಕ್ರಮಜೀತ್ ಸಿಂಗ್ ಸುಮಾರು 7 ವರ್ಷಗಳ ಕಾಲ ತಮ್ಮ ಗ್ರಾಮದಲ್ಲಿಯೇ ಇದ್ದರು. ಬಳಿಕ ವಿಕ್ರಮಜೀತ್ ಸಿಂಗ್ ಅವರ ತಂದೆ ಹರ್‌ಪ್ರೀತ್ ಸಿಂಗ್ ವಿಕ್ರಮ್‌ನನ್ನು ನೆದರ್‌ಲ್ಯಾಂಡ್‌ಗೆ ಕರೆದೊಯ್ದರು. ಅತ್ಯಂತ ಪ್ರತಿಭಾವಂತ ಆಟಗಾರರಾಗಿದ್ದ ವಿಕ್ರಮ್ ತಮ್ಮ 11ನೇ ವಯಸ್ಸಿನಲ್ಲಿ  ಅಂಡರ್ 12 ಕ್ರಿಕೆಟ್ ನಲ್ಲಿ ನೆದರ್‌ಲ್ಯಾಂಡ್‌ಗಾಗಿ  ಆಟವಾಡಿದರು. ಈ ಸಂದರ್ಭದಲ್ಲಿ ವಿಕ್ರಮಜಿತ್ ಸಿಂಗ್ ಪ್ರತಿಭೆಯನ್ನು ಗುರುತಿಸಿದ್ದ ಆಗಿನ ಕ್ಯಾಪ್ಟನ್ ಪೀಟರ್ ಬೋರೆನ್, ಬಳಿಕ ಅವರಿಗೆ 15ನೇ ವಯಸ್ಸಿನಲ್ಲಿ ನೆದರ್ಲ್ಯಾಂಡ್ಸ್-ಎ ತಂಡದಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದರಂತೆ. 

ವಿಕ್ರಮಜೀತ್ ಸಿಂಗ್ ಸಾಧನೆ: 
ಪ್ರಸ್ತುತ 20 ವರ್ಷ ವಯಸ್ಸಿನವರಾಗಿರುವ ವಿಕ್ರಮ್ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದುವರೆಗೂ 25 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ವಿಕ್ರಮ್ ಒಂದು ಶತಕ ಮತ್ತು 4 ಅರ್ಧ ಶತಕಗಳೊಂದಿಗೆ ಒಟ್ಟು 808 ರನ್ ಗಳಿಸಿದ್ದಾರೆ. ಇದಲ್ಲದೇ 8 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್‌ ಪ್ರತಿಭೆಯನ್ನು ಪ್ರದರ್ಶಿಸಿರುವ ಇವರು 76 ರನ್ ಗಳಿಸಿದ್ದಾರೆ. ಅಲ್ಲದೆ ಏಕದಿನದಲ್ಲಿ 7 ವಿಕೆಟ್ ಗಳನ್ನು ಕಬಳಿಸಿದ್ದಾರೆ. 

ಗಮನಾರ್ಹವಾಗಿ, ನೆದರ್ಲೆಂಡ್ಸ್ ತಂಡ ಐದನೇ ಬಾರಿಗೆ ವಿಶ್ವಕಪ್‌ನ ಭಾಗವಾಗಿದ್ದು  ಈ ತಂಡ ಸೆಪ್ಟೆಂಬರ್ 30 ರಂದು ಆಸ್ಟ್ರೇಲಿಯಾ ಮತ್ತು ಅಕ್ಟೋಬರ್ 3 ರಂದು ಭಾರತ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ನಂತರ ಅಕ್ಟೋಬರ್ 6 ರಂದು ಹೈದರಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ನೆದರ್‌ಲ್ಯಾಂಡ್‌ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. 

ಇದನ್ನೂ ಓದಿ- ಧೋನಿ ಗರಡಿಯಲ್ಲಿ ಬೆಳೆದು 2019ರ ವಿಶ್ವಕಪ್ ಆಡಿದ್ದ 9 ಆಟಗಾರರಿಗೆ 2023ರ ತಂಡದಲ್ಲಿ ಇಲ್ಲ ಸ್ಥಾನ!

ನೆದರ್ಲ್ಯಾಂಡ್ಸ್ ವಿಶ್ವಕಪ್ ತಂಡ ಈ ಕೆಳಕಂಡಂತಿದೆ: 
ಸ್ಕಾಟ್ ಎಡ್ವರ್ಡ್ಸ್ (ಕ್ಯಾಪ್ಟನ್), ಮ್ಯಾಕ್ಸ್ ಓಡೋಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೀಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಕ್ವಿಬ್ ಬ್ಯಾರೆಸಿ ಜುಲ್ಫಿಕರ್, ಶರೀಜ್ ಅಹ್ಮದ್ ಮತ್ತು ಸಿಬ್ರಾಂಡ್ ಎಂಗಲ್‌ಬ್ರೆಕ್ಟ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News