ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಕಳೆದ ಆರು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವಿರಬಹುದು. ಆದರೆ ಅವರು ಮುಖ್ಯಾಂಶಗಳಿಂದ ದೂರವಿರಲಿಲ್ಲ. ಧೋನಿ ಅವರು ಕ್ರಿಕೆಟಿಗೆ ಯಾವಾಗ ಹಿಂದಿರುಗಲಿದ್ದಾರೆ ಎಂಬ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಆದಾಗ್ಯೂ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೇಂದ್ರ ಸಿಂಗ್ ಶೋಣಿ ಈ ಬಾರಿ ತಮ್ಮ ಮಗಳು ಝೀವಾ (Ziva Dhoni) ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಝೀವಾ ಗಿಟಾರ್ ನುಡಿಸುತ್ತಾ ಹಾಡನ್ನು ಹಾಡುತ್ತಿದ್ದಾರೆ.
ಧೋನಿಯ ಅಭಿಮಾನಿಗಳು ಧೋನಿಯ ಮಗಳ ಸುಂದರತೆಯನ್ನು ಪ್ರೀತಿಸುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಜೀವ ಕೂಡ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ "ಹಿಮವು ಅವಳ ಅತ್ಯುತ್ತಮವಾದುದನ್ನು ಹೊರತಂದಿದೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಶೇರ್ ಮಾಡಿದ್ದಾರೆ... ಝೀವಾರ ಈ ವಿಡಿಯೋ ನೋಡಿ ಅಭಿಮಾನಿಗಳು 'ಫಿದಾ' ಆಗಿದ್ದಾರೆ.
ಧೋನಿಯ ವಿಶೇಷ ಸಾಧನೆಗಳು:
ಧೋನಿ ಮೊದಲ ಬಾರಿಗೆ 2007 ರ ಟಿ 20 ವಿಶ್ವಕಪ್ ಅನ್ನು ಟೀಮ್ ಇಂಡಿಯಾಕ್ಕೆ ಗೆದ್ದರು. ಅದರ ನಂತರ, ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 2011 ರ ವಿಶ್ವಕಪ್ ಗೆದ್ದಿತು. ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2019 ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋತಿದೆ. ನಂತರ ಧೋನಿ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ.
ವಿಶ್ವಕಪ್ ನಂತರ ಧೋನಿ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡಾಗಿನಿಂದ, ಧೋನಿ ನಿವೃತ್ತಿ ಹೊಂದಲು ಮನಸ್ಸು ಮಾಡಿದ್ದಾರೆಯೇ ಎಂದು ಊಹಾಪೋಹಗಳು ಹೆಚ್ಚಾಗಿವೆ. ಧೋನಿ ನಿವೃತ್ತಿಯ ಬಗ್ಗೆ ಟೀಮ್ ಇಂಡಿಯಾ ಮತ್ತು ಮ್ಯಾನೇಜ್‌ಮೆಂಟ್ ಕೂಡ ನಿರಾಕರಿಸಿದೆ.
ಈ ಸಮಯದಲ್ಲಿ ಧೋನಿಯ ಭವಿಷ್ಯದ ನಿರ್ಧಾರವು ಐಪಿಎಲ್ ಅನ್ನು ಮಾತ್ರ ಅವಲಂಬಿಸಿದೆ ಎಂದು ಮಾತ್ರ ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿ ಅವರು ತಮ್ಮ ಉತ್ತಮ ಫಾರ್ಮ್ ತೋರಿಸಿದರೆ, ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ಅವರು ಆಡುವ ನಿರೀಕ್ಷೆಯಿದೆ.