AFG vs BAN: ಅಫ್ಘಾನಿಸ್ತಾನಕ್ಕೆ ಮಣಿದ ಬಾಂಗ್ಲಾದೇಶ..! ಆಸ್ಟ್ರೇಲಿಯಾದ ಸೆಮಿಸ್‌ ಕನಸು ಭಗ್ನ

AFG vs BAN: ಟಿ20 ವಿಸ್ವಕಪ್ 2024ರ ಸೂಪರ್‌-8 ಪಂದ್ಯ ಮಂಗಳವಾರ, ಜೂನ್‌ 25ರಂದು ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಮಧ್ಯೆ ನಡೆಯಿತು. ಬಾಂಗ್ಲಾ ತಂಡವನ್ನು ಮಣಿಸುವ ಮೂಲಕ ಅಫ್ಘಾನಿಸ್ತಾನ ತಂಡ ಇತಿಹಾಸ ಸೃಷ್ಟಿಸಿತು.  

Written by - Zee Kannada News Desk | Last Updated : Jun 25, 2024, 12:19 PM IST
  • ಟಿ20 ವಿಸ್ವಕಪ್ 2024ರ ಸೂಪರ್‌-8 ಪಂದ್ಯ ಮಂಗಳವಾರ, ಜೂನ್‌ 25ರಂದು ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಮಧ್ಯೆ ನಡೆಯಿತು.
  • ಬಾಂಗ್ಲಾ ದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಭರ್ಜರಿ ಆಟವಾಡಿ ರೋಚಕ ಗೆಲುವು ಸಾಧಿಸಿದೆ.
  • ಆಸಿಸ್‌ ಸೆಮಿಫೈನಲ್‌ಗೆ ಎಂಟ್ರಿ ಕೊಡುವ ಕನಸು ನುಚ್ಚು ನೂರಾಗಿದೆ.
 AFG vs BAN: ಅಫ್ಘಾನಿಸ್ತಾನಕ್ಕೆ ಮಣಿದ ಬಾಂಗ್ಲಾದೇಶ..! ಆಸ್ಟ್ರೇಲಿಯಾದ ಸೆಮಿಸ್‌ ಕನಸು ಭಗ್ನ title=

AFG vs BAN: ಟಿ20 ವಿಸ್ವಕಪ್ 2024ರ ಸೂಪರ್‌-8 ಪಂದ್ಯ ಮಂಗಳವಾರ, ಜೂನ್‌ 25ರಂದು ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಮಧ್ಯೆ ನಡೆಯಿತು. ಬಾಂಗ್ಲಾ ತಂಡವನ್ನು ಮಣಿಸುವ ಮೂಲಕ ಅಫ್ಘಾನಿಸ್ತಾನ ತಂಡ ಇತಿಹಾಸ ಸೃಷ್ಟಿಸಿತು.

ಬಾಂಗ್ಲಾ ದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಭರ್ಜರಿ ಆಟವಾಡಿ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಅಫ್ಘಾನಿಸ್ತಾನ ತಂಡ ಗುಂಪು 1 ರ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಕಾರಣ ಆಸಿಸ್‌ನ ಸೆಮಿಫೈನಲ್‌ ಕನಸು ಭಗ್ನವಾಗಿದೆ.

ಟಾಸ್‌ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್‌ ಖಾನ್‌ ಮೊದಲು ಬ್ಯಾಟಿಂಗ್‌ ಮಾಡುವ ನಿರ್ಧಾರ ಮಾಡಿದ್ದರು. ನಿಗದಿತ 20 ಓವರ್‌ಗಳಲ್ಲಿ ಅಫ್ಘಾನಿಸ್ತಾನ ತಂಡ 5 ವಿಕೆಟ್‌ ನಷ್ಟಕ್ಕೆ ಕೇವಲ 116 ರನ್‌ ಗಳಿಸುವಲ್ಲಿ ಶಕ್ತವಾಯಿತು. 117 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಬಾಂಗ್ಲಾ ದೇಶ ತಂಡ ಅವಸರವಾಗಿ ಗುರಿ ತಲುಪುವ ನಿರ್ಧಾರ ಮಾಡಿತ್ತು. 

ಬಾಂಗ್ಲಾ ತಂಡದ ಪರ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದ ಆಟಗಾರರು. ಮೊದಲ 3 ಓವರ್‌ಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದರು. ಈ ಮೂಲಕ ಮೂರು ಓವರ್‌ಗಳಲ್ಲಿ 31 ರನ್‌ ಕಲೆಹಾಕಿದರು. ದುಡುಕಿನಲ್ಲಿ ಆಟವಾಡುತ್ತಿದ್ದ ಬಾಂಗ್ಲಾ ತಂಡಕ್ಕೆ ನವೀನ್‌ ಉಲ್‌ ಹಕ್‌ ಬ್ಯಾಕ್‌ ಟು ಬ್ಯಾಕ್‌ ಎರಡು ವಿಕೆಟ್‌ ಪಡೆಯುವ ಮೂಲಕ ಶಾಕ್‌ ಕೊಟಿದ್ದರು.

ಮೊದಲ ಎರಡು ವಿಕೆಟ್‌ ಕಳೆದುಕೊಂಡ ಬಾಂಗ್ಲಾ ತಂಡ ನಂತರ ಕುಗ್ಗಿ ಹೋಯಿತು. ಅಫ್ಘಾನಿಸ್ತಾನ್‌ ತಂಡದ ಬೌಲರ್‌ಗಳ ದಾಳಿಗೆ ಎದುರಾಳಿ ತಂಡದ ಬೌಲರ್‌ಗಳು ಬೆಚ್ಚಿಬಿದ್ದರು. ನಂತರ ಬಂದ ನಾಲ್ಕು ಆಟಗಾರರು ಒಂದು ರನ್‌ ಕೂಡ ಕಲೆಹಾಕದೆ ಟಕ್‌ ಔಟ್‌ ಆದರು. 

ಇದನ್ನೂ ಓದಿ: Rohith Sharma: ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ಹಿಟ್‌ಮ್ಯಾನ್‌..!

ಸೋಲು ಭೀತಿಯಲ್ಲಿದ ಬಾಂಗ್ಲಾ ತಂಡಕ್ಕೆ ಮಳೆ ದೊಡ್ಡ ಶಾಕ್‌ ಕೊಟ್ಟಿತ್ತು. ಪಂದ್ಯದ ವೇಳೆ ಮಳೆ ಬಂದ ಕಾರಣ ಡಕ್‌ವರ್ತ್‌ ಲ್ಯೂಯೀಸ್‌ ನಿಯಮದ ಅಡಿ ಲೆಕ್ಕ ಹಾಕಲಾಯಿತು. ಇದರ ಪ್ರಕಾರ ಅಫ್ಘಾನಿಸ್ತಾನ ತಂಡ 2 ರನ್‌ಗಳಿಂದ ಮುಂದಿತ್ತು. 

ಇತ್ತ ಮೊದಲ ಓಪನರ್‌ ಆಗಿ ಬಾಂಗ್ಲಾದೇಶದ ಪರ ಕ್ರೀಸ್‌ಗೆ ಎಂಟ್ರಿ ಕೊಟ್ಟಿದ್ದ ಲಿಟನ್‌ ದಾಸ್‌ ಅರ್ಧಶತಕ ಗಳಿಸುವ ಮೂಲಕ ತಂಡಕ್ಕಾಗಿ ಏಕಾಂಗಿಯಾಗಿ ಹೋರಾಟ ನಡೆಸಿದರು. 49 ಎಸೆತಗಳನ್ನಾಡಿದ ಲಿಟನ್‌ 5 ಬೌಂಡರಿ ಹಾಗೂ 1 ಸಿಕ್ಸರ್‌ ಭಾರಿಸಿ ತಂಡಕ್ಕೆ ಗರಿಷ್ಟ ಮೊತ್ತ ಗಳಿಸಿಕೊಡುವಲ್ಲಿ ಮುಖ್ಯ  ಪಾತ್ರ ವಹಿಸಿದರು. ಆದರೆ ಲಿಟನ್‌ಗೆ ಯಾವುಧೆ ಆಟಗಾರ ಸಾತ್‌ ಕೊಡದ ಕಾರಣ ಬಾಂಗ್ಲಾ ತಂಡ 17.5 ಓವರ್‌ಗಳಿಗೆ 105 ರನ್‌ ಗಳಿಸಿ ಆಲೌಟ್‌ ಆಯಿತು. 

12 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಅಫ್ಘಾನಿಸ್ತಾನ ತಂಡ ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ, ಇದರಂದ ಆಸಿಸ್‌ ಸೆಮಿಫೈನಲ್‌ಗೆ ಎಂಟ್ರಿ ಕೊಡುವ ಕನಸು ನುಚ್ಚು ನೂರಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News