Asia Cup 2022: ಮೈದಾನದಲ್ಲೇ ತಾರಕಕ್ಕೇರಿದ ಲಂಕಾ-ಅಫ್ಘನ್ ಆಟಗಾರರ ಕಿತ್ತಾಟ: ಮಧ್ಯ ಪ್ರವೇಶಿಸಿದ ಅಂಪೈರ್!

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ, ಶ್ರೀಲಂಕಾ ವಿರುದ್ಧ 175 ರನ್ ಕಲೆ ಹಾಕಿತ್ತು. ಬಳಿಕ ಗೆಲುವಿನ ಗುರಿ ಬೆನ್ನತ್ತಿದ್ದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ, 5 ಎಸೆತಗಳು ಬಾಕಿ ಇರುವಾಗಲೇ 176 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿದೆ.

Written by - Bhavishya Shetty | Last Updated : Sep 4, 2022, 10:05 AM IST
    • ಏಷ್ಯಾ ಕಪ್ 2022 ರ ಸೂಪರ್-4 ಪಂದ್ಯಗಳು ಪ್ರಾರಂಭ
    • ಶ್ರೀಲಂಕಾ-ಅಫ್ಘನ್ ಪಂದ್ಯದ ವೇಳೆ ಆಟಗಾರರ ನಡುವೆ ವಾಗ್ವಾದ
    • ಮಧ್ಯಪ್ರವೇಶಿಸಿದ ಅಂಪೈರ್ ಪರಿಸ್ಥಿತಿ ತಿಳಿಗೊಳಿಸಿದರು
Asia Cup 2022: ಮೈದಾನದಲ್ಲೇ ತಾರಕಕ್ಕೇರಿದ ಲಂಕಾ-ಅಫ್ಘನ್ ಆಟಗಾರರ ಕಿತ್ತಾಟ: ಮಧ್ಯ ಪ್ರವೇಶಿಸಿದ ಅಂಪೈರ್!  title=
Asia Cup 2022

Asia Cup 2022: ಏಷ್ಯಾ ಕಪ್ 2022 ರ ಸೂಪರ್-4 ಪಂದ್ಯಗಳು ಪ್ರಾರಂಭವಾಗಿವೆ. ಶನಿವಾರ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವೆ ಹಣಾಹಣಿ ನಡೆದಿದ್ದು, ಲಂಕಾ 4 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ. ಜಿದ್ದಾಜಿದ್ದಿನ ಪಂದ್ಯವಾಗಿದ್ದು, ಕೊನೆಯವರೆಗೂ ಎರಡೂ ತಂಡಗಳು ಗೆಲುವಿಗೆ ಶತಾಯಗತಾಯ ಪ್ರಯತ್ನಿಸಿದ್ದವು. ಇನ್ನು ಇದೇ ಪಂದ್ಯದ ಸಂದರ್ಭದಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಘರ್ಷಣೆಯೂ ನಡೆದಿತ್ತು. ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ ಪಂದ್ಯದ ಮಧ್ಯದಲ್ಲಿ ಆಕ್ರೋಶಗೊಂಡರು.

ಇದನ್ನೂ ಓದಿ: IND vs PAK : ಪಂದ್ಯದ ಮೊದಲೆ ಪಾಕ್ ಟೀಂಗೆ ಬಿಗ್ ಶಾಕ್ : ತಂಡದಿಂದ ಈ ವೇಗದ ಬೌಲರ್ ಔಟ್

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ, ಶ್ರೀಲಂಕಾ ವಿರುದ್ಧ 175 ರನ್ ಕಲೆ ಹಾಕಿತ್ತು. ಬಳಿಕ ಗೆಲುವಿನ ಗುರಿ ಬೆನ್ನತ್ತಿದ್ದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ, 5 ಎಸೆತಗಳು ಬಾಕಿ ಇರುವಾಗಲೇ 176 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿದೆ.

ಆದರೆ ಪಂದ್ಯದ 17ನೇ ಓವರ್ ವೇಳೆಗೆ ರಶೀದ್ ಖಾನ್ ಕೋಪಗೊಂಡು ವಾಗ್ವಾದಕ್ಕೆ ಇಳಿದಿದ್ದಾರೆ. ಈ ಓವರ್‌ನಲ್ಲಿ ರಶೀದ್ ಬೌಲಿಂಗ್ ಮಾಡುತ್ತಿದ್ದರು. ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ದನುಷ್ಕಾ ಗುಣತಿಲಕ ಅವರ ಎಸೆತದಲ್ಲಿ ರಿವರ್ಸ್ ಸ್ವೀಪ್ ಫೋರ್ ಹೊಡೆದರು. ಇದರಿಂದ ರಶೀದ್ ಅಸಮಾಧಾನಗೊಂಡರು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ನಂತರ ಅಂಪೈರ್ ನಡುವಿಗೆ ಬರಬೇಕಾಯಿತು.

ಈ ಚರ್ಚೆಯ ನಂತರ ರಶೀದ್ ಸ್ವಲ್ಪವೂ ಶಾಂತವಾಗಿ ಉಳಿಲಿಲ್ಲ, ದನುಷ್ಕಾ ಗುಣತಿಲಕ ಅವರನ್ನು ರಶೀದ್ ಮುಂದಿನ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದರು. ದನುಷ್ಕ ಗುಣತಿಲಕ 20 ಎಸೆತಗಳಲ್ಲಿ 33 ರನ್‌ಗಳ ವೇಗದ ಇನ್ನಿಂಗ್ಸ್‌ ಆಡಿದರು. ಏಷ್ಯಾ ಕಪ್ 2022 ರಲ್ಲಿ, ಈ ಎರಡನೇ ಪಂದ್ಯವು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಿತು. ಇದಕ್ಕೂ ಮುನ್ನ ಗುಂಪು ಹಂತದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಅಫ್ಘಾನಿಸ್ತಾನ 8 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಶ್ರೀಲಂಕಾ ತಂಡ ಇದೀಗ ತನ್ನ ಮುಂದಿನ ಪಂದ್ಯವನ್ನು ಟೀಮ್ ಇಂಡಿಯಾ ವಿರುದ್ಧ ಸೆಪ್ಟೆಂಬರ್ 6 ರಂದು ಆಡಲಿದೆ.

ಇದನ್ನೂ ಓದಿ: Ravindra Jadeja : ಟೀಂ ಇಂಡಿಯಾಗೆ ಭಾರಿ ಹಿನ್ನಡೆ : ಟಿ20 ವಿಶ್ವಕಪ್‌ನಿಂದ ರವೀಂದ್ರ ಜಡೇಜಾ ಔಟ್

ಈ ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಶ್ರೀಲಂಕಾಗೆ 176 ರನ್‌ಗಳ ಗುರಿಯನ್ನು ನೀಡಿತ್ತು, ಅದನ್ನು ಶ್ರೀಲಂಕಾ 6 ವಿಕೆಟ್ ನಷ್ಟದಲ್ಲಿ ಸಾಧಿಸಿತು. ಇನ್ನು 5 ಎಸೆತಗಳು ಬಾಕಿ ಇರುವಂತೆಯೇ ಶ್ರೀಲಂಕಾ ಪಂದ್ಯವನ್ನು ಗೆದ್ದುಕೊಂಡಿತು. ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ ಗರಿಷ್ಠ 36 ರನ್ ಗಳಿಸಿದರೆ, ಪಾತುಮ್ ನಿಸಂಕ 35 ರನ್, ದನುಷ್ಕ ಗುಣತಿಲಕ 33 ರನ್ ಮತ್ತು ಭಾನುಕಾ ರಾಜಪಕ್ಸೆ 33 ರನ್ ಗಳಿಸಿದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News