ಒಂದೇ ಕೈಯಲ್ಲಿ ಸಿಕ್ಸರ್‌ ಸಿಡಿಸಿದ ರಿಷಬ್‌ ಪಂತ್!‌ ತಲೆಮೇಲೆ ಕೈಯಿಟ್ಟು... ಕಣ್ಣುಮಿಟುಕಿಸದೆ ಶಾಕ್‌ನಿಂದ ನೋಡಿದ ಬಾಂಗ್ಲಾ ಬೌಲರ್: ವಿಡಿಯೋ

Rishabh Pant One Handed Sixer: 26 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಊಟದ ವಿರಾಮದವರೆಗೆ 108 ಎಸೆತಗಳಲ್ಲಿ 82 ರನ್ ಗಳಿಸಿದರು. ಈ ಅವಧಿಯಲ್ಲಿ, ರಿಷಬ್ ಪಂತ್ 75.93 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು, 9 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು

Written by - Bhavishya Shetty | Last Updated : Sep 21, 2024, 04:17 PM IST
    • ಟೀಂ ಇಂಡಿಯಾದ ಬಲಿಷ್ಠ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ರಿಷಭ್ ಪಂತ್
    • ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ
    • ರಿಷಭ್ ಪಂತ್ ಒಂದು ಕೈಯಲ್ಲಿ ಸಿಕ್ಸರ್ ಹೊಡೆದ ವಿಡಿಯೋ ವೈರಲ್‌
ಒಂದೇ ಕೈಯಲ್ಲಿ ಸಿಕ್ಸರ್‌ ಸಿಡಿಸಿದ ರಿಷಬ್‌ ಪಂತ್!‌ ತಲೆಮೇಲೆ ಕೈಯಿಟ್ಟು... ಕಣ್ಣುಮಿಟುಕಿಸದೆ ಶಾಕ್‌ನಿಂದ ನೋಡಿದ ಬಾಂಗ್ಲಾ ಬೌಲರ್: ವಿಡಿಯೋ  title=
Rishabh Pant One Handed Six

Rishabh Pant One Handed Six: ಟೀಂ ಇಂಡಿಯಾದ ಬಲಿಷ್ಠ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ರಿಷಬ್‌ ಪಂತ್ ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇದನ್ನೂ ಓದಿ: ಸುನಿಲ್ ಗವಾಸ್ಕರ್ ತಂಗಿಯನ್ನು ಪಟಾಯಿಸಿ ವಿವಾಹವಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟ್ಸ್‌ಮನ್‌ ಇವರೇ ನೋಡಿ...! ಅಂದಹಾಗೆ ಈತ ಕನ್ನಡಿಗನೂ ಹೌದು

26 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಊಟದ ವಿರಾಮದವರೆಗೆ 108 ಎಸೆತಗಳಲ್ಲಿ 82 ರನ್ ಗಳಿಸಿದರು. ಈ ಅವಧಿಯಲ್ಲಿ, ರಿಷಬ್ ಪಂತ್ 75.93 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು, 9 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಇನ್ನು ಪಂತ್ ತಮ್ಮ ಇನ್ನಿಂಗ್ಸ್‌ʼನಲ್ಲಿ ಕೇವಲ ಒಂದು ಕೈಯಲ್ಲಿ ಸಿಕ್ಸರ್ ಹೊಡೆದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರೂ ನೋಡಿ ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನೂ ಓದಿ:  ಈ ಎಲೆಯನ್ನು ಮೂಸಿದರೆ ಸಾಕು... ವಾರ ಕಳೆದರೂ ಕಡಿಮೆಯಾಗದ ಶೀತ, ನೆಗಡಿ, ಕೆಮ್ಮು ಒಂದೇ ನಿಮಿಷದಲ್ಲಿ ಗುಣವಾಗುತ್ತದೆ! ಟ್ರೈ ಮಾಡಿ ನೋಡಿ

ಭಾರತದ ಎರಡನೇ ಇನ್ನಿಂಗ್ಸ್ ಸಮಯದಲ್ಲಿ, ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ 15 ನೇ ಓವರ್ನಲ್ಲಿ ಬೌಲ್ ಮಾಡಲು ಬಂದರು. ಮೆಹದಿ ಹಸನ್ ಮಿರಾಜ್ ಎಸೆದ ಈ ಓವರ್‌ʼನ ಮೊದಲ ಎಸೆತದಲ್ಲಿ ರಿಷಬ್ ಪಂತ್ ಒಂದು ಕೈಯಿಂದ ಅಬ್ಬರದ ಸಿಕ್ಸರ್ ಬಾರಿಸಿದರು. ಚೆಂಡು ಬೌಂಡರಿ ದಾಟಿದ್ದೇ ತಡ... ಪ್ರೇಕ್ಷಕರ ಸಂತಸಕ್ಕೆ ಮಿತಿಯೇ ಇರಲಿಲ್ಲ. ರಿಷಬ್ ಪಂತ್ ಒಂದೇ ಕೈಯಿಂದ ಬಾರಿಸಿದ ಈ ಅದ್ಭುತ ಸಿಕ್ಸರ್ ನೋಡಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಅಚ್ಚರಿಗೊಂಡರು. ಅಷ್ಟೇ ಅಲ್ಲದೆ, ಪಂತ್ ಅವರ ಈ ಸಿಕ್ಸರ್ ನೋಡಿ ಮೆಹದಿ ಹಸನ್ ಮಿರಾಜ್ ಕೂಡ ಅಚ್ಚರಿಗೊಂಡಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News