ಮಕ್ಕಳ ಸ್ಕೂಲ್ ಫೀಸ್ ದುಡ್ಡಲ್ಲಿ IPL ಟಿಕೆಟ್ ಖರೀದಿ: ಧೋನಿ ನೋಡಲು 64 ಸಾವಿರ ಖರ್ಚು ಮಾಡಿದ ಅಪ್ಪ! ಇದು ಅಭಿಮಾನವೋ… ಅಂಧಾಭಿಮಾನವೋ?

Father spends children's fees to see dhoni: ಅಂತೆಯೇ ಇತ್ತೀಚೆಗೆ ಘಟನೆಯೊಂದು ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ನಾಯಕ ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿ ಓರ್ವ ಅಭಿಮಾನಿ ಆಗಮಿಸಿದ್ದಾನೆ.

Written by - Bhavishya Shetty | Last Updated : Apr 12, 2024, 09:58 PM IST
    • ಕ್ರಿಕೆಟ್ ಲೋಕದಲ್ಲಿ ಎಂಎಸ್ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ
    • ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ
    • ತಂದೆ ಮತ್ತು ಆತನ ಮೂವರು ಹೆಣ್ಣುಮಕ್ಕಳು ಎಂಎಸ್ ಧೋನಿಯ ದೊಡ್ಡ ಅಭಿಮಾನಿಗಳು
ಮಕ್ಕಳ ಸ್ಕೂಲ್ ಫೀಸ್ ದುಡ್ಡಲ್ಲಿ IPL ಟಿಕೆಟ್ ಖರೀದಿ: ಧೋನಿ ನೋಡಲು 64 ಸಾವಿರ ಖರ್ಚು ಮಾಡಿದ ಅಪ್ಪ! ಇದು ಅಭಿಮಾನವೋ… ಅಂಧಾಭಿಮಾನವೋ? title=
msd fan

Father spends children's fees to see dhoni: ಕ್ರಿಕೆಟ್ ಲೋಕದಲ್ಲಿ ಎಂಎಸ್ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ. ಮೈದಾನಕ್ಕೆ ಕಾಲಿಟ್ಟರೆ ಸಾಕು ಆ ಅಭಿಮಾನ ಎಷ್ಟಿದೆ ಎಂಬುದು ಅರಿವಾಗುತ್ತದೆ. ಇನ್ನೂ ಕೆಲವರು ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಾಣಲು ಯಾವ ಮಟ್ಟದ ಸಾಹಸ ಕೂಡ ಮಾಡಲು ಸಿದ್ಧವಿರುತ್ತಾರೆ.

ಇದನ್ನೂ ಓದಿ:  ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಗರ್ಲ್ ಫ್ರೆಂಡ್ ಯಾರು ಗೊತ್ತಾ? ಕೊಹ್ಲಿ-ಅನುಷ್ಕಾಗೆ ಸಖತ್ ಕ್ಲೋಸ್ ಈಕೆ.. ಮೊದಲ ಬಾರಿಗೆ ಫೋಟೋ ರಿವೀಲ್

ಅಂತೆಯೇ ಇತ್ತೀಚೆಗೆ ಘಟನೆಯೊಂದು ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ನಾಯಕ ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿ ಓರ್ವ ಅಭಿಮಾನಿ ಆಗಮಿಸಿದ್ದಾನೆ.

ಅಂದಹಾಗೆ ತಂದೆ ಮತ್ತು ಆತನ ಮೂವರು ಹೆಣ್ಣುಮಕ್ಕಳು ಎಂಎಸ್ ಧೋನಿಯ ದೊಡ್ಡ ಅಭಿಮಾನಿಗಳು. ಇಡೀ ಕುಟುಂಬ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯವನ್ನು ಎಂಜಾಯ್ ಮಾಡಲು ನಿರ್ಧರಿಸಿತ್ತು. ಆದರೆ, ಸಕಾಲದಲ್ಲಿ ಟಿಕೆಟ್ ಖರೀದಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಬ್ಲಾಕ್ ಟಿಕೆಟ್ ಮೂಲಕ ಟಿಕೆಟ್ ಖರೀದಿಸಲು ನಿರ್ಧರಿಸಿ, ಪುತ್ರಿಯರ ಸ್ಕೂಲ್ ಫೀಜ್ ಎಂದು ಎತ್ತಿಟ್ಟ 64 ಸಾವಿರ ರೂ.ಅನ್ನು ಖರ್ಚು ಮಾಡಿದ್ದಾರೆ. ಬಳಿಕ ಮ್ಯಾಚ್ ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ:  ನಟಿ ಮಾನ್ವಿತಾ ಕಾಮತ್’ಗೆ ಕೂಡಿ ಬಂತು ಕಂಕಣಭಾಗ್ಯ: ಸಿನಿರಂಗದ ಈ ಖ್ಯಾತ ವ್ಯಕ್ತಿಯನ್ನೇ ಮದ್ವೆಯಾಗಲಿದ್ದಾರೆ ಟಗರು ಪುಟ್ಟಿ

ಸ್ಪೋರ್ಟ್ಸ್ ವಾಕ್ ಚೆನ್ನೈ ಜೊತೆ ಮಾತನಾಡಿದ ಆ ವ್ಯಕ್ತಿ, ಟಿಕೆಟ್ ಖರೀದಿಸಲು ಮಗಳ ಶಾಲಾ ಶುಲ್ಕವನ್ನು ತೆಗೆದುಕೊಂಡಿದ್ದೇನೆ. ಟಿಕೆಟ್ ಸಿಗದ ಕಾರಣ ಬ್ಲಾಕ್ ಟಿಕೆಟ್ ಖರೀದಿಸಿದ್ದೇನೆ. ಎಲ್ಲಾ ಟಿಕೆಟ್’ಗಳಿಗೆ 64,000 ರೂ. ಆಗಿದೆ. ಈಗ ಸ್ಕೂಲ್ ಫೀ ಕಟ್ಟಬೇಕು. ಆದರೆ ಎಂ.ಎಸ್.ಧೋನಿ ಅವರನ್ನು ಒಮ್ಮೆ ನೋಡಬೇಕು ಎಂದು ನನ್ನ ಮೂರು ಹೆಣ್ಣುಮಕ್ಕಳು ಅಂದುಕೊಂಡಿದ್ದೆವು. ಈಗ ನಮಗೆ ತುಂಬಾ ಸಂತೋಷವಾಗಿದೆ" ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News