IPL 2020: ಚೆನ್ನೈ ಸೂಪರ್ ಕಿಂಗ್ಸ್ ನ 12 ಸದಸ್ಯರು Coronavirus Positive

ಆದರೆ ಇವರಲ್ಲಿ ಇದುವರೆಗೆ ಎಷ್ಟು ಜನ ಆಟಗಾರರಿದ್ದಾರೆ ಹಾಗೂ ಎಷ್ಟು ಜನರು ಸಿಬ್ಬಂದಿಗಳಾಗಿದ್ದಾರೆ ಎಂಬ ಕುರಿತು ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಆದರೆ, ಈ ವರದಿಯ ಬಳಿಕ ತಂಡದಲ್ಲಿ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ.

Last Updated : Aug 28, 2020, 09:12 PM IST
IPL 2020: ಚೆನ್ನೈ ಸೂಪರ್ ಕಿಂಗ್ಸ್ ನ 12 ಸದಸ್ಯರು Coronavirus Positive title=

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2020 (IPL 2020) ಯುಎಇಯಲ್ಲಿ ಪ್ರಾರಂಭವಾಗಲು ಕೇವಲ 22 ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೆ, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ (CSK) 12 ಸದಸ್ಯರು ಅದಕ್ಕೂ ಮೊದಲು ನಡೆದ ಕರೋನಾ ವೈರಸ್ ಪರೀಕ್ಷೆಯಲ್ಲಿ ಸಕಾರಾತ್ಮಕವಾಗಿ ಕಂಡುಬಂದಿದ್ದಾರೆ. ಅವರಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕರೋನಾ ವೈರಸ್ ಪಾಸಿಟಿವ್ ಎಂದು ತಿಳಿದುಬಂದ ನಂತರ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತೆ ಸಂಪರ್ಕತಡೆಗೆ ಹೋಗಲು ತಿಳಿಸಲಾಗಿದೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ತಂಡದ 'ಒಟ್ಟು 12 ಸದಸ್ಯರು ಕರೋನಾ ವೈರಸ್ ಪಾಸಿಟಿವ್ ಕಂಡುಬಂದಿದ್ದಾರೆ. ಹೀಗಾಗಿ ಇಡೀ ತಂಡವನ್ನು ಮತ್ತೆ ಸಂಪರ್ಕತಡೆಗೆ ಹೋಗಲು ಸೂಚಿಸಲಾಗಿದೆ. ಚೆನ್ನೈನಲ್ಲಿ ನಡೆದ ಶಿಬಿರದ ಸಮಯದಲ್ಲಿ ಅವರು ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಘಟನೆಯನ್ನು ಖಚಿತಪಡಿಸಲು ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿಗಳೇ ಆಗಲಿ ಅಥವಾ ಬಿಸಿಸಿಐ ಅಧಿಕಾರಿಗಳೇ ಆಗಲಿ ನಿರಾಕರಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಗಸ್ಟ್ 21 ರಂದು ದುಬೈ ತಲುಪಿತ್ತು. 6 ದಿನಗಳ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ ನಂತರ ತಂಡ ತನ್ನ ಎಂದಿನ ಪ್ರ್ಯಾಕ್ಟಿಸ್ ಆರಂಭಿಸಿತ್ತು. ಐಪಿಎಲ್‌ನ 13 ನೇ ಆವೃತ್ತಿ ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ, ಆದರೆ ಬಿಸಿಸಿಐ ಇನ್ನೂ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

Trending News