Nag Panchmi 2022: ನಾಗಪಂಚಮಿ ಪೂಜೆಯ ದಿನಾಂಕ, ಶುಭ ಸಮಯ ಮತ್ತು ವಿಧಾನ ತಿಳಿಯಿರಿ

ಹಿಂದೂ ಧರ್ಮದಲ್ಲಿ ನಾಗಪಂಚಮಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶ್ರಾವಣದಲ್ಲಿ ಶಿವನ ನೆಚ್ಚಿನ ತಿಂಗಳಲ್ಲಿ ನಾಗಪಂಚಮಿಯನ್ನು ಆಚರಿಸಲಾಗುತ್ತದೆ. ಭೋಲೆನಾಥನು ತನ್ನ ಕೊರಳಲ್ಲಿ ಹಾವನ್ನು ಧರಿಸಿದ್ದಾನೆ. ಹೀಗಾಗಿ ಈ ವಿಶೇಷ ದಿನದಂದು ನಾಗದೇವರನ್ನು ಪೂಜಿಸಲಾಗುತ್ತದೆ.

Written by - Puttaraj K Alur | Last Updated : Jul 18, 2022, 03:53 PM IST
  • ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ನಾಗಪಂಚಮಿಯನ್ನು ಆಚರಿಸಲಾಗುತ್ತದೆ
  • ಶ್ರಾವಣ ಸೋಮವಾರದಂದು ಶಿವ-ಪಾರ್ವತಿ ಜೊತೆಗೆ ನಾಗದೇವತೆ ಪೂಜಿಸುವುದರಿಂದ ಹೆಚ್ಚಿನ ಲಾಭ
  • ಕಾಲಸರ್ಪ ದೋಷ ನಿವಾರಣೆಗೆ ಆರಾಧಿಸುವವರು ಚತುರ್ಥಿಯಿಂದಲೇ ಉಪವಾಸ ಪ್ರಾರಂಭಿಸಬೇಕು
Nag Panchmi 2022: ನಾಗಪಂಚಮಿ ಪೂಜೆಯ ದಿನಾಂಕ, ಶುಭ ಸಮಯ ಮತ್ತು ವಿಧಾನ ತಿಳಿಯಿರಿ title=

ನವದೆಹಲಿ: ಶ್ರಾವಣ ಸೋಮವಾರದ ಹೊರತಾಗಿ ನಾಗ ಪಂಚಮಿಯಂತಹ ಪ್ರಮುಖ ಹಬ್ಬವನ್ನು ಶ್ರಾವಣ ತಿಂಗಳಲ್ಲಿ ಆಚರಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ನಾಗಪಂಚಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಪಂಚಮಿ ತಿಥಿಯೂ ಶ್ರಾವಣ ಮಾಸದ ಮೊದಲ ಸೋಮವಾರದಂದು ಕುತೂಹಲಕಾರಿ ಕಾಕತಾಳೀಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರಾವಣ ಸೋಮವಾರದಂದು ಶಿವ-ಪಾರ್ವತಿಯರ ಜೊತೆಗೆ ನಾಗದೇವತೆಯನ್ನು ಪೂಜಿಸುವುದರಿಂದಲೂ ಹೆಚ್ಚಿನ ಲಾಭವಾಗುತ್ತದೆ. ಮತ್ತೊಂದೆಡೆ ನಾಗಪಂಚಮಿಯನ್ನು ಈ ವರ್ಷ 2 ಆಗಸ್ಟ್ 2022ರ ಮಂಗಳವಾರ ಆಚರಿಸಲಾಗುತ್ತದೆ.

ಕಾಲಸರ್ಪ ದೋಷ ನಿವಾರಣೆಗೆ ಉತ್ತಮ

ನಾಗಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ನಾಗದೇವತೆ ಮತ್ತು ಶಿವನ ಆಶೀರ್ವಾದ ದೊರೆಯುತ್ತದೆ. ಇದಲ್ಲದೆ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಯಾರ ಜಾತಕದಲ್ಲಿ ಕಾಲ ಸರ್ಪದೋಷ, ಅಕಾಲಿಕ ಮರಣ ದೋಷವಿದೆಯೋ ಅಂತಹ ಜನರು ನಾಗಪಂಚಮಿಯ ದಿನದಂದು ನಾಗಪೂಜೆ ಮಾಡಬೇಕು. ಇದಲ್ಲದೆ ತಮ್ಮ ಜಾತಕದಲ್ಲಿ ಕಾಲಸರ್ಪ ದೋಷ ಹೊಂದಿರುವವರು ನಾಗಪಂಚಮಿಯ ದಿನದಂದು ಅದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕು.

ಇದನ್ನೂ ಓದಿ: ಶ್ರಾವಣದಲ್ಲಿ ರೂಪುಗೊಳ್ಳಲಿರುವ ಗಜ ಕೇಸರಿ ಯೋಗದಿಂದ ಈ ಐದು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ನಾಗಪಂಚಮಿ 2022 ಪೂಜಾ ಮುಹೂರ್ತ

ಈ ವರ್ಷ ನಾಗಪಂಚಮಿಯ ದಿನದಂದು ಆಗಸ್ಟ್ 2ರ ಮಂಗಳವಾರದಂದು ಬೆಳಿಗ್ಗೆ 6:05ರಿಂದ 8:41ರವರೆಗೆ ಪೂಜಿಸಲು ಮಂಗಳಕರ ಸಮಯ. ಮತ್ತೊಂದೆಡೆ ಪಂಚಮಿ ತಿಥಿಯು ಆಗಸ್ಟ್ 2ರಂದು ಬೆಳಿಗ್ಗೆ 5:13ರಿಂದ ಪ್ರಾರಂಭವಾಗಿ ಆಗಸ್ಟ್ 3ರಂದು ಬೆಳಿಗ್ಗೆ 5:41ರವರೆಗೆ ಇರುತ್ತದೆ.

ನಾಗದೇವತೆಯನ್ನು ಹೇಗೆ ಪೂಜಿಸಬೇಕು?

ನಾಗಪಂಚಮಿಯಂದು ಉಪವಾಸ ಸಹ ಆಚರಿಸಲಾಗುತ್ತದೆ ಮತ್ತು ಕಾಲಸರ್ಪ ದೋಷ ನಿವಾರಣೆಗೆ ಆರಾಧಿಸುವವರು ಚತುರ್ಥಿಯಿಂದಲೇ ಉಪವಾಸ ಪ್ರಾರಂಭಿಸಬೇಕು. ಇದಕ್ಕಾಗಿ ಚತುರ್ಥಿಯಂದು ಒಂದು ಹೊತ್ತಿನ ಊಟವನ್ನು ಮಾಡಿ ಉಳಿದ ದಿನ ಉಪವಾಸ ಇಟ್ಟುಕೊಳ್ಳಬೇಕು. ಹಾಗೆಯೇ ಪಂಚಮಿಯಂದು ಇಡೀ ದಿನ ಉಪವಾಸ ಮಾಡಿ ಸಂಜೆ ಲಘು ಆಹಾರ ಸೇವಿಸಬೇಕು.

ಇದನ್ನೂ ಓದಿ: Shravan 2022: ಶ್ರಾವಣ ಉಪವಾಸಕ್ಕೆ ಈ ವಿಶೇಷ ಖೀರ್ ಮಾಡಿ, ಶಿವ ಪ್ರಸನ್ನನಾಗುತ್ತಾನೆ

ಪೂಜೆಗಾಗಿ ನಾಗದೇವತೆಯ ಚಿತ್ರ ಅಥವಾ ವಿಗ್ರಹ ಸ್ಥಾಪಿಸಿ, ನಂತರ ಸರ್ಪದೇವರನ್ನು ಆವಾಹಿಸಿ. ನಾಗದೇವರ ಮೂರ್ತಿಗೆ ಅರಿಶಿನ, ಅಕ್ಷತೆ, ತಿಲಕ ಹಚ್ಚಿ ಹೂ ಮತ್ತು ಧೂಪದ್ರವ್ಯ ಅರ್ಪಿಸಬೇಕು. ಹಾಲು-ಸಕ್ಕರೆ ನೈವೇದ್ಯ ಸಹ ಅರ್ಪಿಸಬೇಕು. ನಾಗ ದೇವತಾ ಕಥೆಯನ್ನು ಓದಲೇಬೇಕು. ಕೊನೆಯಲ್ಲಿ ನಾಗದೇವತೆಗೆ ಆರತಿ ಮಾಡಿ ಭಕ್ತಿಭಾವದಿಂದ ಪೂಜಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News