ಮನೆಯಲ್ಲಿನ ತಿಜೋರಿ ಯಾವಾಗಲೂ ಹಣದಿಂದ ತುಂಬಿ ತುಳುಕಬೇಕೆ? ಮನೆ ಬಾಗಿಲಿಗೆ ಈ ಒಂದು ಸಂಗತಿಯನ್ನು ಕಟ್ಟಿ!

Vastu Tips: ವಾಸ್ತು ಶಾಸ್ತ್ರದಲ್ಲಿ ಕೆಲ ಸುಲಭವಾದ ಮತ್ತು ಖಚಿತವಾದ ತಂತ್ರಗಳ ಕುರಿತು ಉಲ್ಲೇಖಿಸಲಾಗಿದ್ದು. ಅವುಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿಯ ಕೃಪೆಯಿಂದ ವ್ಯಕ್ತಿ ಶ್ರೀಮಂತನಾಗಬಹುದು. ಆತ ತನ್ನ ಜೀವನದಲ್ಲಿ ಎಲ್ಲಾ ರೀತಿಯ ಸುಖ-ಸಂತೋಷ ಮತ್ತು ಶಾಂತಿ ಅಥವಾ ನಮ್ಮಡಿಯನ್ನು ಕಾಣಬಹುದು (Spiritual News In Kannada).  

Written by - Nitin Tabib | Last Updated : Sep 16, 2023, 02:34 PM IST
  • ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯನೀಯ ಎಂದು ಪರಿಗಣಿಸಲಾಗಿದೆ.
  • ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ.
  • ಆದ್ದರಿಂದ ಯಾವ ಮನೆಯಲ್ಲಿ ತುಳಸಿ ಗಿಡವಿದೆಯೋ ಮತ್ತು ಅದನ್ನು ಪ್ರತಿನಿತ್ಯ ಪೂಜಿಸುತ್ತಾರೋ ಅಲ್ಲಿ ತಾಯಿ ಲಕ್ಷ್ಮಿ ಸದಾ ನೆಲೆಸುತ್ತಾಳೆ.
ಮನೆಯಲ್ಲಿನ ತಿಜೋರಿ ಯಾವಾಗಲೂ ಹಣದಿಂದ ತುಂಬಿ ತುಳುಕಬೇಕೆ? ಮನೆ ಬಾಗಿಲಿಗೆ ಈ ಒಂದು ಸಂಗತಿಯನ್ನು ಕಟ್ಟಿ! title=

ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಮೂಲೆಗೂ, ಮುಖ್ಯ ಬಾಗಿಲಿನಿಂದ ಹಿಡಿದು ಡ್ರಾಯಿಂಗ್ ರೂಮ್, ಡ್ರೆಸ್ಸಿಂಗ್ ರೂಮ್, ಬಾಲ್ಕನಿ, ಇತರೆ ಕೋಣೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಹೇಳಲಾಗಿದೆ. ಅವುಗಳ ಜೊತೆಗೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುವ ಮಾರ್ಗಗಳನ್ನೂ ಸಹ ವಿವರಿಸಲಾಗಿದೆ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ. ಮನೆಯವರು ಪ್ರಗತಿ ಹೊಂದುತ್ತಾರೆ. ಅವರ ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ಸಂಬಂಧಗಳು ಉತ್ತಮವಾಗಿರುತ್ತವೆ. ನೀವೂ ಕೂಡ ಶ್ರೀಮಂತರಾಗಲು ಮತ್ತು ಸಂತೋಷವಾಗಿರಲು ಬಯಸಿದರೆ, ವಾಸ್ತು ಶಾಸ್ತ್ರದಲ್ಲಿ ತಿಳಿಸಲಾದ ಒಂದು ಸುಲಭವಾದ ಕೆಲಸವನ್ನು ಮಾಡಿ ಸಾಕು.

ಮನೆಯ ಮುಖ್ಯ ಬಾಗಿಲಿನ ವಾಸ್ತು
ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ದ್ವಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇಲ್ಲಿಂದ ಸಂಪತ್ತು ಮತ್ತು ಧನಾತ್ಮಕ ಶಕ್ತಿಯ ದೇವತೆಯಾದ ಲಕ್ಷ್ಮಿ ದೇವಿಯು ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಮನೆಯ ಮುಖ್ಯ ದ್ವಾರಕ್ಕೆ ಸಂಬಂಧಿಸಿದಂತೆ ವಾಸ್ತು ನಿಯಮಗಳನ್ನು ಪಾಲಿಸಿದರೆ ತುಂಬಾ ಲಾಭ ಸಿಗುತ್ತದೆ.

ಮನೆಗೆ ತಾಯಿ ಲಕ್ಷ್ಮಿಯ ಆಗಮನ
ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯನೀಯ ಎಂದು ಪರಿಗಣಿಸಲಾಗಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದ ಯಾವ ಮನೆಯಲ್ಲಿ ತುಳಸಿ ಗಿಡವಿದೆಯೋ ಮತ್ತು ಅದನ್ನು ಪ್ರತಿನಿತ್ಯ ಪೂಜಿಸುತ್ತಾರೋ ಅಲ್ಲಿ ತಾಯಿ ಲಕ್ಷ್ಮಿ ಸದಾ ನೆಲೆಸುತ್ತಾಳೆ. ಇದಲ್ಲದೇ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಅಥವಾ ಮನೆಯಲ್ಲಿ ಜಗಳಗಳಿದ್ದರೆ ಮನೆಯ ಮುಖ್ಯ ದ್ವಾರದಲ್ಲಿ ಒಣಗಿದ ತುಳಸಿ ಬೇರನ್ನು ಕಟ್ಟಿಕೊಳ್ಳಿ. ಹೀಗೆ ಮಾಡುವುದರಿಂದ ಹಣವು ನಿಮ್ಮ ಮನೆಯತ್ತ ಚುಂಬಕದಂತೆ ಆಕರ್ಷಿತಗೊಳ್ಳುತ್ತದೆ. ಇದಲ್ಲದೆ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ಅಲ್ಲದೆ, ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ.

ಇದನ್ನೂ ಓದಿ-ಕೆಲವೇ ಗಂಟೆಗಳಲ್ಲಿ ಈ ರಾಶಿಗಳ ಜನರ ಜೀವನದಲ್ಲಿ ಸುದಿನಗಳ ಆರಂಭ, ಧನಲಕ್ಷ್ಮಿಯ ಸ್ವಾಗತಕ್ಕೆ ಈಗಲೇ ಸಿದ್ಧತೆ ಆರಂಭಿಸಿ!

ಇದಕ್ಕಾಗಿ ತುಳಸಿಯ ಬೇರನ್ನು ಗಂಗಾಜಲದಿಂದ ತೊಳೆದು ಸ್ವಲ್ಪ ಅಕ್ಕಿಯ ಜೊತೆಗೆ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ನಂತರ ಅದನ್ನು ಮುಖ್ಯ ಬಾಗಿಲಿನ ಹೊರಗೆ ನೇತು ಹಾಕಬೇಕು.

ಇದನ್ನೂ ಓದಿ-ಶೀಘ್ರದಲ್ಲಿಯೇ ಬುಧನ ರಾಶಿಗೆ ಕೇತು ಪ್ರವೇಶ, ಈ ರಾಶಿಗಳ ಜನರಿಗೆ ರಾಜ ಜೀವನ ಕರುಣಿಸಲು ಬರಲಿದ್ದಾಳೆ ಧನದ ಅಧಿದೇವತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News