Shukra Gochar 2024: ಮುಂದಿನ ಎರಡು ವಾರ ಈ ರಾಶಿಯವರ ಜೀವನದಲ್ಲಿ ಹರಿಯಲಿದೆ ಪ್ರೀತಿಯ ಹೊಳೆ, ವೃದ್ಧಿಯಾಗಲಿದೆ ಸಂಪತ್ತು

Shukra Gochar 2024: ಇತ್ತೀಚೆಗಷ್ಟೇ ಮೀನ ರಾಶಿಯನ್ನು ಪ್ರವೇಶಿಸಿರುವ ಶುಕ್ರನು ಮುಂದಿನ ಎರಡು ವಾರ ಇದೇ ರಾಶಿಯಲ್ಲಿ ಸಂಚರಿಸಲಿದ್ದು ಕೆಲವು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದ್ದು, ಜೀವನದಲ್ಲಿ ರಾಜ ಯೋಗವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Apr 5, 2024, 09:44 AM IST
  • ಶುಕ್ರನು 2024ರ ಮಾರ್ಚ್ 31ರಂದು ಮೀನ ರಾಶಿಗೆ ಪ್ರವೇಶಿಸಿದ್ದಾನೆ
  • ಶುಕ್ರ ಏಪ್ರಿಲ್ 24ರವರೆಗೆ ಮೀನ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ.
  • ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸಂಪತ್ತಿನ ಹೊಳೆಯೇ ಹರಿಯಲಿದೆ.
Shukra Gochar 2024: ಮುಂದಿನ ಎರಡು ವಾರ ಈ ರಾಶಿಯವರ ಜೀವನದಲ್ಲಿ ಹರಿಯಲಿದೆ ಪ್ರೀತಿಯ ಹೊಳೆ,  ವೃದ್ಧಿಯಾಗಲಿದೆ ಸಂಪತ್ತು  title=

Shukra Gochar 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಐಷಾರಾಮಿ, ಪ್ರೀತಿ, ಪ್ರಣಯಕಾರಕ ಶುಕ್ರ ಬಲವಾಗಿದ್ದಾಗ ಅವರ ಜೀವನದಲ್ಲಿ ಸುಖ-ಸಂಪತ್ತಿಗೆ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. 2024ರ ಮಾರ್ಚ್ 31ರಂದು ಮೀನ ರಾಶಿಗೆ ಪ್ರವೇಶಿಸಿರುವ ಶುಕ್ರನು ಏಪ್ರಿಲ್ 24ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವು ಕೆಲವು ರಾಶಿಯವರ ಜೀವನದಲ್ಲಿ ಪ್ರೀತಿಯ ಹೊಳೆ ಹರಿಸಲಿದ್ದು, ಸಂಪತ್ತು ವೃದ್ಧಿಯಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ....  

ಮೀನ ರಾಶಿಯಲ್ಲಿ ಶುಕ್ರ ಸಂಚಾರ: ಈ ರಾಶಿಯವರಿಗೆ ಸಿಗಲಿದೆ ನಿಜವಾದ ಪ್ರೀತಿ, ಹೆಚ್ಚಾಗಲಿದೆ ಸಂಪತ್ತು:- 
ವೃಷಭ ರಾಶಿ: 

ಶುಕ್ರ ರಾಶಿ ಪರಿವರ್ತನೆಯು (Shukra Rashi Parivartane) ವೃಷಭ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸಲಿದೆ. ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು, ಪ್ರತಿ ಕೆಲಸದಲ್ಲೂ ವಿಜಯ ಸಾಧಿಸುವಿರಿ. ನಿಮ್ಮ ಬಹುದಿನದ ಕನಸುಗಳು ಈಡೇರಲಿವೆ. 

ಕರ್ಕಾಟಕ ರಾಶಿ: 
ಶುಕ್ರ ಸಂಚಾರವು ಕರ್ಕಾಟಕ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲವನ್ನು ನೀಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ತೀರ್ಥಯಾತ್ರೆ ಕೈಗೊಳ್ಳುವ ಅವಕಾಶವೂ ಪ್ರಾಪ್ತಿಯಾಗಲಿದೆ. 

ಇದನ್ನೂ ಓದಿ- Surya Gochar 2024: ಸೂರ್ಯ ಸಂಚಾರದಿಂದ ಬೆಳಗಲಿದೆ ಈ ರಾಶಿಯವರ ಭಾಗ್ಯ, ತಿಂಗಳೆಲ್ಲಾ ಅದೃಷ್ಟ

ವೃಶ್ಚಿಕ ರಾಶಿ: 
ಶುಕ್ರ ರಾಶಿ ಪರಿವರ್ತನೆಯು ವೃಶ್ಚಿಕ ರಾಶಿಯ ಜನರ ಜೀವನದಲ್ಲಿ ಪ್ರೀತಿಯ (Love) ಹೊಳೆಯನ್ನು ಹರಿಸಲಿದೆ. ದಂಪತಿಗಳ ನಡುವೆ ಮೂಡಿದ್ದ ಭಿನ್ನಾಭಿಪ್ರಾಯಗಳು ಸರಿ ಹೋಗಲಿವೆ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. 

ಧನು ರಾಶಿ: 
ಶುಕ್ರ ಸಂಚಾರ ಬದಲಾವಣೆಯು ಧನು ರಾಶಿಯವರಿಗೆ ಭೂಮಿಯಿಂದ ಲಾಭ, ವಾಹನ ಖರೀದಿ ಯೋಗವೂ ಇದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಹೆತ್ತವರ ಆಶೀರ್ವಾದದಿಂದ ಹಣಕಾಸಿನ ಸ್ಥಿತಿಯೂ ಬಲಗೊಳ್ಳಲಿದೆ. 

ಇದನ್ನೂ ಓದಿ- 30 ವರ್ಷಗಳ ನಂತರ ಈ ರಾಶಿಗಳಿಗೆ ಯುಗಾದಿ ದಿನವೇ ರಾಜಯೋಗ... ಅಪಾರ ಹಣ ಸಂಪತ್ತು ಜೊತೆಗೆ ಎಲ್ಲ ಕೆಲಸದಲ್ಲೂ ವಿಜಯ, ಅದೃಷ್ಟವೆಲ್ಲ ನಿಮ್ಮದೇ!!

ಮೀನ ರಾಶಿ: 
ಶುಕ್ರ ಸಂಚಾರವು ಮೀನ ರಾಶಿಯ ಜನರಿಗೆ ವೃತ್ತಿ (Career) ಜೀವನದಲ್ಲಿ ಕೀರ್ತಿಯನ್ನು ಹೆಚ್ಚಿಸಲಿದೆ. ಇನ್ನೂ ಒಂಟಿಯಾಗಿರುವ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಯೋಗವೂ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News