Evening Vastu Tips: ಸೂರ್ಯಾಸ್ತದ ವೇಳೆ ಈ ಕೆಲಸ ಮಾಡಿದರೆ ದರಿದ್ರತನ ಬಡಿಯುತ್ತದೆ

Evening Tips: ಜನರು ಹಸಿವಾದಾಗ ಊಟ ಮಾಡುತ್ತಾರೆ, ನಿದ್ದೆ ಬಂದರೆ ನಿದ್ದೆಗೆ ಜಾರುತ್ತಾರೆ. ಕೆಲವೊಮ್ಮೆ ಹೊತ್ತಿಲ್ಲದ ಹೊತ್ತಿನಲ್ಲಿ ಈ ಕೆಲಸಗಳನ್ನು ಮಾಡಬಹುದು. ಆದರೆ ಜ್ಯೋತಿಷ್ಯದಲ್ಲಿ ಎಲ್ಲದಕ್ಕೂ ಸಮಯ ನಿಗದಿ ಮಾಡಲಾಗಿದೆ. ಅಂತೆಯೇ, ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.  

Written by - Chetana Devarmani | Last Updated : Jun 18, 2022, 05:55 PM IST
  • ಜನರು ಹಸಿವಾದಾಗ ಊಟ ಮಾಡುತ್ತಾರೆ, ನಿದ್ದೆ ಬಂದರೆ ನಿದ್ದೆಗೆ ಜಾರುತ್ತಾರೆ
  • ಕೆಲವೊಮ್ಮೆ ಹೊತ್ತಿಲ್ಲದ ಹೊತ್ತಿನಲ್ಲಿ ಈ ಕೆಲಸಗಳನ್ನು ಮಾಡಬಹುದು
  • ಸೂರ್ಯಾಸ್ತದ ವೇಳೆ ಈ ಕೆಲಸ ಮಾಡಿದರೆ ದರಿದ್ರತನ ಬಡಿಯುತ್ತದೆ
Evening Vastu Tips: ಸೂರ್ಯಾಸ್ತದ ವೇಳೆ ಈ ಕೆಲಸ ಮಾಡಿದರೆ ದರಿದ್ರತನ ಬಡಿಯುತ್ತದೆ  title=
ದರಿದ್ರತನ ಬಡಿಯುತ್ತದೆ 

Evening Tips: ಜನರು ಹಸಿವಾದಾಗ ಊಟ ಮಾಡುತ್ತಾರೆ, ನಿದ್ದೆ ಬಂದರೆ ನಿದ್ದೆಗೆ ಜಾರುತ್ತಾರೆ. ಕೆಲವೊಮ್ಮೆ ಹೊತ್ತಿಲ್ಲದ ಹೊತ್ತಿನಲ್ಲಿ ಈ ಕೆಲಸಗಳನ್ನು ಮಾಡಬಹುದು. ಆದರೆ ಜ್ಯೋತಿಷ್ಯದಲ್ಲಿ ಎಲ್ಲದಕ್ಕೂ ಸಮಯ ನಿಗದಿ ಮಾಡಲಾಗಿದೆ. ಅಂತೆಯೇ, ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ಕೆಲಸಗಳನ್ನು ಹೊತ್ತಿಲ್ಲದ ಹೊತ್ತಲ್ಲಿ ಮಾಡುವುದರಿಂದ ದರಿದ್ರತನ ಬಡಿಯಬಹುದು. ಅಲ್ಲದೇ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಈ ರೀತಿ ತುಳಸಿ ಒಣಗದಂತೆ ಕಾಪಾಡಿ, ಲಕ್ಷ್ಮೀ ನಾರಾಯಣ ಕೃಪೆಗೆ ಪಾತ್ರರಾಗಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಾಯಂಕಾಲ ಮಲಗಬಾರದು ಅಥವಾ ಕಸ ಗುಡಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ. ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ದುರ್ಗೆಯು ಸಂಜೆಯ ವೇಳೆಗೆ ಆಗಮಿಸುತ್ತಾರೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಆದ್ದರಿಂದ ಸಂಜೆ ವೇಳೆ ಏನು ಮಾಡಬಾರದು ಎಂದು ತಿಳಿಯೋಣ.

ಸಂಜೆ ಮಲಗಬೇಡ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಸಂಜೆ ಹೊತ್ತು ಮಲಗಬಾರದು. ಹೀಗೆ ಮಾಡುವುದರಿಂದ ವ್ಯಕ್ತಿ ಅನೇಕ ರೋಗಗಳಿಗೆ ಬಲಿಯಾಗುತ್ತಾನೆ. ಅಲ್ಲದೆ, ವ್ಯಕ್ತಿಯ ಆಯಸ್ಸು ಕೂಡ ಕಡಿಮೆಯಾಗುತ್ತದೆ. ಹಿಂದೂ ಧರ್ಮದ ಪ್ರಕಾರ, ಲಕ್ಷ್ಮಿ ದೇವಿಯು ಸೂರ್ಯಾಸ್ತ ಮತ್ತು ಸಂಜೆಯ ವೇಳೆ ಮನೆಗೆ ಆಗಮಿಸುತ್ತಾರೆ. ಇದರೊಂದಿಗೆ ಸಂಜೆ ಮನೆಯ ಬಾಗಿಲುಗಳನ್ನು ತೆರೆದಿಡಿ. 

ಇದನ್ನೂ ಓದಿ:Surya Gochar 2022: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಯವರು ಜಾಗರೂಕರಾಗಿರಿ

ಕಸ ಗುಡಿಸಬೇಡಿ: ಸೂರ್ಯಾಸ್ತದ ಸಮಯದಲ್ಲಿ ಮನೆಯಲ್ಲಿ ಕಸ ಗುಡಿಸಬೇಡಿ. ಅಂತಹ ಕೆಲಸವನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಬೇಸರಗೊಂಡು ಮನೆ ಬಿಟ್ಟು ಹೋಗುತ್ತಾಳೆ. ಈ ಸಮಯವು ದೇವರ ಪೂಜೆಗೆ ಉತ್ತಮವಾಗಿದೆ. ಈ ಸಮಯದಲ್ಲಿ ದೇವರ ಧ್ಯಾನ ಮಾಡಬೇಕು.

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News